Best phone for Students : ಕೊರೊನಾ(corona) ಕಾಯಿಲೆ ಬಂದ ನಂತರ ವಿದ್ಯಾರ್ಥಿಗಳ ಜೀವನದಲ್ಲಿ ಮೊಬೈಲ್ ತುಂಬಾ ಅವಶ್ಯಕವಾದ ಡಿವೈಸ್(device) ಅಂತ ಹೇಳಿದರು ಈ ಮಾತು ತಪ್ಪಾಗಲಾರದು. ಈಗಿನ ಎಲ್ಲಾ ವಿದ್ಯಾರ್ಥಿಗಳ(students) ಕೈಯಲ್ಲಿ ಸ್ಮಾರ್ಟ್ ಫೋನ್ (Best phone for Students) ಇದ್ದೇ ಇದೆ. ಅದರಲ್ಲೂ ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ಕೊಡಬೇಡಿ ಎನ್ನುತ್ತಿದ್ದ ಶಾಲಾ ಕಾಲೇಜು ಇದೀಗ ಮೊಬೈಲ್ ಇಲ್ಲದೆ ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂದೆ ಹೋಗಲು ಸಾಧ್ಯವೇ ಇಲ್ಲ ಎನ್ನುವ ರೀತಿಯಲ್ಲಿ ಪರಿಸ್ಥಿತಿ ಹುಟ್ಟುಹಾಕಿದೆ.
ಹೌದು, ಅಂದು ಕೊರೊನಾ ಮಕ್ಕಳ ಶಿಕ್ಷಣದ ಮೇಲೆ ಕರಿನೆರಳು ಬಿದ್ದಂತಾಗಿದೆ. ಏಕೆಂದರೆ ಈಗಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ಇಲ್ಲದೆ ಯಾವುದೇ ಕೆಲಸಗಳು ಅಸಾಧ್ಯವೆಂದು ಹೇಳುವ ರೀತಿ ಆಗಿದೆ. ಎಷ್ಟರಮಟ್ಟಿಗೆ ಎಂದರೆ ಮೊಬೈಲ್ (mobile) ಇಲ್ಲದೆ ಶಿಕ್ಷಣವು (education)ನಿಂತು ಹೋಗುವ ಪರಿಸ್ಥಿತಿಗೆ ಬಂದುಬಿಟ್ಟಿದೆ. ಆದರೆ, ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮಾಡುವ ಸಲುವಾಗಿ ಇಂದು ಫೋನನ್ನು ಖರೀದಿಸುವ ಅವಶ್ಯಕತೆ ಇದೆ. ಆದರೆ ಕೆಲವು ವಿದ್ಯಾರ್ಥಿಗಳಿಗೆ ದುಬಾರಿ ಫೋನ್ ಖರೀದಿ ಮಾಡಲು ಖಂಡಿತಾ ಸಾಧ್ಯವಾಗುವುದಿಲ್ಲ. ಹಾಗಾದರೆ ಮಕ್ಕಳ ವಿದ್ಯಾಭ್ಯಾಸದ ಬೆಳವಣಿಗೆಗೆ ಯಾವ ತರಹದ ಸ್ಮಾರ್ಟ್ ಫೋನ್ ಅನ್ನು ಖರೀದಿಸುವುದು ಉತ್ತಮ ಆಯ್ಕೆ.
ದುಬಾರಿ ಬೆಲೆಯ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಲು ಅಸಾಧ್ಯವಾಗುವವರಿಗೆ ಇಲ್ಲಿ ಮಿಡ್‌ರೇಂಜ್ ಫೋನ್‌ಗಳ (mid range phone)ವಿವರವನ್ನು ನೀಡಲಾಗಿದೆ. ಈ ಫೋನ್‌ಗಳ ಆಫರ್(offer) ಬೆಲೆಗೆ ಒಮ್ಮೆ ಕಣ್ಣು ಹಾಯಿಸಿ ನೋಡಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M13:
ಸ್ಯಾಮ್ ಸಂಗ್ ಗ್ಯಾಲಕ್ಸಿ M13 ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಿನ ರೀತಿಯಲ್ಲಿ ಸೇಲ್ ಆಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದು. ಇದು 6.6 ಇಂಚಿನ FHD+LCD ಡಿಸ್‌ಪ್ಲೇ ಹೊಂದಿದ್ದು, ಪ್ರಬಲವಾಗಿರುವ ಆಕ್ಟಾ ಕೋರ್ ಪ್ರೊಸೆಸರ್ ನೊಂದಿಗೆ 50MP+5MP+2MP ಟ್ರಿಪಲ್ ರಿಯರ್ ಕ್ಯಾಮೆರಾ ಹಾಗೂ 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 6000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ 14,999 ರೂಪಾಯಿಗಳಾಗಿದ್ದು, ನೀವು ಇದೀಗ ಆಫರ್ ಬೆಲೆಯಲ್ಲಿ 10,999 ರೂಪಾಯಿಗಳಲ್ಲಿ ಈ ಸ್ಯಾಮ್ ಸಂಗ್ ಗ್ಯಾಲಕ್ಸಿ M13 ಅನ್ನು ಖರೀದಿ ಮಾಡಬಹುದು.
ರೆಡ್ಮಿ ನೋಟ್11:
ರೆಡ್ಮಿ ನೋಟ್ 11 ಫೋನ್ 6.43 ಇಂಚಿನ FHD+ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್ ರೇಟ್ ಅನ್ನು ಪಡೆದುಕೊಂಡಿದೆ. ಇದರೊಂದಿಗೆ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 680 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಹಾಗೂ 64GB ಇಂಟರ್ ಸ್ಟೋರೇಜ್ ವೇರಿಯಂಟ್‌ನಲ್ಲಿ ಲಭ್ಯ. ಇನ್ನು 50MP ಕ್ವಾಡ್ ರಿಯರ್ ಕ್ಯಾಮೆರಾದೊಂದಿಗೆ 13MP ಸೆಲ್ಫಿ ಕ್ಯಾಮೆರಾ ಆಯ್ಕೆ ಹೊಂದಿದ್ದು, 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು. ಈ ಫೋನ್ ಅನ್ನು ಆಫರ್ ಬೆಲೆಯಲ್ಲಿ 12,999 ರೂಪಾಯಿಗಳಿಗೆ ಖರೀದಿ ಮಾಡಬಹುದು. ಮಾರುಕಟ್ಟೆಯಲ್ಲಿ ಇದರ ಮೂಲ ಬೆಲೆ 17,999 ರೂಪಾಯಿಗಳಾಗಿದೆ.
ಒಪ್ಪೋ A74 5G:
ಮಾರುಕಟ್ಟೆಯಲ್ಲಿ ಅತ್ಯಂತ ಭಾರೀ ಬೇಡಿಕೆಯಲ್ಲಿರುವ ಒಪ್ಪೋ A74 5G ಸ್ಮಾರ್ಟ್‌ಫೋನ್ 6.49 ಇಂಚಿನ FHD+ಡಿಸ್‌ಪ್ಲೇ ಹೊಂದಿದ್ದು, ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್480 ಪ್ರೊಸೆಸರ್ ಬಲ ಪಡೆದುಕೊಂಡಿದೆ. ಹಾಗೆಯೇ 6GB RAM ಹಾಗೂ128GB ಇಂಟರ್ ಸ್ಟೋರೇಜ್ ಅನ್ನು ಹೊಂದಿದ್ದು, 256GB ವರೆಗೆ ವಿಸ್ತರಿಸಬಹುದಾಗಿದೆ. ಜೊತೆಗೆ 48MP+2MP+2MP ರಿಯರ್ ಹಾಗೂ 8MP ಸೆಲ್ಫಿ ಕ್ಯಾಮೆರಾ ಆಯ್ಕೆ ಹೊಂದಿದ್ದು, 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ. ಇದರ ಮೂಲ ದರ 20,990 ರೂಪಾಯಿಗಳಾಗಿದ್ದು, 15,990ರೂಪಾಯಿಗಳ ಆಫರ್ ಬೆಲೆಯಲ್ಲಿ ಜನರು ಈ ಸ್ಮಾರ್ಟ್ ಫೋನನ್ನು ಖರೀದಿ ಮಾಡಬಹುದು.
ಲಾವಾ ಬ್ಲೇಜ್ 5G :
ಈ ಸ್ಮಾರ್ಟ್‌ಫೋನ್ 6.5 ಇಂಚಿನ HD+ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ನಲ್ಲಿ ಇದು ಕೆಲಸ ಮಾಡುತ್ತದೆ. ಈ ಫೋನ್ 4+3GBRAM ಹಾಗೂ128GB ಇಂಟರ್ ಸ್ಟೋರೇಜ್‌ನ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ 50MP ಇರುವ ಪ್ರಮುಖ ಕ್ಯಾಮರದ ಜೊತೆಗೆ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದೆ. ಈ ಫೋನ್ ಅನ್ನು 10,999 ರೂಪಾಯಿಗಳಿಗೆ ಖರೀದಿ ಮಾಡಬಹುದು. ಇದರ ಮಾರುಕಟ್ಟೆಯಲ್ಲಿ ಮೂಲ ದರ ಎಷ್ಟಿದೆ ಎಂದರೆ 14,999 ರೂಪಾಯಿಗಳು.
ರಿಯಲ್‌ಮಿ ನಾರ್ಜೋ 50 5G:
ಈ ಫೋನ್ 6.6 ಇಂಚಿನ FHD+ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 810 5G ಗೇಮಿಂಗ್ ಪ್ರೊಸೆಸರ್‌ನ ಹೆಚ್ಚು ಸಾಮರ್ಥ್ಯವನ್ನು ಪಡೆದುಕೊಂಡಿದೆ. 4GB RAM ಹಾಗೂ 64GB ಇಂಟರ್ ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದು, 256 GBವರೆಗೆ ಇದನ್ನು ವಿಸ್ತರಿಸಬಹುದಾಗಿದೆ. ಇದರೊಂದಿಗೆ 48MP+2MP ಡ್ಯುಯಲ್ ರಿಯರ್ ಹಾಗೂ 8MP ಸೆಲ್ಫಿ ಕ್ಯಾಮೆರಾ ಇದ್ದಿದ್ದು, 5000mAh ಸಾಮರ್ಥ್ಯದ ಬ್ಯಾಟರಿ ಕೂಡ ಇದೆ. 17,999 ರೂಪಾಯಿಗಳ ಸಾಮಾನ್ಯ ದರ ಹೊಂದಿದ್ದು, ಆದರೆ ಆಫರ್ ಆಗಿ 13,999 ರೂಪಾಯಿಗಳಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಾಗುತ್ತದೆ.
