Car Sale: ಇಂದಿನ ದಿನಗಳಲ್ಲಿ ಓಡಾಟ ನಡೆಸಲು ವಾಹನಗಳು ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರ ಮನೆಯಲ್ಲಿ ಕೂಡ ವಾಹನಗಳು ಇರೋದು ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲಿಯೂ ಕೆಲ ಬ್ರಾಂಡ್ ಗಳ ಕಾರುಗಳು ತಮ್ಮ ವೈಶಿಷ್ಟ್ಯತೆ ನವೀನ ಮಾದರಿಯ ಮೂಲಕ ಜನರ ಮನದಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ. ಇಂದು ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಅನೇಕ ಕಾರುಗಳು ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಸುಧಾರಣೆ ಕಂಡಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ವಿಶೇಷತೆಗಳನ್ನು ಒಳಗೊಂಡಿದೆ.
ಭಾರತದಲ್ಲಿ ಕಾರುಗಳ ಮಾರಾಟ(Car Sale) ಗಣನೀಯವಾಗಿ ಏರಿಕೆಯಾಗುತ್ತಿದೆ. ಸದ್ಯ, ಫೆಬ್ರುವರಿ ತಿಂಗಳ ವಾಹನ ಮಾರಾಟಗಳ ವಿವರ (Wholesale Car Sales Report) ಪ್ರಕಟವಾಗಿದ್ದು, ವರ್ಷವಾರು ಲೆಕ್ಕದ ಅನುಸಾರ, ಶೇ. 10.41ರಷ್ಟು ಹೆಚ್ಚು ವಾಹನಗಳು ಮಾರಾಟವಾಗಿರುವುದು ವರದಿಯಾಗಿದೆ. 2023ರ ಫೆಬ್ರುವರಿ ತಿಂಗಳಲ್ಲಿ ಭಾರತದಲ್ಲಿ (2023 February Data)3.34 ಲಕ್ಷದಷ್ಟು ಕಾರುಗಳು ಮಾರಾಟವಾಗಿದ್ದು, ಜನವರಿಗೆ ಹೋಲಿಕೆ ಮಾಡಿದರೆ ಮಾರಾಟ (Sale) ಕಡಿಮೆ ಆಗಿದ್ದರೂ ಕೂಡ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 10ಕ್ಕಿಂತಲೂ ಹೆಚ್ಚು ಕಾರು ಮಾರಾಟ ಆಗಿದೆ ಹಾಗಿದ್ರೆ ಟೊಯೊಟಾ (Toyota), ಹ್ಯುಂಡೈ (Hyundai Motor Company),ಕಿಯಾ ಇನ್ನುಳಿದ ಕಂಪನಿಗಳ ಕಾರುಗಳು ಎಷ್ಟು ಮಾರಾಟವಾಗಿವೆ? ಈ ಕುರಿತ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ!
2022ರ ಫೆಬ್ರುವರಿಯಲ್ಲಿ 3,02,729 ವಾಹನಗಳ ಮಾರಾಟ ಆಗಿದ್ದು, 2023ರ ಫೆಬ್ರುವರಿಯಲ್ಲಿ ಈ ಸಂಖ್ಯೆ 3,34,245ಕ್ಕೆ ಏರಿಕೆ ಕಂಡಿದೆ. ಆದರೆ, ಹೋಲ್ಸೇಲ್ (Wholesale)ಮಾರುಕಟ್ಟೆಯ ದತ್ತಾಂಶದ ಪ್ರಕಾರ, ತಿಂಗಳುವಾರು ಲೆಕ್ಕ ಪರಿಗಣಿಸಿದಲ್ಲಿ . ಜನವರಿಗೆ (January)ಹೋಲಿಸಿದರೆ ಫೆಬ್ರುವರಿಯಲ್ಲಿ ವಾಹನ ಮಾರಾಟ ಶೇ. 3.37ರಷ್ಟು ಕಡಿಮೆಯಾಗಿದೆ.
ಕಾರು ಮಾರಾಟದ (Car Sales) ರೇಸ್ ನಲ್ಲಿ ಮಾರುತಿ (Maruti)ಕಂಪೆನಿ ಅಧಿಪತ್ಯ ಕಾಯ್ದುಕೊಂಡಿದ್ದು, ಫೆಬ್ರುವರಿಯಲ್ಲಿ ಮಾರುತಿ ಸುಜುಕಿಯ 1,47,467 ಕಾರುಗಳು ಮಾರಾಟವಾಗಿದೆ. ಈ ನಡುವೆ, ಕಿಯಾ ಮತ್ತು ಟೊಯೊಟಾ ಸಂಸ್ಥೆಯ ಕಾರುಗಳು ಅತಿ ಹೆಚ್ಚು ಹೆಚ್ಚಳ ಕಂಡಿವೆ. ಮಾರುತಿ ಸುಜುಕಿಯ ಕಾರುಗಳು ಶೇ. 44.12ರಷ್ಟು ಮಾರಾಟ ಆಗಿ ಪ್ರಾಬಲ್ಯ ಸಾಧಿಸಿದೆ. ಸೌತ್ ಕೊರಿಯಾದ ಹ್ಯುಂಡೈ ಕಂಪನಿ 46,968 ಕಾರುಗಳನ್ನು ಮಾರುವ ಮೂಲಕ ಮಾರುತಿ ನಂತರದ ಸ್ಥಾನವನ್ನೂ ಬಾಚಿಕೊಂಡಿದೆ. ಈ ನಡುವೆ, ಎರಡನೇ ಸ್ಥಾನಕ್ಕಾಗಿ ಹ್ಯುಂಡೈಗೆ ಟಾಟಾ, ಮಹೀಂದ್ರ ಮತ್ತು ಕಿಯಾ ಜಿದ್ದಾಜಿದ್ದಿನ ಸೆಣಸಾಟ ನಡೆಯುತ್ತಿದೆ.
ಟೊಯೊಟಾ ಕಾರು (Toyota Car)ಮಾರಾಟ ಶೇ. 74.58ರಷ್ಟು ಹೆಚ್ಚಾಗಿದ್ದು, ಕಿಯಾ ಮೋಟಾರ್ಸ್ನ ಕಾರು ಮಾರಾಟ ಶೇ. 35.75ರಷ್ಟು ಹೆಚ್ಚಳವಾಗಿದೆ. ಹೀಗಾಗಿ, ಕಾರು ಮಾರಾಟ ಹೆಚ್ಚಳದಲ್ಲಿ ಕಿಯಾಗಿಂತ ಟೊಯೋಟಾ ಮುನ್ನಡೆ ಸಾಧಿಸಿದೆ.ಕಾರು ಮಾರಾಟದಲ್ಲಿ ಕಿಯಾ ಮತ್ತು ಟೊಯೊಟಾ 5 ಮತ್ತು 6ನೇ ಸ್ಥಾನದಲ್ಲಿದ್ದರೂ ಸಹಿತ ಈ ಕಂಪನಿಗಳ ಖ್ಯಾತಿ ದಿನೇ ದಿನೇ ಹೆಚ್ಚಾಗುತ್ತಿದೆ.
ಹೋಲ್ಸೇಲ್, ರೀಟೇಲ್ ಕಾರುಗಳ ವ್ಯತ್ಯಾಸವೇನು ಎಂದು ಗಮನಿಸಿದರೆ:
ರೀಟೇಲ್ ಕಾರುಗಳ ಮಾರಾಟವೆಂದರೆ ಗ್ರಾಹಕರು ಖರೀದಿಸಿರುವ ಕಾರುಗಳ ಸಂಖ್ಯೆಯಾಗಿದ್ದು, ಗ್ರಾಹಕರು ಕಾರು ಖರೀದಿಗೆ ಡೀಲರ್ ಜೊತೆ ನೊಂದಣಿ ಮಾಡಿಸುವುದಾಗಿದೆ. ಹೋಲ್ಸೇಲ್ ಮಾರಾಟವೆಂದರೆ, ಡೀಲರ್ಗಳು ಕಾರು ತಯಾರಕರಿಂದ ಖರೀದಿಸಿದ ಕಾರುಗಳ ಸಂಖ್ಯೆಯಾಗಿದ್ದು, ಕೆಲವೊಮ್ಮೆ ಡೀಲರ್ಗಳು ಖರೀದಿಸಿದ ಕಾರುಗಳು ಗ್ರಾಹಕರಿಗೆ ಮಾರಾಟವಾಗದೇ ಉಳಿದುಬಿಡುವ ಸಾಧ್ಯತೆ ಕೂಡ ಇದೆ.
ಫೆಬ್ರುವರಿ ತಿಂಗಳಲ್ಲಿನ ರೀಟೇಲ್ ಮಾರಾಟದ ವಿವರ ಹೀಗಿದೆ:
ಮಾರುತಿ: 1,18,892
ಹ್ಯುಂಡೈ: 39,106
ಟಾಟಾ: 38,965
ಮಹೀಂದ್ರ: 29,356
ಕಿಯಾ: 19,554
ಟೊಯೊಟಾ: 12,068
ಸ್ಕೋಡಾ: 6,711
ಹೊಂಡಾ: 5,744
ರೇನೋ: 4,916
ಮಾರಿಸ್ ಗ್ಯಾರೇಜಸ್ (ಎಂಜಿ): 3,604
ನಿಸ್ಸಾನ್: 2,246
ಫೋರ್ಸ್: 673
ಜೀಪ್: 649
ಬಿವೈಡಿ: 228
ಐಸುಜು (iSuzu): 87
ಫೆಬ್ರುವರಿ( February Month) ತಿಂಗಳಲ್ಲಿ ರೀಟೇಲ್ ಕಾರುಗಳ ಮಾರಾಟ ಒಟ್ಟು 2,82,799 ಯೂನಿಟ್ಗಳಾಗಿದ್ದು, ಶೇಕಡವಾರು ಕಾರು ಮಾರಾಟದಲ್ಲಿ ಚೀನಾದ ಬಿವೈಡಿ (ಬ್ಯುಲ್ಡ್ ಯುವರ್ ಡ್ರೀಮ್) ಸಂಸ್ಥೆ ಶೇ. 1800 ಹೆಚ್ಚಳದೊಂದಿಗೆ ಪ್ರಥಮ ಸ್ಥಾನದ ಗರಿಯನ್ನು ಬಾಚಿಕೊಂಡಿದೆ. ಭಾರತದ ಫೋರ್ಸ್ ಮೋಟಾರ್ಸ್ ಶೇ. 257ರಷ್ಟು ಮಾರಾಟ ಏರಿಕೆಯಾಗಿದೆ. ಇದಲ್ಲದೇ, ಫೆಬ್ರುವರಿಯಲ್ಲಿ ಮಹೀಂದ್ರಾ ಮತ್ತು ಟೊಯೊಟಾ ಕಾರುಗಳು ಶೇ. 50ಕ್ಕಿಂತಲೂ ಹೆಚ್ಚು ಮಾರಾಟ ಹೆಚ್ಚಿಸಿಕೊಂಡು ಉಳಿದ ಕಂಪನಿಗಳಿಗೆ ತೀವ್ರ ಪೈಪೋಟಿ ನೀಡುತ್ತಿವೆ.
ಹೋಲ್ಸೇಲ್ ಕಾರು ಮಾರುಕಟ್ಟೆಯಲ್ಲಿ 2023 ಫೆಬ್ರುವರಿ ತಿಂಗಳ ಮಾರಾಟ ವಿವರ ಹೀಗಿದೆ:
ಮಾರುತಿ: 1,47,467
ಹ್ಯುಂಡೈ: 46,968
ಟಾಟಾ: 42,865
ಮಹೀಂದ್ರ: 30,221
ಕಿಯಾ: 24,600
ಟೊಯೊಟಾ: 15,267
ರೇನೋ (Renault): 6,616
ಹೊಂಡಾ: 6,086
ಮಾರಿಸ್ ಗ್ಯಾರೇಜಸ್ (MG): 4,193
ಸ್ಕೋಡಾ: 3,418
ವಾಲ್ಕ್ಸ್ ವಾಗನ್ (Volkswagen): 3,313
ಜೀಪ್: 719
ಸಿಟ್ರೋನ್ (Citroen): 328
