Home » Affordable Electric Cars: ಕಡಿಮೆ ಬೆಲೆಯ ಬೆಸ್ಟ್‌ ಕ್ವಾಲಿಟಿಯ ಎಲೆಕ್ಟ್ರಿಕ್ ಕಾರುಗಳಿವು !

Affordable Electric Cars: ಕಡಿಮೆ ಬೆಲೆಯ ಬೆಸ್ಟ್‌ ಕ್ವಾಲಿಟಿಯ ಎಲೆಕ್ಟ್ರಿಕ್ ಕಾರುಗಳಿವು !

0 comments

ಆಧುನಿಕ ಯುಗದಲ್ಲಿ ಎಲೆಕ್ಟ್ರಿಕ್ ವಾಹನದ ನಿರ್ವಹಣೆ ಸುಲಭ ಆಗಿರುವುದರಿಂದ ಜನರನ್ನು ಹೆಚ್ಚು ಆಕರ್ಷಿಸಿದೆ. ನೀವು ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಬಯಸಿದರೆ, ಮುಂದಿನ ದಿನಗಳಲ್ಲಿ ನೀವು ವಾಹನ ಖರೀದಿಸಲು ಹಲವಾರು ಆಯ್ಕೆಗಳಿವೆ. ಸದ್ಯ ಎಲೆಕ್ಟಿಕ್ ವಾಹನಗಳ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ ಇದಕ್ಕೆ ದಿನೇ ಪೆಟ್ರೋಲ್-ಡೀಸೆಲ್ ದರಗಳು ಹೆಚ್ಚುತ್ತಿರುವುದು ಸಹ ಒಂದು ಕಾರಣ ಆಗಿರಬಹುದು .

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಮೈಲೇಜ್ ನೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ವಾಹನಗಳ ಪಟ್ಟಿ ಇಲ್ಲಿ ನೀಡಲಾಗಿದೆ :

  • ಕಾರು ಮಾರುಕಟ್ಟೆಯಲ್ಲಿ ಅತ್ಯುತ್ತಮ ಕಾರುಗಳನ್ನು ಪರಿಚಯಿಸಿ ಖ್ಯಾತಿ ಪಡೆದಿರುವ ಮಾರುತಿ ಸುಜುಕಿ ಈ ಬಾರಿಯ ಆಟೋ ಎಕ್ಸ್ಪೋದಲ್ಲಿ ತನ್ನ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿದೆ. 4.2 ಮೀಟರ್‌ಗಿಂತಲೂ ಉದ್ದವಾಗಿರುವ ಹೊಸ ಮಾರುತಿ ಎಲೆಕ್ಟ್ರಿಕ್ ಎಸ್‌ಯುವಿ 60kWh ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಲಿದ್ದು, ಪೂರ್ಣ ಚಾರ್ಜ್‌ನಲ್ಲಿ 550 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಈ ಕಾರಿನ ಬೆಲೆ 13 ರಿಂದ 15 ಲಕ್ಷ ರೂ. ಎನ್ನಲಾಗಿದೆ.
  • ಭಾರತೀಯ ಎಲೆಕ್ಟ್ರಿಕ್ ಕಾರುಗಳ ಮಾರುಕಟ್ಟೆಯಲ್ಲಿ ಪ್ರಸ್ತುತ ಅತಿದೊಡ್ಡ ಇವಿ ಮಾರಾಟಗಾರರಾಗಿರುವ ಟಾಟಾ ಮೋಟಾರ್ಸ್ ಕಂಪನಿಯ ಟಿಯಾಗೋ ಇವಿ ಅಗ್ಗದ ದರದಲ್ಲಿ ಲಭ್ಯವಿರುವ ಅತ್ಯುತ್ತಮ ಕಾರುಗಳಲ್ಲಿ ಪ್ರಥಮ ಸ್ಥಾನದಲ್ಲಿದೆ. ಇದರ ಬೆಲೆ 8.49 ಲಕ್ಷ ರೂ.ಗಳಿಂದ 11.79 ಲಕ್ಷ ರೂ.ಗಳವರೆಗೆ ಇದೆ. ಈ ಕಾರು 19.2kWh ಮತ್ತು 24kWh ಎರಡು ಬ್ಯಾಟರಿ ಆಯ್ಕೆಗಳನ್ನು ಹೊಂದಿದೆ. ದೊಡ್ಡ ಬ್ಯಾಟರಿಯು ಫುಲ್ ಚಾರ್ಜ್‌ನಲ್ಲಿ 315 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ತಿಳಿಸಿದೆ.
  • ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೋಗೆ ಕಠಿಣ ಸ್ಪರ್ಧೆಯೊಡ್ಡಲು ಸಿಟ್ರೊಯೆನ್ ಕಂಪನಿಯಿಂದ ಸಿಟ್ರೊಯೆನ್ ಇಸಿ3 ಇವಿ ಅನ್ನು ಬಿಡುಗಡೆ ಮಾಡಲಾಗಿದೆ. ಇದು 29.2kWh ಬ್ಯಾಟರಿ ಪ್ಯಾಕ್ ಮಾಡಲಿದ್ದು ಇದು ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ 57bhp ಪವರ್ ಮತ್ತು 143nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸಂಪೂರ್ಣ ಚಾರ್ಜ್‌ನಲ್ಲಿ 320 ಕಿಮೀ ವ್ಯಾಪ್ತಿಯನ್ನು ನೀಡುವುದಾಗಿ ಕಂಪನಿ ತಿಳಿಸಿದೆ. ಈ ಕಾರ್ ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದ್ದು, ಇದರ ಬೆಲೆ ಸುಮಾರು 10-12 ಲಕ್ಷ ರೂ.ಗಳಿರಬಹುದು ಎಂದು ಅಂದಾಜಿಸಲಾಗಿದೆ.
  • ಖ್ಯಾತ ಎಂಜಿ ಕಂಪನಿಯು ತನ್ನ ತ್ರಿಬಲ್ ಡೋರ್ ನ ಎಂಜಿ ಏರ್ ಇವಿ ಅನ್ನು ಭಾರತದಲ್ಲಿ ಪರಿಚಯಿಸಲು ಸಜ್ಜಾಗಿದೆ. ಗಾತ್ರದಲ್ಲಿ ಚಿಕ್ಕದಾಗಿರುವ ಎಂಜಿ ಏರ್ ಇವಿಯ ಉದ್ದ ಸುಮಾರು 2.9 ಮೀಟರ್ ಆಗಿರುತ್ತದೆ. ಇದು ಸುಮಾರು 20-25kWh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರಲಿದೆ ಮತ್ತು ಪೂರ್ಣ ಚಾರ್ಜ್‌ನಲ್ಲಿ 200-300 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರ ಆರಂಭಿಕ ಬೆಲೆ 10 ಲಕ್ಷ ರೂ.ಗಳು.

ಈ ಮೇಲೆ ಪಟ್ಟಿ ಮಾಡಲಾಗಿರುವ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಮೈಲೇಜ್ ನೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ವಾಹನವಾಗಿದೆ.

You may also like

Leave a Comment