Home » Paris Olympics 2024: ಒಲಿಂಪಿಕ್ಸ್‌ನಲ್ಲಿ ಮುಂದುವರೆದ ಭಾರತದ ಪದಕದ ಬೇಟೆ : ರೈಫಲ್‌ನಲ್ಲಿ ಕಂಚು ಗೆದ್ದ ಸ್ವಪ್ನಿಲ್

Paris Olympics 2024: ಒಲಿಂಪಿಕ್ಸ್‌ನಲ್ಲಿ ಮುಂದುವರೆದ ಭಾರತದ ಪದಕದ ಬೇಟೆ : ರೈಫಲ್‌ನಲ್ಲಿ ಕಂಚು ಗೆದ್ದ ಸ್ವಪ್ನಿಲ್

5 comments
Paris Olympics 2024

Paris Olympics 2024: ಈಗ ವಿಶ್ವದ ಚಿತ್ತ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಂಪಿಕ್ಸ್‌ ಗೇಮ್ಸ್ನತ್ತ ನೆಟ್ಟಿದೆ. ಅದರಲ್ಲೂ ಭಾರತೀಯ ಸಾಧನೆ ಬಗ್ಗೆ ದೇಶದ ನಾಗರೀಕರು ಕುತೂಹಲದಿಂದ ಎದುರುನೋಡುತ್ತಿದ್ದಾರೆ. ನಮ್ಮ ಕ್ರೀಡಾಪಟುಗಳು ಚೆನ್ನಾಗಿ ಆಡಿ ಪದಕ ತರಲಿ ಎಂದು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಈಗಾಗಲೇ ಎರಡು ಕಂಚಿನ ಪದಕ ಗೆದ್ದಿರುವ ಭಾರತೀಯರ ಸಾಲೀಗೆ ಇದೀಗ ಮೂರನೇ ಕಂಚು ಸೇರ್ಪಡೆಗೊಂಡಿದೆ. ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ (Paris Olympics) ಭಾರತ (India) 50 ಮೀ. ರೈಫ‌ಲ್‌ 3 ಪೊಸಿಶನ್‌ನಲ್ಲಿ (50m Rifle 3P) ಮೂರನೇ ಪದಕ ಗೆದ್ದುಕೊಂಡಿದೆ.

ಸ್ವಪ್ನಿಲ್‌ ಕುಸಾಲೆ (Swapnil Kusale) ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಸ್ವಪ್ನಿಲ್ ಅವರು 451.4 ಅಂಕ ಗಳಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಭಾರತ ಈ ಬಾರಿ ಗೆದ್ದ ಮೂರು ಕಂಚಿನ ಪದಕಗಳು ಶೂಟಿಂಗ್‌ನಿಂದಲೇ ಬಂದಿರುವುದು ವಿಶೇಷ. ಇದಕ್ಕೂ ಮೊದಲು ಮನು ಭಾಕರ್ (Manu Bhaker) ಎರಡು ಕಂಚಿನ ಪದಕ ಗೆದ್ದಿದ್ದರು. ಭಾರತೀಯ ಕ್ರೀಡಾಪಟುಗಳ ಪದಕದ ಬೇಟೆ ಇನ್ನಷ್ಟು ಮುಂದುವರೆಯಲಿ.

Hollywood Actress: ಈ ಖ್ಯಾತ ನಟಿ ತನ್ನನ್ನೇ ಕೊಲ್ಲೋಕೆ ಸುಪಾರಿ ಕೊಟ್ಟಿದ್ದಳಂತೆ! ಆಕೆ ಹೇಳಿದ ಕಾರಣ ಕೇಳಿದ್ರೆ ನೀವೇ ಶಾಕ್ ಆಗ್ತೀರಾ?

 

You may also like

Leave a Comment