Volkswagen Cars: ಇಂದಿನ ದಿನಗಳಲ್ಲಿ ಓಡಾಟ ನಡೆಸಲು ವಾಹನಗಳು ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರ ಮನೆಯಲ್ಲಿ ಕೂಡ ವಾಹನಗಳು (Vechicles)ಇರೋದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹೆಚ್ಚಳ ಕಂಡುಬರುತ್ತಿರುವ ಹಿನ್ನೆಲೆ ಹೆಚ್ಚಿನವರು ಎಲೆಕ್ಟ್ರಿಕ್ ವಾಹನಗಳತ್ತ (Electric Vechicle)ಮುಖ ಮಾಡುತ್ತಿದ್ದಾರೆ. ಕೆಲ ಕಾರು ತಯಾರಿಕಾ ಕಂಪನಿಗಳು ಆಗಾಗ ಹೊಸ ಮಾದರಿಗಳನ್ನು ಪರಿಚಯಿಸಿ ಜನರ ಗಮನ ಸೆಳೆಯುವತ್ತ ಲಕ್ಷ್ಯ ವಹಿಸುತ್ತವೆ.ವಾಹನ ತಯಾರಿಕಾ ಕಂಪನಿ ವೋಕ್ಸ್ ವ್ಯಾಗನ್(Volkswagen Cars)ಈ ವರ್ಷದ ಕೊನೆಯಲ್ಲಿ ಪೆಟ್ರೋಲ್, ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಲಿದೆ.
ವೋಕ್ಸ್‌ವ್ಯಾಗನ್, ಐಸಿಇ ವಾಹನಗಳ ಮಾರಾಟವನ್ನು ನಾರ್ವೆಯಲ್ಲಿ ಮಾತ್ರ ನಿಲ್ಲಿಸಲಿದ್ದು, ವೋಕ್ಸ್‌ವ್ಯಾಗನ್ ತನ್ನ ಕೊನೆಯ ICE ಕಾರುಗಳನ್ನು ಈ ವರ್ಷದ ಡಿಸೆಂಬರ್‌ನಲ್ಲಿ ನಾರ್ವೆಯಲ್ಲಿ ಮಾರಾಟ ಮಾಡಲಿದೆ. ಹೀಗಾಗಿ, ಕಂಪನಿಯು ಡಿಸೆಂಬರ್ 2023 ರೊಳಗೆ ಎಲ್ಲಾ ICE ಕಾರ್ ಆರ್ಡರ್ ಗಳನ್ನು ಪೂರ್ಣಗೊಳಿಸಲು ಯೋಜನೆ ಹಾಕಿಕೊಂಡಿದೆ.ಮುಂದಿನ ವರ್ಷದಿಂದ ವೋಕ್ಸ್ ವ್ಯಾಗನ್ ನಾರ್ವೆಯಲ್ಲಿ ಕಂಪನಿ ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳನ್ನು ಮಾರಾಟ ಮಾಡುವುದಿಲ್ಲ ಬದಲಿಗೆ ಕೇವಲ ಎಲೆಕ್ನಿಕ್ ವಾಹನಗಳನ್ನು ಮಾತ್ರ (EV)ಮಾರಾಟ ಮಾಡಲಿದೆ. ಈ ಕುರಿತು ನಾರ್ವೆಯಲ್ಲಿರುವ ಫೋಕ್ಸ್ ವ್ಯಾಗನ್‌ನ ಆಮದುದಾರ ಮೊಲ್ಲರ್ ಮೊಬಿಲಿಟಿ ಗ್ರೂಪ್ ಮಾಹಿತಿ ನೀಡಿದೆ.
ಇದನ್ನೂ ಓದಿ: ಇಂದು ಈ ರಾಶಿಯವರ ಆದಾಯದ ಮಾರ್ಗಕ್ಕೆ ದಾರಿ ತೆರೆದುಕೊಳ್ಳುತ್ತದೆ, ಸಾಲದ ಸಮಸ್ಯೆಯಿಂದ ಮುಕ್ತಿ!!!
