Home » Spirit Airlines Flight: ಅಜ್ಜಿಯ ನೋಡೋ ಆಸೆಯಿಂದ ಒಬ್ಬನೇ ವಿಮಾನ ಏರಿದ 6ರ ಬಾಲಕ – ಆದ್ರೆ ಹತ್ತಿದ್ದು ಮಾತ್ರ ಬೇರೆ ವಿಮಾನ, ನಂತರ ಏನಾಯ್ತು?!

Spirit Airlines Flight: ಅಜ್ಜಿಯ ನೋಡೋ ಆಸೆಯಿಂದ ಒಬ್ಬನೇ ವಿಮಾನ ಏರಿದ 6ರ ಬಾಲಕ – ಆದ್ರೆ ಹತ್ತಿದ್ದು ಮಾತ್ರ ಬೇರೆ ವಿಮಾನ, ನಂತರ ಏನಾಯ್ತು?!

3 comments
Spirit Airlines Flight

Spirit Airlines Flight: ಸಾಮಾನ್ಯವಾಗಿ ವಿಮಾನ ಪ್ರಯಾಣ(Air Travel) ಮಾಡುವಾಗ ಒಂದು ವಿಮಾನದ ಬದಲಿಗೆ ಬೇರೊಂದು ವಿಮಾನ ಹತ್ತುವುದು ತುಂಬಾ ವಿರಳವಾಗಿದೆ. ಆದರೆ, ಅಮೆರಿಕದಲ್ಲಿ ವಿಮಾನಯಾನ ಸಂಸ್ಥೆಯ (Airlines) ಸಿಬ್ಬಂದಿಯೊಬ್ಬ ಆರು ವರ್ಷದ ಬಾಲಕನನ್ನು ಬೇರೊಂದು ವಿಮಾನವನ್ನು ಹತ್ತಿಸಿ ಅಚಾತುರ್ಯ ನಡೆದ ಘಟನೆ ವರದಿಯಾಗಿದೆ.

ಬಾಲಕನೊಬ್ಬ ಪ್ರೀತಿಯ ಅಜ್ಜಿಯನ್ನು ಭೇಟಿಯಾಗಲು ವಿಮಾನ ಹತ್ತಿದ್ದು, ಆ ವಿಮಾನಯಾನ ಸಂಸ್ಥೆ ಸಿಬ್ಬಂದಿಯ ಅಚಾತುರ್ಯದಿಂದ ಸಮಸ್ಯೆ ಎದುರಿಸಿದ ಘಟನೆ ನಡೆದಿದೆ. ಮತ್ತೊಂದೆಡೆ, ಮೊಮ್ಮಗನನ್ನು ಕಾಣಲು ಎದುರು ನೋಡುತ್ತಿದ್ದ ಅಜ್ಜಿ ಮೊಮ್ಮಗನನ್ನು ಕಾಣದೇ ಗಾಬರಿಗೊಂಡಿದ್ದಾರೆ. ಅಮೆರಿಕದ ಫಿಲಾಡೆಲ್ಫಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಫೋರ್ಟ್‌ ಮೇಯರ್ಸ್‌ನಲ್ಲಿರುವ ಸೌತ್‌ವೆಸ್ಟ್‌ ಫ್ಲೊರಿಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಲಕ ಪ್ರಯಾಣ ಆರಂಭಿಸಿದ್ದಾನೆ. ಆದರೆ, ಸ್ಪಿರಿಟ್‌ ಏರ್‌ಲೈನ್ಸ್‌ ಸಿಬ್ಬಂದಿಯು ಬಾಲಕನನ್ನು ಒರಾಲ್ಡೋಗೆ ತೆರಳುತ್ತಿದ್ದ ವಿಮಾನಕ್ಕೆ ಹತ್ತಿಸಿಬಿಟ್ಟಿದ್ದಾನೆ. ಈ ಅಚಾತುರ್ಯದಿಂದ ಸ್ಪಿರಿಟ್‌ ಏರ್‌ಲೈನ್ಸ್‌ ಸಂಸ್ಥೆಯು ಕ್ಷಮೆಯಾಚನೆ ಮಾಡಿದೆ.

ಇದನ್ನು ಓದಿ: New Year Rules: ಹೊಸ ವರ್ಷಕ್ಕೆ​ ಬಿಗಿ ಬಂದೋ ಬಸ್ತ್​! ರೂಲ್ಸ್​ ಫಾಲೋ ಮಾಡಿಲ್ಲ ಅಂದ್ರೆ ಮುಗೀತು ಕಥೆ

ಬಾಲಕ ಹಾಗೂ ಆತನ ಅಜ್ಜಿಗೆ ಉಂಟಾದ ತೊಂದರೆಗೆ ಸ್ಪಿರಿಟ್‌ ಏರ್‌ಲೈನ್ಸ್‌ ಕ್ಷಮೆಯಾಚಿಸಿದ್ದು, ಸಿಬ್ಬಂದಿಯ ತಪ್ಪಿನಿಂದ ಬಾಲಕನು ಬೇರೊಂದು ವಿಮಾನ ಹತ್ತುವಂತಾಗಿದೆ. ಮೊಮ್ಮಗ ಬರುತ್ತಾನೆ ಎಂದು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಅಜ್ಜಿ ಗಂಟೆಗಟ್ಟಲೆ ಕಾದು ಕುಳಿತರೂ ಮೊಮ್ಮಗ ಬರಲಿಲ್ಲ. ಹೀಗಾಗಿ, ವಿಮಾನಯಾನ ಸಿಬ್ಬಂದಿಗೆ ಅಜ್ಜಿ ಹೇಳಿದ್ದಾರೆ. ಕೆಲ ಹೊತ್ತಿನ ಬಳಿಕ ನನ್ನ ಮೊಮ್ಮಗ ಬೇರೊಂದು ವಿಮಾನ ಹತ್ತಿರುವ, ಸುರಕ್ಷಿತವಾಗಿ ಲ್ಯಾಂಡ್‌ ಆಗಿರುವ ಕುರಿತು ಮಾಹಿತಿ ನೀಡಲಾಗಿದೆ.

ಕೆಲ ಗಂಟೆಗಳ ಬಳಿಕ ಆತನನ್ನು ಫೋರ್ಟ್‌ ಮೈಯರ್ಸ್‌ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗಿದೆ ಎಂದು ಆರು ವರ್ಷದ ಬಾಲಕನ ಅಜ್ಜಿ ತಿಳಿಸಿದ್ದಾರೆ. ವಿಮಾನದ ಸಿಬ್ಬಂದಿಯು ಬಾಲಕನಿಗೆ ರಕ್ಷಣೆ ನೀಡಿ ಆತನನ್ನು ಸಮಾಧಾನಪಡಿಸಲಾಗಿದೆ. ಅದೇ ರೀತಿ, ಆತನ ಕುಟುಂಬಸ್ಥರನ್ನು ಸಂಪರ್ಕಿಸಿ ನಡೆದಿರುವ ಘಟನೆಯ ಕುರಿತು ಮಾಹಿತಿ ನೀಡಲಾಗಿದೆ. ಸುರಕ್ಷಿತವಾಗಿ ಆತನನ್ನು ಅಜ್ಜಿಯ ಬಳಿ ಕಳುಹಿಸಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದು ಅದೇ ರೀತಿ ಪ್ರಕರಣವನ್ನು ತನಿಖೆಗೆ ಆದೇಶ ನೀಡಲಾಗಿದೆ.

You may also like

Leave a Comment