Nokia 105 Classic: ಮೊಬೈಲ್(Mobile) ಎಂಬ ಮಾಯಾವಿ ಬಹುತೇಕ ಹೆಚ್ಚಿನವರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿವೆ. ಅದರಲ್ಲಿಯೂ ಹೊಸ ಹೊಸ ವೈಶಿಷ್ಟ್ಯತೆ ಮೂಲಕ ಸ್ಮಾರ್ಟ್ ಫೋನ್ ಗಳು (Smart phone)ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ನೋಕಿಯಾ ಇದೀಗ 105 ಕ್ಲಾಸಿಕ್ ಫೋನ್(Nokia 105 Classic Phone)ಬಿಡುಗಡೆ ಮಾಡಿದ್ದು, ಯುಪಿಐ(UPI)ಪಾವತಿ ಸೇರಿದಂತೆ ಹಲವು ಫೀಚರ್ ಒಳಗೊಂಡಿದೆ.
ನೋಕಿಯಾ ಫೋನ್‌ಗಳ ʻಎಚ್‌ಎಂಡಿ ಗ್ಲೋಬಲ್ʼ, ಇಂದು ಫೀಚರ್ ಫೋನ್‌ಗಳ ಪಟ್ಟಿಗೆ ಅತ್ಯಾಕರ್ಷಕ ಹೊಸ ʻನೋಕಿಯಾ 105 ಕ್ಲಾಸಿಕ್ʼ ಗೆ ಸೇರ್ಪಡೆ ಮಾಡಿದೆ. ಈಗ ಕೇವಲ 999 ರೂಪಾಯಿಂದ ಪ್ರಾರಂಭವಾಗಿದೆ. ನೋಕಿಯಾ ಫೋನ್ ʻಯುಪಿಐʼ ಫೀಚರ್ ಒಳಗೊಂಡಿದ್ದು, ಸ್ಮಾರ್ಟ್‌ಫೋನ್ ಇಲ್ಲದೆಯೂ ʻಯುಪಿಐʼ ಪಾವತಿ ವಹಿವಾಟುಗಳನ್ನು ಸುರಕ್ಷಿತವಾಗಿ ಮತ್ತು ತಡೆರಹಿತವಾಗಿ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.
ʻನೋಕಿಯಾ 105 ಕ್ಲಾಸಿಕ್ʼ ಒಂದು ವರ್ಷದ ಬದಲಿ ಗ್ಯಾರಂಟಿ ದೊರೆಯಲಿದೆ. ʻನೋಕಿಯಾ 105 ಕ್ಲಾಸಿಕ್ʼ ಫೋನ್ 800 ಎಂಎಎಚ್ ಬ್ಯಾಟರಿಯನ್ನು ಒಳಗೊಂಡಿದ್ದು, ವೈರ್‌ಲೆಸ್ ರೇಡಿಯೋ, ಅತ್ಯುತ್ತಮ ಬ್ಯಾಟರಿ ಬಾಳಿಕೆ, ಸರಳತೆ ಮತ್ತು ಕೈಗೆಟುಕುವ ಬೆಲೆಯ ಅಂಶಗಳನ್ನು ಒಳಗೊಂಡಿದೆ. ಇದರ ಜೊತೆಗೆ ವೈರ್‌ಲೆಸ್ ಎಫ್‌ಎಂ ರೇಡಿಯೋವನ್ನು ಒಳಗೊಂಡಿದೆ. ಬಳಕೆದಾರರಿಗೆ ಹೆಡ್ ಸೆಟ್ ಅವಶ್ಯಕತೆಯಿಲ್ಲದೆ ತಮ್ಮ ನೆಚ್ಚಿನ ಬಾನುಲಿ ಕೇಂದ್ರಗಳನ್ನು ಕೇಳಲು ಅವಕಾಶ ಕಲ್ಪಿಸುತ್ತದೆ. ʻನೋಕಿಯಾ 105 ಕ್ಲಾಸಿಕ್ʼನ ಎರ್ಗೊನಾಮಿಕ್ ವಿನ್ಯಾಸ ಮತ್ತು ಪುಟ್ಟ ಆಕಾರವನ್ನು ವಿಶೇಷವಾಗಿ ರೂಪಿಸಲಾಗಿದೆ.ಬಳಕೆದಾರರ ಮನರಂಜನೆ ಮತ್ತು ಉತ್ಪಾದಕತೆಗೆ ನೆರವಾಗುವಂತಹ ಅನೇಕ ವಿಶೇಷತೆಯನ್ನು ಈ ಮೊಬೈಲ್ ಒಳಗೊಂಡಿದೆ.
ಇದನ್ನೂ ಓದಿ: Loan: ವಿದ್ಯಾರ್ಥಿಗಳಿಗೆ ನಿಮಗೂ ಸಾಲ ಬೇಕೆ ?! ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ
