Home » Vinesh Phogat: ವಿನೇಶ್ ತರಬೇತಿಗಾಗಿ ಕೇಂದ್ರ ಖರ್ಚು ಮಾಡಿದ್ದು 75 ಲಕ್ಷ ರೂ. : ಫೋಗಟ್ ಅನರ್ಹತೆ ಹಿಂದೆ ಷಡ್ಯಂತ್ರ್ಯ- ಕಾಂಗ್ರೆಸ್ ಆರೋಪ

Vinesh Phogat: ವಿನೇಶ್ ತರಬೇತಿಗಾಗಿ ಕೇಂದ್ರ ಖರ್ಚು ಮಾಡಿದ್ದು 75 ಲಕ್ಷ ರೂ. : ಫೋಗಟ್ ಅನರ್ಹತೆ ಹಿಂದೆ ಷಡ್ಯಂತ್ರ್ಯ- ಕಾಂಗ್ರೆಸ್ ಆರೋಪ

4 comments
Vinesh Phogat

Vinesh Phogat: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್‌ ಪೊಗಟ್‌ ಅವರ ಪದಕದ ಕನಸು ಭಗ್ನಗೊಂಡ ಬೆನ್ನಲ್ಲೇ ಈ ವಿಚಾರ ಭಾರತದಲ್ಲಿ ರಾಜಕೀಯ ರೂಪ ತೆಗೆದುಕೊಂಡಿದೆ. ಅವರು, ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದ, ಬಿಜೆಪಿ ಮಾಜಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸಿದ್ದ ವಿಚಾರ ಎಲ್ಲರಿಗೂ ತಿಳಿದೇ ಇದೆ. ಈ ವಿಚಾರಕ್ಕೆ ಈಗ ವಿನೇಶ್ ವಿರುದ್ಧ ಷಡ್ಯಂತ್ರ್ಯ ನಡೆದಿದೆ ಎಂದು ಕಾಂಗ್ರೆಸ್ ಸಂಸದ ಬಲವಂತ್ ವಾಂಖೆಡೆ (Balwant Wankhede) ಆರೋಪ ಮಾಡಿದ್ದಾರೆ.

ವಿನೇಶ್‌ ಫೋಗಟ್‌ ಪದಕ (Olympic Medal) ಗೆದ್ದು ಬಂದ್ರೆ ಆಕೆಯನ್ನು ಸ್ವಾಗತಿಸಿ, ಗೌರವಿಸಬೇಕಾಗುತ್ತಿತ್ತು. ಇದು ನಡೆಯಬಾರದು ಎಂದು ಕೆಲವರ ಮನಸ್ಸಲ್ಲಿ ಇತ್ತು ಎಂದು ಬಲ್ವಂತ್ ವಾಂಖೆಡೆ ಹೇಳಿದರು. ಇದೇ ವೇಳೆ ವಿನೇಶ್ ಫೋಗಟ್ ಅನರ್ಹಗೊಳಿಸಿದ ವಿಚಾರವಾಗಿ ಕ್ರೀಡಾಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಲೋಕಸಭೆಯಲ್ಲಿ (Lok Sabha) ಪ್ರಸ್ತಾಪಿಸಿದರು. ವಿನೇಶ್ ವಿಚಾರದಲ್ಲಿ ಏನೆಲ್ಲಾ ಬೆಳವಣಿಗೆ ನಡೆಯಿತು ಅನ್ನೋದರ ಬಗ್ಗೆ ಲೋಕಸಭೆಯಲ್ಲಿ ಮಾಹಿತಿ ನೀಡಿದ್ರು. ವಿನೇಶ್‌ಗೆ ಒಳ್ಳೆ ತರಬೇತಿಯನ್ನೇ ನೀಡಲಾಗಿದೆ. ತರಬೇತಿ ನೀಡುವ ವಿಚಾರದಲ್ಲಿ ಯಾವುದೇ ಲೋಪವಾಗಿಲ್ಲ. ಕೇವಲ ವಿನೇಶ್‌ ಅವರ ತರಬೇತಿಗಾಗಿ ಕೇಂದ್ರ ಬರೋಬ್ಬರಿ 75 ಲಕ್ಷ ರೂ. ಖರ್ಚು ಮಾಡಿದೆ ಎಂದು ವಿವರಿಸಿದ್ರು.

ಆದರೆ ಇದಕ್ಕೆ ಒಪ್ಪದ ವಿಪಕ್ಷ ನಾಯಕರು ವಿನೇಶ್ ವಿಚಾರದಲ್ಲಿ ಕೇಂದ್ರಕ್ಕೆ ಒಳ್ಳೆ ಅಭಿಪ್ರಾಯ ಇಲ್ಲ ಎಂದು ದೂರಿದರು. ನಂತರ ವಿಪಕ್ಷ ಸದಸ್ಯರು ಈ ವಿಚಾರವಾಗಿ ಸಭಾತ್ಯಾಗ ಮಾಡಿದರು. ಬಳಿಕ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿರುವ ಬಗ್ಗೆ ಮಾಹಿತಿ ಇದೆ. ಅಸ್ವಸ್ಥರಾಗಿದ್ದ ವಿನೇಶ್‌ ಅವರನ್ನು ಆಸ್ಪತ್ರೆಗೆ ದಾಖಲಾಗಿತ್ತು. ಅಲ್ಲಿಗೆ ಭೇಟಿ ನೀಡದ ಭಾರತೀಯ ಒಲಿಂಪಿಕ್ಸ್‌ ಅಸೋಸಿಯೇಷನ್‌ ಮುಖ್ಯಸ್ಥೆ ಪಿ.ಟಿ ಉಷಾ ಅವರು, ಎಲ್ಲ ರೀತಿಯ ಅಗತ್ಯ ಕ್ರಮ ಹಾಗೂ ಸಹಕಾರ ನೀಡಲಾಗುವುದು ಎಂದು ಪೊಗಟ್‌ ಅವರಿಗೆ ಧೈರ್ಯ ತುಂಬಿದ್ದಾರೆ.

You may also like

Leave a Comment