Home » Virat Kohli vs Gambhir: ಕೊಹ್ಲಿ ಪರ ಮೊಳಗಿದ ಜಯಘೋಷ- ಸಿಟ್ಟಿಗೆದ್ದ ಗೌತಮ್ ಗಂಭೀರ್ ಅಸಭ್ಯವಾಗಿ ಮಾಡಿದ್ದೇನು ಗೊತ್ತಾ?

Virat Kohli vs Gambhir: ಕೊಹ್ಲಿ ಪರ ಮೊಳಗಿದ ಜಯಘೋಷ- ಸಿಟ್ಟಿಗೆದ್ದ ಗೌತಮ್ ಗಂಭೀರ್ ಅಸಭ್ಯವಾಗಿ ಮಾಡಿದ್ದೇನು ಗೊತ್ತಾ?

2 comments
Virat Kohli vs Gambhir

Virat Kohli vs Gambhir:ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಬಿಜೆಪಿ ಸಂಸದ ಗೌತಮ್ ಗಂಭೀರ್ (Gambir )ಮತ್ತು ವಿರಾಟ್ ಕೊಹ್ಲಿ ನಡುವಿನ ಮುನಿಸು ಎಲ್ಲರಿಗೂ ಗೊತ್ತಿರುವಂತದ್ದೇ.ಇವರಿಬ್ಬರ ನಡುವೆ ಒಂದಲ್ಲ ಒಂದು ವಿಚಾರಕ್ಕೆ ಜಗಳಗಳು ಆಗುತ್ತಿರುತ್ತವೆ. ಇದೀಗ, ಗೌತಮ್ ಗಂಭೀರ್(Virat Kohli vs Gambhir) ನಡೆ ಕ್ರಿಕೆಟ್ ಪ್ರೇಮಿಗಳ ಕೋಪಕ್ಕೆ ಕಾರಣವಾಗಿದೆ.

ಏಷ್ಯಾ ಕಪ್ 2023 ರಲ್ಲಿ ನಡೆಯುತ್ತಿರುವ ಭಾರತ(India)ಮತ್ತು ನೇಪಾಳ(Nepal)ಪಂದ್ಯದ ವೇಳೆ ಈ ಗೌತಮ್ ಅನುಚಿತ ವರ್ತನೆ ತೋರಿದ ಘಟನೆ ನಡೆದಿದ್ದು, ಇದೀಗ ಈ ಅನುಚಿತ ವರ್ತನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ(Social Media)ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ (Gautam Gambhir) ವಿರಾಟ್ ಕೊಹ್ಲಿ (Virat Kohli)ಅಭಿಮಾನಿಗಳತ್ತ ಮಧ್ಯದ ಬೆರಳನ್ನು ತೋರಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡ ಘಟನೆ ವರದಿಯಾಗಿದೆ.

ಶ್ರೀಲಂಕಾದ ಪಲ್ಲೀಕಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಏಷ್ಯಾ ಕಪ್‌ನ ನೇಪಾಳ್‌ ವಿರುದ್ಧದ ಪಂದ್ಯದ ವೇಳೆ ಪಂದ್ಯದ ವಿಶ್ಲೇಷಣೆ, ಕಮೆಂಟರಿಗಾಗಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹಾಜರಾಗಿದ್ದರು. ಆದರೆ ಗೌತಮ್ ಗಂಭೀರ್ ಹೊದಲೆಲ್ಲಾ ಕೊಹ್ಲಿ ಅಭಿಮಾನಿಗಳು ಅವರನ್ನು ಆಗ್ಗಾಗ್ಗೆ ರೇಗಿಸುವುದನ್ನು ನಿಲ್ಲಿಸೋದಿಲ್ಲ.

ವೈರಲ್ ಆಗಿರುವ ವಿಡಿಯೋದಲ್ಲಿ ಫೋನಿನಲ್ಲಿ ಮಾತನಾಡುತ್ತ ತೆರಳುತ್ತಿರುವ ಸಂದರ್ಭ ಏಷ್ಯಾ ಕಪ್‌ನ ನೇಪಾಳ್‌ ವಿರುದ್ಧದ ಪಂದ್ಯದ ಸಂದರ್ಭ ಗಂಭೀರ್‌ ಮೈದಾನದಿಂದ ಹೊರಬರುವಾಗ ಕೊಹ್ಲಿ ಅಭಿಮಾನಿಗಳು ಗಂಭೀರ್‌ ಅವರನ್ನು ನೋಡಿದ ಕೂಡಲೇ ಕೊಹ್ಲಿ… ಕೊಹ್ಲಿ… ಎಂದು ಕೂಗಿದ್ದಾರೆ. ಈ ವೇಳೆ ಇದನ್ನು ಕೇಳಿ ಸಿಟ್ಟಿಗೆದ್ದ ಗಂಭೀರ್ ಅಭಿಮಾನಿಗಳತ್ತ ಮಧ್ಯದ ಬೆರಳನ್ನು ತೋರಿಸಿ ತೆರಳಿದ್ದಾರೆ. ಭಾರತ ಹಾಗೂ ನೇಪಾಳ ನಡುವಿನ ಪಂದ್ಯದ ವೇಳೆ ಘಟನೆ ನಡೆದಿದ್ದು, ಗಂಭೀರ್ ನಡೆಗೆ ಸಾಕಷ್ಟು ಖಂಡನೆ ವ್ಯಕ್ತವಾಗುತ್ತಿದೆ.ಗಂಭೀರ್ ಅವರ ಈ ಅಸಭ್ಯತೆ ವರ್ತನೆಗೆ ಎಲ್ಲಡೆ ಟೀಕೆಗಳು ವ್ಯಕ್ತವಾಗುತ್ತಿದೆ.

https://t.co/buI0jq9WJu

ಇದನ್ನೂ ಓದಿ:Soujanya Case: ಸೌಜನ್ಯ ಹೋರಾಟಕ್ಕೆ ಮುಸ್ಲಿಂ ನಾಯಕರ ಸಾಥ್- ಬೆಂಗಳೂರು ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯಗೆ ಮರು ತನಿಖೆಗೆ ಆಗ್ರಹ

You may also like

Leave a Comment