Home » Digital detox: ಪ್ರತಿದಿನ 1.5 ಗಂಟೆ ಮೊಬೈಲ್ ಸೈಲೆಂಟ್ ಮಾಡುವ ಊರಿದು, ಗಂಟೆ ಬಾರಿಸಿದ ತಕ್ಷಣ ಮೊಬೈಲ್ ಸ್ವಿಚ್ ಆಫ್ !

Digital detox: ಪ್ರತಿದಿನ 1.5 ಗಂಟೆ ಮೊಬೈಲ್ ಸೈಲೆಂಟ್ ಮಾಡುವ ಊರಿದು, ಗಂಟೆ ಬಾರಿಸಿದ ತಕ್ಷಣ ಮೊಬೈಲ್ ಸ್ವಿಚ್ ಆಫ್ !

1 comment

Digital detox: ಮೊಬೈಲ್ ಬಿಟ್ಟು ಯಾರಿಗಾದರೂ ಅರೆಕ್ಷಣ ಇರಲು ಸಾಧ್ಯವೇ? ಮೊಬೈಲ್ ಬಿಟ್ಟು ಸುಮ್ಮನೆ ಇರಿ ಅಂತ ಯಾರಿಗಾದ್ರೂ ಸಜೇಶನ್ ಕೊಟ್ರೋ, ಅಷ್ಟೇ. ನಿಮ್ಮ ಮೇಲೆ ಎಗರಿ ಬೀಳೋದು ಗ್ಯಾರಂಟಿ. ಅಷ್ಟರ ಮಟ್ಟಿಗೆ ಜೀವದ ಭಾಗವಾಗಿದೆ ಮೊಬೈಲು.
ರಾತ್ರಿ ಮಲಗಿದರೂ, ಎಚ್ಚರವಾದರೂ ಮೊಬೈಲ್ ನೋಡಲೇಬೇಕು. ಹಾಗಿರುವಾಗ ದಿನಕ್ಕೆ 1.5 ಗಂಟೆ ಮೊಬೈಲ್ ಸೈಲೆಂಟ್ (Digital detox) ಮಾಡೋದಾ? ಹೌದು, ಅದು ಸದ್ಯಕ್ಕೆ ಸಾಧ್ಯವಾಗಿದೆ.

ಮಹಾರಾಷ್ಟ್ರದ ಸಾಂಗ್ಲಿಯ (Sangli, maharashtra) ಗ್ರಾಮದಲ್ಲಿ ಪ್ರತಿ ದಿನ ಸಂಜೆ 7.30 ಕ್ಕೆ ಪಕ್ಕದ ದೇವಸ್ಥಾನದಲ್ಲಿ ಏಕಾಏಕಿ ಸೈರನ್ ಮೊಳಗುತ್ತದೆ. ಸೈರನ್ ಕೇಳಿದ ತಕ್ಷಣ ಊರಿನ ಪ್ರತಿಯೊಬ್ಬರೂ ತಮ್ಮ ತಮ್ಮ ಮೊಬೈಲ್ ಮಡಚ್ಚಿಟ್ಟು ದೂರ ಕೂರುತ್ತಾರೆ. ಮೊಬೈಲ್ ಮಾತ್ರವಲ್ಲ, ಟಿವಿ ಸೇರಿದಂತೆ ಎಲ್ಲಾ ಆಧುನಿಕ ಡಿಜಿಟಲ್ ತಂತ್ರಜ್ಞಾನಗಳಿಗೆ ಒಂದೂವರೆ ತಾಸು ಫುಲ್ ವಿರಾಮ.‌ ಬಳಿಕ ಈ ಗ್ಯಾಜೆಟ್ ಗಳು ಜೀವಂತವಾಗುವುದು ರಾತ್ರಿ 8.30ರ ಬಳಿಕ !

ಈ ಸಂದರ್ಭದಲ್ಲಿ ಮಕ್ಕಳು, ಯುವಕರು, ಹಿರಿಯರು ಪುಸ್ತಕ ಓದುವುದು, ಹೊಸ ವಿಷಯಗಳ ಕುರಿತು ಮಾತನಾಡುವುದು ಇತ್ಯಾದಿಗಳನ್ನು ಮಾಡುತ್ತಾರೆ. ತಮಗಾಗಿ ಮತ್ತು ತಮ್ಮ ಕುಟುಂಬಕ್ಕಾಗಿ ಸಮಯವನ್ನು ಮೀಸಲಿಡುತ್ತಾರೆ. ಕೊರೋನಾ ವಕ್ಕರಿಸಿದ ಬಳಿಕ ಮಕ್ಕಳು ಹೆಚ್ಚಾಗಿ ಮೊಬೈಲ್ ನ ಒಳಗೆ ಇರುವುದನ್ನು ತಪ್ಪಿಸಲು ಈ ನೂತನ ಯೋಜನೆ ಮಾಡಲಾಗಿದೆ. ಈಗ ಊರವರ ಸಹಕಾರದಿಂದ ಚೆನ್ನಾಗಿ ಅನುಷ್ಠಾನವಾಗುತ್ತಿದೆ ಎನ್ನುತ್ತಾರೆ ಗ್ರಾಮ ಸರ್’ಪಂಚ್ ವಿಜಯ್ ಮೊಯ್ತೆ.

ಮಾನವ ಸಂಬಂಧಗಳನ್ನು ಗಟ್ಟಿಗೊಳಿಸಲು ಹಾಗೂ ವಾಸ್ತವಿಕತೆಯಿಂದ ದೂರ ಆಗದಂತೆ ತಡೆಯುವುದೇ ಡಿಜಿಟಲ್ ಡಿಟಾಕ್ಸ್ (ಡಿಜಿಟಲ್ ಮುಕ್ತ) ಉದ್ದೇಶ ಎಂದು ಹೇಳಲಾಗಿದೆ. ಡಿಜಿಟಲ್ ಡಿಟಾಕ್ಸ್ ಅಂದರೆ ಡಿಜಿಟಲ್ ಸಾಧನೆಗಳ ಬಳಕೆ ಮಾಡದೆ ದೇಹವನ್ನು ಮನಸ್ಸನ್ನು ಡಿಟಾಕ್ಸಿಫೈ ಮಾಡುವುದು. ಮಹಾರಾಷ್ಟ್ರದ ಸಾಂಗ್ಲಿಯ ಈ ಊರಿನ ಜನರು ಅದನ್ನು ಯಶಸ್ವಿಯಾಗಿ ಮಾಡಿ ತೋರಿಸಿದ್ದಾರೆ.

You may also like

Leave a Comment