Home » Bumper Discount on Split AC: ಭರ್ಜರಿ ರಿಯಾಯಿತಿ ದರದಲ್ಲಿ ಖರೀದಿ ಮಾಡಿ ಹಿಟಾಚಿ ಸ್ಪ್ಲಿಟ್ ಎಸಿ!

Bumper Discount on Split AC: ಭರ್ಜರಿ ರಿಯಾಯಿತಿ ದರದಲ್ಲಿ ಖರೀದಿ ಮಾಡಿ ಹಿಟಾಚಿ ಸ್ಪ್ಲಿಟ್ ಎಸಿ!

0 comments
Bumper Discount on Split AC

Bumper Discount on Split AC: ಬೇಸಿಗೆಯ ಬೇಗೆಗೆ ಜನರು ತತ್ತರಿಸಿ ಹೋಗಿದ್ದಾರೆ. ರಣ ಬಿಸಿಲಿನ ತಾಪ ತಡೆಯಲಾಗದೆ ಜನರು ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ದಿನದ 24ಗಂಟೆಯಲ್ಲಿ ಎಸಿ, ಕೂಲರ್ (cooler) ಇಲ್ಲದೆ ಜೀವಿಸಲು ಸಾಧ್ಯವೇ ಇಲ್ಲ ಎಂಬ ಮಟ್ಟಿಗೆ ಬಿಸಿಲಿನ ಝಳ ಜನರನ್ನು ಹೈರಾಣಾಗಿಸಿದೆ. ಗ್ರಾಹಕರಿಗಾಗಿ (Customer) ಕೂಲರ್ ಗಿಂತಲೂ ಅಗ್ಗದ ಬೆಲೆಗೆ ಎಸಿ (AC) ಕೊಂಡುಕೊಳ್ಳಲು ಒಳ್ಳೆಯ ಅವಕಾಶ ಕಲ್ಪಿಸಲಾಗಿದೆ.

ಸಾಮಾನ್ಯವಾಗಿ ಬೇಸಿಗೆ ಸಮೀಪಿಸುತ್ತಿದ್ದಂತೆಯೇ ಎಸಿ ಬೆಲೆ ಗಣನೀಯವಾಗಿ ಏರಿಕೆಯಾಗುವುದು ಸಹಜ. ಹೀಗಾಗಿ, ಹೆಚ್ಚಿನ ಮಂದಿ ಎಸಿ ಬದಲಿಗೆ ಕೂಲರ್ (Cooler) ಆಯ್ಕೆ ಮಾಡುತ್ತಾರೆ. ನೀವೇನಾದರೂ ಬಿಸಿಲಿನ ಝಳದಿಂದ ಪಾರಾಗೋದಾದರೂ ಹೇಗಪ್ಪಾ ಎಂದು ಯೋಚಿಸುತ್ತಿದ್ದರೆ , ನಿಮಗೆ ಸಹಕಾರಿಯಾಗುವ ಮಾಹಿತಿ ಇಲ್ಲಿದೆ ನೋಡಿ. ಬೇಸಿಗೆಯ ಬೇಗೆಗೆ ಹೊಸ ಎಸಿ ಖರೀದಿ ಮಾಡುವ ಯೋಜನೆ ಹಾಕಿದ್ದರೆ, ಜನಪ್ರಿಯ ಕಂಪನಿಯ ಸ್ಪ್ಲಿಟ್ ಎಸಿಯನ್ನು (Hitachi 1.5 Ton Split AC)ಅರ್ಧ ಬೆಲೆಯಲ್ಲಿ ಖರೀದಿಸುವ ಸೂಪರ್ ಡೂಪರ್ ಸುವರ್ಣ (Bumper Discount on Split AC)ಅವಕಾಶ ನಿಮಗಾಗಿ ಎದುರು ನೋಡುತ್ತಿದೆ.

ಹಿಟಾಚಿ (Hitachi)ಕಂಪನಿಯ ಅತ್ಯಂತ ಜನಪ್ರಿಯ 1.5 ಟನ್ ಕಿಯೋರಾ ಸ್ಪ್ಲಿಟ್ ಎಸಿ ಮೇಲೆ ಭಾರೀ ರಿಯಾಯಿತಿ ದರದಲ್ಲಿ ದೊರೆಯುತ್ತಿದೆ. ಇದು ಸ್ವಯಂಚಾಲಿತವಾಗಿ ಶಕ್ತಿಯನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದು,ಇದರಿಂದಾಗಿ ವಿದ್ಯುತ್‌ ಉಳಿತಾಯವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಹಿಟಾಚಿ 1.5 ಟನ್ ಸ್ಪ್ಲಿಟ್ ಎಸಿ ಖರೀದಿ ಮಾಡುವಾಗ 5,520 ರೂ.ಗಳ ಎಕ್ಸ್‌ಚೇಂಜ್ ಆಫರ್ (Exchange Offer)ಕೂಡ ಲಭ್ಯವಿದ್ದು, ನೀವು ನಿಮ್ಮ ಹಳೆಯ ಏಸಿ (AC)ಯನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಈ ಎಸಿಯನ್ನು ಖರೀದಿ ಮಾಡಲು ಇಚ್ಛಿಸಿದರೆ ನಿಮ್ಮ ಹಳೆಯ ಎಸಿ ಸರಿಯಾಗಿ ಕಾಯನಿರ್ವಹಿಸುತ್ತಿದ್ದರೆ ಮಾತ್ರ ಈ ಕೊಡುಗೆಯ ಸೌಲಭ್ಯ ನಿಮ್ಮದಾಗಿಸಿಕೊಳ್ಳಬಹುದು.

ಹಿಟಾಚಿ 1.5 ಟನ್ ಕಿಯೋರಾ ಸ್ಪ್ಲಿಟ್ ಎಸಿ ಬೆಲೆ(Hitachi 1.5 Ton Split Ac Price) 71,900 ರೂ. ಆಗಿದ್ದು, ಪ್ರಸ್ತುತ ಈ ಎಸಿ ಮೇಲೆ ಕಂಪನಿಯು Bumper Discount on Split AC)ಭರ್ಜರಿ 39% ಡಿಸ್ಕೌಂಟ್(Discount) ನೀಡುತ್ತಿದೆ. ಹೀಗಾಗಿ, ಇದರ ಬೆಲೆ 43,680 ರೂ.ಗೆ ಇಳಿಕೆಯಾಗಲಿದ್ದು, ಇದಲ್ಲದೆ, ಸ್ಪ್ಲಿಟ್ ಎಸಿ ಖರೀದಿಯಲ್ಲಿ ಹಲವು ಬ್ಯಾಂಕ್ ಮತ್ತು ವಿನಿಯಮ ಕೊಡುಗೆಗಳು ಕೂಡ ದೊರೆಯಲಿದೆ. ಈ ಎಸಿ ಖರೀದಿಯಲ್ಲಿ ನೀಡಲಾಗಿರುವ ಕೊಡುಗೆಗಳು ಮತ್ತು ರಿಯಾಯಿತಿಗಳ ಪೂರ್ಣ ಪ್ರಯೋಜನ ಪಡೆಯುವ ಮೂಲಕ ನೀವು ಸ್ಪ್ಲಿಟ್ ಎಸಿಯನ್ನು ಅರ್ಧ ಬೆಲೆಗೆ ಕೊಂಡುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.

You may also like

Leave a Comment