Home » ನಿಮ್ಮ ಹಳೆ ಟಿವಿಯನ್ನು ಕೂಡಾ ಅತೀ ಸುಲಭದಲ್ಲಿ ಸ್ಮಾರ್ಟ್ ಟಿವಿಯನ್ನಾಗಿ ಬದಲಾಯಿಸಬಹುದು | ಜಸ್ಟ್ ಈ ಒಂದು ಸಾಧನ ಬಳಸಿ!!

ನಿಮ್ಮ ಹಳೆ ಟಿವಿಯನ್ನು ಕೂಡಾ ಅತೀ ಸುಲಭದಲ್ಲಿ ಸ್ಮಾರ್ಟ್ ಟಿವಿಯನ್ನಾಗಿ ಬದಲಾಯಿಸಬಹುದು | ಜಸ್ಟ್ ಈ ಒಂದು ಸಾಧನ ಬಳಸಿ!!

0 comments

ನೀವು ಟಿವಿಯನ್ನು ಸಾಕಷ್ಟು ಹಣ ಖರ್ಚು ಮಾಡಿ ಖರೀದಿಸಿರುತ್ತೀರಾ. ಕ್ರಮೇಣ ಈ ಟಿವಿ ಹಳೆಯದಾಗುತ್ತದೆ. ಆದರೆ ಇದೀಗ ಈ ಹಳೆ ಟಿವಿಯನ್ನು ಸ್ಮಾರ್ಟ್ ಟಿವಿಯನ್ನಾಗಿ ಬದಲಾಯಿಸಬಹುದು. ಅದು ಕೇವಲ ಒಂದು ಸಾಧನ ಬಳಸಿದರೆ ಸಾಕು. ಇನ್ನೂ ಆ ಸಾಧನ ಯಾವುದು? ಹೇಗೆ ಸ್ಮಾರ್ಟ್ ಟಿವಿಯನ್ನಾಗಿ ಬದಲಾಯಿಸೋದು ಅಂತ‌ ನೋಡೋಣ.

ಈ ಸಾಧನದ ಹೆಸರು ಫೈರ್ ಸ್ಟಿಕ್ ಎಂದಾಗಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ 3999 ರೂ. ಆಗಿದ್ದು, ಈ ಫೈರ್ ಸ್ಟಿಕ್ ಮೂಲಕ ನಿಮ್ಮ ಮನೆಯಲ್ಲಿನ ಹಳೆಯ ಟಿವಿಯನ್ನು ಸ್ಮಾರ್ಟ್ ಟಿವಿಯನ್ನಾಗಿ ಪರಿವರ್ತಿಸಬಹುದು. ಒಮ್ಮೆ ಆಶ್ಚರ್ಯವೆನಿಸಿದರೂ ಇದು ನಿಜವಾದದ್ದು, ಹೇಗೆಂಬುದು ಇಲ್ಲಿದೆ. ಈ ಸಾಧನವನ್ನು ಟಿವಿಯ ಹಿಂದೆ ಕನೆಕ್ಟ್ ಮಾಡಬೇಕು. ಇದರ ಜೊತೆಗೆ ರಿಮೋಟ್ ಕಂಟ್ರೋಲ್ ಕೂಡಾ ನೀಡಲಾಗುತ್ತದೆ. ಈ ಫೈರ್ ಸ್ಟಿಕ್ ಅಳವಡಿಸುವ ಮೂಲಕ ಸಾಮಾನ್ಯ ಟಿವಿಯನ್ನು ಸ್ಮಾರ್ಟ್ ಟಿವಿಯನ್ನಾಗಿ ಬದಲಾಯಿಸಬಹುದು.

ಇನ್ನೂ ಈ ಫೈರ್ ಸ್ಟಿಕ್ ಸಾಧನ ಯಾವ ರೀತಿ ಕೆಲಸ ಮಾಡುತ್ತದೆ ಎಂದು ನೋಡೋಣ. ಈ ಸಾಧನ ಅತ್ಯಂತ ಚಿಕ್ಕದಾಗಿದ್ದು, ಇದನ್ನು ಬಳಸುವುದು ತುಂಬಾ ಸುಲಭ. ಒಮ್ಮೆ ಫೈರ್ ಸ್ಟಿಕ್ ಅನ್ನು ನಿಮ್ಮ ಮನೆಯಲ್ಲಿನ ಸ್ಮಾರ್ಟ್ ಟಿವಿಯ ಹಿಂದಕ್ಕೆ ಕನೆಕ್ಟ್ ಮಾಡಿದರೆ, ರಿಮೋಟ್ ಸಹಾಯದಿಂದ ಬಳಸಬಹುದಾಗಿದೆ.

ಹಾಗೇ ಇದರಲ್ಲಿ, ಮೊದಲೇ ಇನ್ಸ್ಟಾಲ್ ಮಾಡಿರುವ ಅಪ್ಲಿಕೇಶನ್‌ಗಳಲ್ಲಿ ವೀಡಿಯೊಗಳನ್ನು ನೋಡಬಹುದು. ಅಷ್ಟೇ ಅಲ್ಲದೆ, ಆಟಗಳನ್ನು ಕೂಡ ಆಡಬಹುದಾಗಿದೆ. ಇನ್ನೂ, ವಿಡಿಯೋ ನೋಡಲು ರಿಮೋಟ್ ಸಹಾಯದಿಂದ ಫೈರ್ ಸ್ಟಿಕ್ ಅನ್ನು ಅಕ್ಸೆಸ್ ಮಾಡಿ, ಇಂಟರ್ನೆಟ್ ಕನೆಕ್ಷನ್ ಮೂಲಕ ನಿಮಗಿಷ್ಟವಾದ ವೀಡಿಯೊಗಳನ್ನು ನೋಡಬಹುದಾಗಿದೆ.

You may also like

Leave a Comment