Home » ಆರ್ ಸಿ ಬಿ ಕಪ್ ಗೆಲ್ಲುವವರೆಗೆ ಮದುವೆ ಆಗಲ್ಲ ಎಂದ ಯುವತಿ ; ಏನು ಈ ಪ್ರತಿಜ್ಞೆ !

ಆರ್ ಸಿ ಬಿ ಕಪ್ ಗೆಲ್ಲುವವರೆಗೆ ಮದುವೆ ಆಗಲ್ಲ ಎಂದ ಯುವತಿ ; ಏನು ಈ ಪ್ರತಿಜ್ಞೆ !

0 comments

ಐಪಿಎಲ್ ಹಬ್ಬ ಪ್ರಾರಂಭವಾಗಿದೆ. ಈ ಸತಿ ಕಪ್ಪ ನಮ್ಮದೆ ಎಂಬ ಕೂಗು ಹೆಚ್ಚಾಗಿದೆ. ಆರ್‌ಸಿಬಿ ತಂಡ ಒಮ್ಮೆಯೂ ಐಪಿಎಲ್‌ ಪ್ರಶಸ್ತಿ ಗೆದ್ದಿಲ್ಲ ಆದರೂ ಅಭಿಮಾನಿಗಳಿಗೆ ಕೊರತೆ ಇಲ್ಲ. ಆರ್ ಸಿ ಬಿ ಕಪ್ ಗೆದ್ದೆ ಗೆಲ್ಲುತ್ತದೆ ಎಂಬ ನಂಬಿಕೆಯಲ್ಲಿ ಜನ ಇದ್ದಾರೆ. ಆದರೆ ಇಲ್ಲೊಬ್ಬ ಹುಡುಗಿ ಕಠೋರ ಪ್ರತಿಜ್ಞೆ ಮಾಡಿದ್ದಾಳೆ ! ಏನು ಗೊತ್ತೆ ?

ನಿನ್ನೆ ಪಂದ್ಯದಲ್ಲಿ ಆರ್‌ಸಿಬಿ ತಂಡದ ಮಹಿಳಾ ಅಭಿಮಾನಿಯೊಬ್ಬರು ಪೋಸ್ಟರ್ ಅನ್ನು ಕೈಯಲ್ಲಿ ಹಿಡಿದಿದ್ದರು. ಇದೀಗ ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆರ್‌ಸಿಬಿ ಐಪಿಎಲ್ ಟ್ರೋಫಿ ಗೆಲ್ಲುವವರೆಗೂ ನಾನು ಮದುವೆಯಾಗುವುದಿಲ್ಲ” ಎಂದು ಬರೆಯಲಾಗಿದೆ. ಈಕೆ ಆರ್ ಸಿ ಬಿ ಕಪ್ ಗೆಲ್ಲುವವರೆಗೂ ನಾನು ಮದುವೆಯಾಗುವುದಿಲ್ಲ ಎಂದು ನಿರ್ಧಾರ ಮಾಡಿದ್ದಾಳೆ.

ಮಹಿಳಾ ಅಭಿಮಾನಿಯ ಪೋಸ್ಟರ್ ಹಾಗು ಆಕೆಯ ನಿರ್ಧಾರ ಎಲ್ಲರ ಗಮನ ಸೆಳೆದಿದೆ. ಇದೀಗ ಅದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಕೆಗೆ ಪ್ರತಿಜ್ಞೆಗೆ ಜನ ನಿಬ್ಬೆರಗಾಗಿದ್ದಾರೆ.

You may also like

Leave a Comment