Home » Best Selling Scooters: ಓಲಾ ಅಥವಾ ಟಿವಿಎಸ್ ಜುಪಿಟರ್ ಅಲ್ಲ! ಫೆಬ್ರವರಿಯಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್ ಯಾವುದು ಗೊತ್ತಾ?

Best Selling Scooters: ಓಲಾ ಅಥವಾ ಟಿವಿಎಸ್ ಜುಪಿಟರ್ ಅಲ್ಲ! ಫೆಬ್ರವರಿಯಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್ ಯಾವುದು ಗೊತ್ತಾ?

by Mallika
1 comment
Best Selling Scooters

Best Selling Scooters : ಸ್ಕೂಟರ್‌ ಪ್ರಿಯರಿಗೊಂದು ಸಿಹಿ ಸುದ್ದಿ. ಅದೇನೆಂದರೆ ಕಳೆದ ಕೆಲವು ತಿಂಗಳುಗಳಲ್ಲಿ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಫೆಬ್ರವರಿ 2023 ರಲ್ಲಿ ಟಾಪ್ 5 ಹೆಚ್ಚು ಮಾರಾಟವಾದ ಸ್ಕೂಟರ್‌ಗಳ (Best Selling Scooters) ಬಗ್ಗೆ ನಿಮಗೊಂದು ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಓಲಾ ಅಥವಾ ಟಿವಿಸ್‌ಗಿಂತಲೂ ಹೆಚ್ಚು ಸೇಲ್‌ ಕಂಡ ಸ್ಕೂಟರ್‌ ಹೋಂಡಾ ಆಕ್ಟೀವಾ ಆಗಿದೆ. ಇದು ನಿಜಕ್ಕೂ ಅದ್ಭುತ ಸೇಲ್‌ ಕಂಡಿದೆ ಎಂದೇ ಹೇಳಬಹುದು.

ಫೆಬ್ರವರಿ 2023 ರಲ್ಲಿ ಹೋಂಡಾ ಆಕ್ಟಿವಾ ಹೆಚ್ಚು ಮಾರಾಟವಾದ ಸ್ಕೂಟರ್ ಆಗಿದೆ. ಬರೋಬ್ಬರಿ 1,74,503 ಯುನಿಟ್ ಸ್ಕೂಟರ್ ಮಾರಾಟವಾಗಿದೆ. ಟಿವಿಎಸ್ ಜೂಪಿಟರ್ ಕಳೆದ ತಿಂಗಳಲ್ಲಿ 53,891 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಫೆಬ್ರವರಿ 2022 ರಲ್ಲಿ ಅದರ 47,092 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಫೆಬ್ರವರಿ 2023 ರಲ್ಲಿ ಸುಜುಕಿ ಆಕ್ಸೆಸ್ ಮಾರಾಟವು ಶೇಕಡಾ 7.15 ರಷ್ಟು ಹೆಚ್ಚಾಗಿದೆ. ಹಾಗೂ ಸ್ಕೂಟರ್‌ನ 40,194 ಯುನಿಟ್‌ಗಳು ಮಾರಾಟವಾಗಿವೆ. ಓಲಾ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಫೆಬ್ರವರಿ 2023 ರಲ್ಲಿ ಒಟ್ಟು 17,647 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. TVS Ntorq ನ ಮಾರಾಟವು ಫೆಬ್ರವರಿ 2023 ರಲ್ಲಿ ಶೇಕಡಾ 25.74 ರಷ್ಟು ಕಡಿಮೆಯಾಗಿದೆ. ಆದಾಗ್ಯೂ, ಇದು ಇನ್ನೂ 17,124 ಯುನಿಟ್‌ಗಳ ಮಾರಾಟದೊಂದಿಗೆ ಐದನೇ ಸ್ಥಾನದಲ್ಲಿದೆ.

ಈ ಮಾರಾಟವು ಪ್ರತಿತಿಂಗಳು ಏರು ಪೇರು ಕಾಣುತ್ತದೆ. ಆದರೆ ಫೆಬ್ರವರಿಯಲ್ಲಿ ಭರ್ಜರಿ ಸೇಲ್‌ ಕಂಡ ಮೊದಲ ಸ್ಥಾನದಲ್ಲಿ ಹೋಂಡಾ ಆಕ್ಟೀವಾ ಇದೆ. ಜನ ಇದರ ಸ್ಮೂತ್‌ ರೈಡ್‌ಗೆ ನಿಜಕ್ಕೂ ಮಾರು ಹೋಗಿದ್ದಾರೆ ಎಂದೇ ಹೇಳಬಹುದು.

You may also like

Leave a Comment