Smartphone : ಒಬ್ಬ ವ್ಯಕ್ತಿ ತನಗೆ ಇಷ್ಟವಾದ ಸ್ಮಾರ್ಟ್ ಫೋನ್(Smartphone) ಅನ್ನು ಖರೀದಿಸುವಾಗ ಅದರಲ್ಲಿ ಏನೆಲ್ಲಾ ಫೀಚರ್ಸ್ ಇವೆ, ಬ್ಯಾಟರಿ (battery)ಬ್ಯಾಕಪ್ ಎಷ್ಟಿದೆ, ಎನ್ನುವ ವಿಷಯದ ಬಗ್ಗೆ ತಿಳಿದು ಆಮೇಲೆ ಮೊಬೈಲ್ ಅನ್ನು ಖರೀದಿಸುತ್ತಾನೆ. ಈ ಸ್ಮಾರ್ಟ್ ಫೋನ್ ಗಳನ್ನು ಖರೀದಿಸುವಾಗ ಈ ಎಲ್ಲಾ ಫೀಚರ್ಸ್ (features) ಗಳನ್ನು ನೋಡುತ್ತಾರೆ. ಆದರೆ ಯಾವಾಗಲಾದರೂ ಸ್ಮಾರ್ಟ್‌ಫೋನ್‌ನಲ್ಲಿ ಕಾಣಿಸುವ ಈ ಸಣ್ಣ ರಂಧ್ರದ ಬಗ್ಗೆ ತಿಳಿಯಲು ಮುಂದಾಗಿದ್ದೀರಾ? ಹಾಗಾದರೆ ಈ ಸಣ್ಣ ರಂಧ್ರದ ಬಗ್ಗೆ ಒಮ್ಮೆ ಕಣ್ಣು ಹಾಯಿಸಿ ನೋಡಿ.
ಸ್ಮಾರ್ಟ್ ಫೋನ್ ನ ಸಣ್ಣ ರಂಧ್ರದಿಂದ ಆಗುವ ಪ್ರಯೋಜನ ಏನು ಎಂಬುದರ ಬಗ್ಗೆ ನಿಮಗೆ ಗೊತ್ತಾ?.
ಹೌದು, ಎಲ್ಲಾ ಸ್ಮಾರ್ಟ್‌ಫೋನ್‌ನಲ್ಲಿ ಸಾಮಾನ್ಯವಾಗಿ ಹೆಡ್ ಫೋನ್(headphone) ಹಾಗೂ ಸ್ಪೀಕರ್ ಉದ್ದೇಶಕ್ಕೆ ದೊಡ್ಡ ಹೋಲ್ ಅಂದರೆ ರಂದ್ರ ನೀಡಿರುವುದನ್ನು ನೀವು ಈಗಾಗಲೇ ಗಮನಿಸಿರಬಹುದು. ಆದರೆ, ಹೆಡ್‌ಫೋನ್ ಜಾಕ್(headphone jack) ಅನ್ನು ಹಾಕುವ ಅದರ ಪಕ್ಕದಲ್ಲೇ ಕಾಣಿಸಿಕೊಳ್ಳುವ ಈ ಸಣ್ಣಗಾತ್ರದ ಸ್ಮಾರ್ಟ್ ಫೋನ್ ರಂಧ್ರದ ಬಗ್ಗೆ ಎಷ್ಟು ಜನರಿಗೆ ಗೊತ್ತು? ಹಾಗಾದರೆ ಇಂತಹ ಸ್ಮಾರ್ಟ್ ಫೋನ್ ಗಳಲ್ಲಿ ಸಣ್ಣದಾದಂತಹ ಹೋಲ್ ಗಳನ್ನೂ ಅಂದರೆ ರಂದ್ರವನ್ನು ಯಾಕೆ ನೀಡಲಾಗಿದೆ? ಇದರಿಂದ ಸ್ಮಾರ್ಟ್ ಫೋನ್ ಬಳಕೆ ಮಾಡುವವರಿಗೆ ಆಗುವ ಉಪಯೋಗ ಏನು? ಎಂಬ ವಿಷಯದ ಬಗ್ಗೆ ಇನ್ನೂ ತಿಳಿದುಕೊಳ್ಳಬೇಕಾದರೆ ಕೆಳಗೆ ನೋಡಿ.
ಸೆಲ್ ಫೋನ್‌ನ ಕೆಳಗೆ ಕಾಣುವ ಅ ರಂಧ್ರ ಯಾವುದು?
ನೀವು ಈಗಾಗಲೇ ಸ್ಮಾರ್ಟ್‌ಫೋನ್ ಅನ್ನು ಹೊಂದಿದ್ದರೆ, ಆ ಸ್ಮಾರ್ಟ್ ಫೋನ್ ನಲ್ಲಿ ಸೆಲ್ಫಿ ಕ್ಯಾಮೆರಾ(selfie camera), ರಿಯಲ್ ಕ್ಯಾಮೆರಾ(real camera), ಆಡಿಯೊ ಜ್ಯಾಕ್, ವಾಲ್ಯೂಮ್ ಬಟನ್ ಮತ್ತು ಸ್ಪೀಕರ್‌ನಂತಹ ಅನೇಕ ಫೀಚರ್ಸ್‌ಗಳನ್ನು ನೀವು ನೋಡಿರಬಹುದು. ಸ್ಮಾರ್ಟ್ ಫೋನ್ ನಲ್ಲಿರುವ ಈ ಎಲ್ಲಾ ಫೀಚರ್ಸ್(features) ಗಳಂತೆಯೇ ಈ ಸಣ್ಣದಾದ ರಂದ್ರವು ಒಂದು ಭಾಗ ಎಂದು ಕೆಲವರು ತಿಳಿದುಕೊಂಡಿದ್ದಾರೆ. ಆದರೆ, ಇದು ನಿಜವಾದ ಮಾಹಿತಿಯಲ್ಲ ಇದರಿಂದ ಜನರಿಗೆ ಅನೇಕ ಅನುಕೂಲಗಳು ಇವೆ.
ಹಾಗಾದರೆ ಈ ಸಣ್ಣ ರಂಧ್ರದಿಂದ ಜನರಿಗೆ ಆಗುವ ಪ್ರಯೋಜನ ಏನು?
ಇದು ಸ್ಮಾರ್ಟ್ ಫೋನ್ ನಲ್ಲಿ ಶಬ್ದ ರದ್ದತಿ ಮೈಕ್ರೊಫೋನ್ (microphone) ಆಗಿದ್ದು, ಕರೆ ಮಾಡುವಾಗ ನಮಗೆ ಮಾತಾಡಲು ಸರಾಗವಾಗುತ್ತದೆ. ಈ ಮೈಕ್ರೊಫೋನ್‌ನ ಕೆಲಸವೇನೆಂದರೆ ನೀವು ಕರೆ ಮಾಡುವಾಗ ಅಥವಾ ಮಾತನಾಡುವಾಗ ಸರಿಯಾಗಿ ಮಾತನಾಡುವುದನ್ನು ಕೇಳಲು ಇದು ಉಪಯುಕ್ತವಾಗಿದೆ. ಮೊಬೈಲ್ ನಲ್ಲಿ ಮೈಕ್ರೊಫೋನ್ ನ ಸಹಾಯ ಇಲ್ಲದಿರುತ್ತಿದ್ದರೆ ಮಾತನಾಡುವ ವ್ಯಕ್ತಿಗೆ ನಿಮ್ಮ ಮಾತನ್ನು ಕೇಳಲು ಅಸಾಧ್ಯವಾಗುತ್ತಿತ್ತು. ಹಾಗಾಗಿ ಸ್ಮಾರ್ಟ್ ಫೋನ್ (smartphone) ನಲ್ಲಿ ಸಣ್ಣ ರಂದ್ರ ಇರುವುದು ಬಹಳ ಅಗತ್ಯವಾದ ಫೀಚರ್ಸ್ ಆಗಿದೆ.
ಯಾವುದೇ ಕಾರಣಕ್ಕೂ ನಿಮ್ಮ ಮೊಬೈಲ್ ಗೆ ಗುಂಡು ಸೂಜಿ ಅಥವಾ ಪಿನ್ ಅನ್ನು ಹಾಕದಿರಿ!
ಯಾವುದೇ ಒಂದು ಮೊಬೈಲ್ ನಲ್ಲಿ ಈ ವಿಭಾಗ ಡಿವೈಸ್‌ನ(device) ಅತ್ಯಂತ ಸೂಕ್ಷ್ಮವಾದ ಸ್ಥಳವಾಗಿದೆ. ಇದರ ಬಗ್ಗೆ ತುಂಬಾ ಜಾಗರೂಕರಾಗಿರಬೇಕು.ಇದನ್ನು ನೆಗ್ಲೆಟ್ ಮಾಡಿದರೆ ಇದರಿಂದ ಅಪಾಯ ಜಾಸ್ತಿ ಆಗಬಹುದು. ನಿಮ್ಮ ಮೊಬೈಲ್ ಅನ್ನು ಕ್ಲೀನ್ ಮಾಡುವ ಅಥವಾ ಅದು ಏನಾಗಿರಬಹುದು ಎಂಬ ಕಾತುರದಿಂದ ಅದನ್ನು ನೋಡುವ ಆತುರದಲ್ಲಿ ಗುಂಡು ಸೂಜಿ ಅಥವಾ ಪಿನ್ ಅನ್ನು ಹಾಕಿದರೆ ಇದರಿಂದ ಇನ್ ಬಿಲ್ಟ್ (inbuilt) ಮೈಕ್ರೋಫೋನ್ ಹಾನಿಗೆ ಕಾರಣವಾಗುತ್ತದೆ.
ಇನ್ನು ಫೋನ್‌ನ ವಿನ್ಯಾಸವನ್ನು ನೋಡುದಾದರೆ ಪೌಡರ್, ನೀರು ಅಥವಾ ಇನ್ನಿತರೆ ದ್ರವ ರೂಪದ ವಸ್ತುಗಳಲ್ಲಿ ಮೊಬೈಲ್ ಅನ್ನು ಮುಳುಗಿಸಬಾರದು. ಈ ರೀತಿ ಮಾಡಿದರೆ ಹೆಚ್ಚಿನ ಹಾನಿಯಾಗುವುದಲ್ಲದೆ ಹಲವು ಸಮಸ್ಯೆಗಳು ಮೊಬೈಲ್‌ನಲ್ಲಿ ಕಾಣಿಸಿಕೊಳ್ಳುತ್ತವೆ.
ನಿಮ್ಮ ಮೊಬೈಲ್ ನಲ್ಲಿ ಏನಾದರೂ ಸಮಸ್ಯೆ ಕಾಣಿಸಿಕೊಂಡರೆ ನೀವೇ ಸ್ವತಃ ತೆಗೆದುಹಾಕಲು ಮುಂದಾಗಬೇಡಿ. ಬದಲಾಗಿ ಸೆಲ್‌ಫೋನ್ ರಿಪೇರಿ (cell phone repairing)ಮಾಡುವ ಅಂಗಡಿಗೆ ತೆಗೆದುಕೊಂಡು ಹೋಗಿ ಅದನ್ನು ತೆಗೆಯಲು ಹೇಳಿ. ನೀವೇ ಮೊಬೈಲ್ ಅನ್ನು ಸರಿ ಮಾಡಲು ಮುಂದಾದರೆ ಇದರಿಂದ ಅಪಾಯಗಳೇ ಜಾಸ್ತಿ ಆಗಬಹುದು. ಇದರಿಂದ ನೀವು ನಿಮ್ಮ ಸ್ಮಾರ್ಟ್ ಫೋನನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ನಿಮ್ಮ ಮೊಬೈಲ್(mobile) ನ ಕಾಳಜಿ ವಹಿಸುವುದು ನಿಮ್ಮ ಜವಾಬ್ದಾರಿ.
