Home » ತಿಳಿದಿರಲಿ ನಿಮಗೆ, ಪಂಚ್ SUV ಅಲ್ಲದೆ ಕೈಗೆಟಕುವ ದರದಲ್ಲಿ 3 SUVಗಳು ಮಾರುಕಟ್ಟೆಯಲ್ಲಿ ಲಭ್ಯ ! ಇದರ ವೈಶಿಷ್ಟ್ಯತೆ ಇಲ್ಲಿದೆ

ತಿಳಿದಿರಲಿ ನಿಮಗೆ, ಪಂಚ್ SUV ಅಲ್ಲದೆ ಕೈಗೆಟಕುವ ದರದಲ್ಲಿ 3 SUVಗಳು ಮಾರುಕಟ್ಟೆಯಲ್ಲಿ ಲಭ್ಯ ! ಇದರ ವೈಶಿಷ್ಟ್ಯತೆ ಇಲ್ಲಿದೆ

0 comments

ಪ್ರಸ್ತುತ ಭಾರತದಲ್ಲಿ ಎಸ್​ಯುವಿ ಕಾರುಗಳು ಅತೀ ಹೆಚ್ಚು ಮಾರಾಟವಾಗುತ್ತಿದೆ. ಹೌದು ಕುಟುಂಬಕ್ಕೆ ಆರಾಮದಾಯಕ ಮತ್ತು ವಿಶಾಲವಾದ ಕಾರನ್ನು ಬಯಸುವವರಿಗೆ ಎಸ್​ಯುವಿ ಕಾರು ವಿಶೇಷ ವೈಶಿಷ್ಟ್ಯಗಳನ್ನು ನೀಡುತ್ತದೆ. ಹೆಚ್ಚಿನ ಆಂತರಿಕ ಸ್ಥಳವನ್ನು ಬಯಸುವ ಜನರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಸದ್ಯ ಕೈಗೆಟುಕುವ ಬೆಲೆಯ SUV ಕಾರುಗಳ ಬೇಡಿಕೆಯು ದಿನೇ ದಿನೇ ಹೆಚ್ಚುತ್ತಿದ್ದು ಜನರ ಮೆಚ್ಚುಗೆ ಪಡೆದಿದೆ.

ಸದ್ಯ ಪಂಚ್ SUV ಅಲ್ಲದೆ ಕೈಗೆಟಕುವ ದರದಲ್ಲಿ 3 SUVಗಳು ಮಾರುಕಟ್ಟೆಯಲ್ಲಿದ್ದು ಸದ್ಯ ಇವುಗಳ ವೈಶಿಷ್ಟ್ಯಗಳ ಪಟ್ಟಿ ಈ ಕೆಳಗಿದೆ.

  • ಮಹೀಂದ್ರಾ KUV100 NXT : ಮಹೀಂದ್ರಾ KUV100 NXT ಬೆಲೆ 6.18 ಲಕ್ಷದಿಂದ 7.92 ಲಕ್ಷ . ಮಹೀಂದ್ರಾ KUV100 NXT ಅನ್ನು 1.2-ಲೀಟರ್ ಪೆಟ್ರೋಲ್ ಎಂಜಿನ್ (82PS/115Nm) ಜೊತೆಗೆ 5-ಸ್ಪೀಡ್ ಮ್ಯಾನುವಲ್‌ಗೆ ಜೋಡಿಸಲಾಗಿದೆ. ಇದು ಬ್ಲೂಟೂತ್ ಮತ್ತು AUX ಕನೆಕ್ಷನ್ ನೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಆಡಿಯೊ ಮತ್ತು ಕಾಲಿಂಗ್ ಕಂಟ್ರೋಲ್ ಮತ್ತು ಹೈಟ್ ಅಡ್ಜಸ್ಟೇಬಲ್ ಸೀಟ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
  • ನಿಸ್ಸಾನ್ ಮ್ಯಾಗ್ನೈಟ್ : ನಿಸ್ಸಾನ್ ಮ್ಯಾಗ್ನೈಟ್ ಬೆಲೆ 5.97 ಲಕ್ಷದಿಂದ 10.79 ಲಕ್ಷದವರೆಗೆ ಇರುತ್ತದೆ. ಇದು 1-ಲೀಟರ್ (ಪೆಟ್ರೋಲ್ ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್ (100PS ಮತ್ತು 160Nm) ಹೀಗೆ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. 5-ಸ್ಪೀಡ್ ಮ್ಯಾನುವಲ್ ಮತ್ತು CVT ಆಯ್ಕೆಯನ್ನು ಗೇರ್ ಬಾಕ್ಸ್ ಆಗಿ ನೀಡಲಾಗಿದೆ. ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 16-ಇಂಚಿನ ಡ್ಯುಯಲ್-ಟೋನ್ ಎಲಾಯ್, ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಹೆಡ್‌ಲೈಟ್ ಮತ್ತು ರಿಯರ್ ವೆಂಟ್‌ಗಳೊಂದಿಗೆ ಆಟೋ ಏರ್ ಕಂಡೀಶನರ್ ಅನ್ನು ಒಳಗೊಂಡಿದೆ.
  • ರೆನಾಲ್ಟ್ ಕಿಗರ್ : ರೆನಾಲ್ಟ್ ಕಿಗರ್ ನಿಸ್ಸಾನ್ ಮ್ಯಾಗ್ನೈಟ್ ಅನ್ನು ಬಹುತೇಕ ಹೋಲುತ್ತದೆ. ಇದರ ಬೆಲೆ 6 ಲಕ್ಷದಿಂದ 10.77 ಲಕ್ಷದವರೆಗೆ ಇರುತ್ತದೆ. ಇದು ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. 1-ಲೀಟರ್ (72PS ಮತ್ತು 96Nm) ಪೆಟ್ರೋಲ್ ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್ (100PS ಮತ್ತು 160Nm). 5-ಸ್ಪೀಡ್ ಮ್ಯಾನುವಲ್ ಮತ್ತು CVT ಆಯ್ಕೆಯನ್ನು ಗೇರ್ ಬಾಕ್ಸ್ ಆಗಿ ನೀಡಲಾಗಿದೆ. ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್ ಮತ್ತು ಏರ್ ಫಿಲ್ಟರ್ ಅನ್ನು ಒಳಗೊಂಡಿದೆ.

ಸದ್ಯ SUV ಕಾರುಗಳ ಬೇಡಿಕೆಯು ಹೆಚ್ಚುತ್ತಿದ್ದು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿರುವ ಈ ಮೇಲಿನ ಕಾರು ಗಳು ಕೈಗೆಟುಕುವ ದರದಲ್ಲಿ ನಿಮಗೆ ಲಭ್ಯವಿದೆ.

You may also like

Leave a Comment