Home » RCB ತಂಡದಲ್ಲಿ ಸತತ 15 ವರ್ಷದಿಂದ ಇದ್ದೇನೆ, ಏಕೆಂದರೆ…- ವಿರಾಟ್ ಕೊಹ್ಲಿ ಮನದಾಳದ ಮಾತು

RCB ತಂಡದಲ್ಲಿ ಸತತ 15 ವರ್ಷದಿಂದ ಇದ್ದೇನೆ, ಏಕೆಂದರೆ…- ವಿರಾಟ್ ಕೊಹ್ಲಿ ಮನದಾಳದ ಮಾತು

by Mallika
0 comments

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ
ಸತತ 15 ವರ್ಷಗಳಿಂದ ಆರ್‌ಸಿಬಿ ತಂಡದಲ್ಲಿದ್ದಾರೆ.
ವಿರಾಟ್ ಕೊಹ್ಲಿ 2008 ರಿಂದ ಆರ್‌ಸಿಬಿ ತಂಡದಲ್ಲಿದ್ದು, ಟೀಮ್ ನ ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ 2011ರಿಂದ ತಂಡದ ನಾಯಕರಾಗಿದ್ದಾರೆ ವಿರಾಟ್. ಅದಾದ ನಂತರ ಸತತ 10 ವರ್ಷಗಳ ಕಾಲ ಆರ್‌ಸಿಬಿ ತಂಡವನ್ನ ಮುನ್ನೆಡಿಸಿದ ಕೀರ್ತಿ ವಿರಾಟ್ ಗೆ ಇದೆ.

ಐಪಿಎಲ್‌ನ ಮೊದಲ ಸೀಸನ್‌ನಿಂದ ಆರ್‌ಸಿಬಿ ಪರ
ಆಡುತ್ತಿರುವ ಆಟಗಾರ ಅಂದರೆ ಅದು ವಿರಾಟ್ ಕೊಹ್ಲಿ. ಸತತ ಸೋಲುತ್ತಿರುವ ಆರ್ ಸಿಬಿ ಟೀಮ್ ಬಿಡುವ ಕುರಿತು ಕೇಳಿದಾಗ, ಯಾಕೆ ನೀವು ಇನ್ನೂ ಒಂದೇ ತಂಡದಲ್ಲಿ ಇದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ವಿರಾಟ್, ಒಂದು ಕ್ರೀಡೆ ಸೂಪರ್ ಸ್ಟಾರ್ ಸ್ಥಾನಮಾನವನ್ನ ತಂದು ಕೊಡುವ ಕ್ರೀಡೆ ಅಂದರೆ ಅದು ಕೇವಲ ಯಶಸ್ಸನ್ನೇ ಗಳಿಸುವುದಲ್ಲ ಎಂದು ಹೇಳಿದ್ದಾರೆ.

ಈ ಕುರಿತು ನಾನು ತುಂಬಾ ಯೋಚನೆ ಮಾಡಿದ್ದೇನೆ.
ನನಗೆ ಹರಾಜಿನಲ್ಲಿ ಬರಲು ತುಂಬಾ ಆಫರ್ ಇತ್ತು. ಆದರೆ ಎಲ್ಲರಿಗೂ ಒಂದಿಷ್ಟು ಸಮಯ ಇದೆ ಅಂದ್ಕೊಂಡೆ. ಎಲ್ಲರೂ ಬರುತ್ತಾರೆ, ಆಡುತ್ತಾರೆ ಹೋಗುತ್ತಾರೆ. ಅವರಂತಹ ಅನೇಕ ಆಟಗಾರರು ನಮ್ಮಲ್ಲಿ ಇದ್ದಾರೆ. ಅವರೂ ಅನೇಕ ಟ್ರೋಫಿಗಳನ್ನು ಗೆದ್ದಿದ್ದಾರೆ. ಆದರೆ ಅವರನ್ನು ಓಹ್..! ಅವನು ಐಪಿಎಲ್ ಚಾಂಪಿಯನ್, ಈತ ವಿಶ್ವ ಕಪ್ ಚಾಂಪಿಯನ್ ಎಂದು ಯಾರೂ ಕರೆಯುವುದಿಲ್ಲ. ನೀವು ಒಳ್ಳೆಯ ವ್ಯಕ್ತಿಯಾಗಿದ್ದಾಗ ಮಾತ್ರ ಜನರು ನಿಮ್ಮನ್ನು ಪ್ರೀತಿಸುತ್ತಾರೆ. ನೀವು ಒಳ್ಳೆಯವರಲ್ಲದಿದ್ದರೆ ಜನ ನಿಮ್ಮಿಂದ ದೂರ ಹೋಗುತ್ತಾರೆ. ಇದು ಜೀವನ ” ಎಂದಿದ್ದಾರೆ.

ನನ್ನ ವೃತ್ತಿಜೀವನದ ಆರಂಭದಲ್ಲಿ ಜಗತ್ತಿನ ಪ್ರಮುಖ
ಆಟಗಾರರೊಂದಿಗೆ ಆಡುವ ಅವಕಾಶವನ್ನು ಪಡೆದೆ. ಇದು ನನ್ನನ್ನು ಬೇರೊಂದು ಸ್ಥಾನಕ್ಕೆ ಕೊಂಡೊಯ್ಯಲು ಸಹಾಯ ಮಾಡಿತು. ಮಾತ್ರವಲ್ಲ ನನ್ನ ಆಟವನ್ನು ಗಂಭೀರವಾಗಿ ತೆಗೆದುಕೊಳ್ಳಲು ಸಾಧ್ಯವಾಯಿತು ಎಂದು ಐಪಿಎಲ್‌ನಿಂದ ಆದ ಸಹಾಯದ ಬಗ್ಗೆ ವಿರಾಟ್ ಹೇಳಿದ್ದಾರೆ.

You may also like

Leave a Comment