Home » ಆರು ವರ್ಷಗಳ ಬಳಿಕ ಆನಂದ್‌ ಕಣಕ್ಕೆ

ಆರು ವರ್ಷಗಳ ಬಳಿಕ ಆನಂದ್‌ ಕಣಕ್ಕೆ

0 comments

ಕೊಲ್ಕೊತ್ತಾ: ಪ್ರಸ್ತುತ ಯುವ ಪೀಳಿಗೆಗೆ ಮಾರ್ಗದರ್ಶಕರಾಗಿರುವ 5 ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ಜನವರಿ 7ರಿಂದ 11ರವರೆಗೆ ನಡೆಯಲಿರುವ ಟಾಟಾ ಸ್ಟೀಲ್ 7ನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ.

ವಯಸ್ಸಿನ ಮಿತಿ ಮೀರಿದರೂ ಆಟದ ಕೌಶಲವನ್ನು ಕಾಪಿಟ್ಟುಕೊಂಡಿರುವ ಆನಂದ್, ಸ್ವದೇಶಿ ಮಿತ್ರ ಹಾಗೂ ಹಾಲಿ ವಿಶ್ವಚಾಂಪಿಯನ್ ಡಿ.ಗುಕೇಶ್ ಸೇರಿದಂತೆ ಪ್ರಬಲ ಸ್ಪರ್ಧಿಗಳ ಸವಾಲನ್ನು ಎದುರಿಸಲಿದ್ದಾರೆ. 2019ರಲ್ಲಿ ಕೊನೆಯ ದಾಗಿ ಟಾಟಾ ಸ್ಟೀಲ್ ಚೆಸ್ ಆಡಿರುವ ಆನಂದ್, ಭಾರತದ ಹೊಸ ಪೀಳಿಗೆಯ ಆಟಗಾರರೊಂದಿಗೆ ಸ್ಪರ್ಧಿಸಲು ಅಣಿಯಾಗಿದ್ದಾರೆ. ಭಾರತದಲ್ಲಿ ನಡೆಯಲಿ ರುವ ವೈಯಕ್ತಿಕ ಟೂರ್ನಿಯಲ್ಲಿ ಇದೇ ಮೊದಲ ಸಲ ಇಬ್ಬರು ವಿಶ್ವ ಚಾಂಪಿಯನ್ ಗಳು ಮುಖಾಮುಖಿಯಾಗುತ್ತಿದ್ದಾರೆ

You may also like