Gizmore-Vogue Smart Watch : ಸ್ಮಾರ್ಟ್‌ವಾಚ್ ವಿಭಾಗದಲ್ಲಿ ಈಗಾಗಲೇ ಹಲವಾರು ಸ್ಮಾರ್ಟ್‌ವಾಚ್‌ಗಳು ಮಾರುಟ್ಟೆಯಲ್ಲಿ ತನ್ನ ಹವಾ ತೋರಿಸುತ್ತಿದೆ. ಇದೀಗ ಸ್ಮಾರ್ಟ್ ಆಕ್ಸೆಸರೀಸ್ ಬ್ರಾಂಡ್‌ಗಳಲ್ಲಿ ಒಂದಾಗಿರುವ ಗಿಜ್ಮೋರ್ ನ ವೋಗ್ ಸ್ಮಾರ್ಟ್‌ವಾಚ್ (Gizmore-Vogue Smart Watch) ಅನ್ನು ಅನಾವರಣ ಮಾಡಿದೆ.
ವೋಗ್ ಸ್ಮಾರ್ಟ್‌ವಾಚ್ (Vogue Smartwatch) ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ:
ಈ ವೋಗ್ ಸ್ಮಾರ್ಟ್‌ವಾಚ್ 1.95 ಇಂಚಿನ ಹೆಚ್‌ಡಿ ಆಲ್‌ವೇಸ್ ಆನ್ ಡಿಸ್‌ಪ್ಲೇ ಹೊಂದಿದ್ದು, ಇದು 100 ಕ್ಕೂ ಹೆಚ್ಚು ವಾಚ್ ಫೇಸ್‌ಗಳ ಆಯ್ಕೆಯನ್ನು ಪಡೆದುಕೊಂಡಿದೆ. ಜೊತೆಗೆ ಮೆನುವನ್ನು ನ್ಯಾವಿಗೇಟ್ ಮಾಡಲು ಸಹಾಯಕವಾಗುವಂತೆ ರೊಟೇಟಿಂಗ್ ಡಯಲ್ ಆಯ್ಕೆಯನ್ನು ಪಡೆದುಕೊಂಡಿದೆ. ಹಾಗೆಯೇ 600 Nits ಬ್ರೈಟ್‌ನೆಸ್ ಹೊಂದಿದೆ .
ಇನ್ನು ಈ ಗಿಜ್ಮೋರ್ ವೋಗ್ ವಾಚ್ ಶಾರ್ಟ್‌ಕಟ್ ಮೆನುಗಾಗಿ ಸ್ಪ್ಲಿಟ್ ಸ್ಕ್ರೀನ್ ವೀಕ್ಷಣೆಯನ್ನು ಬೆಂಬಲಿಸಲಿದ್ದು, ಇದರೊಂದಿಗೆ ಎರಡು ಅಗತ್ಯ ಬಟನ್‌ಗಳನ್ನು ಹೊಂದಿದೆ. ಇವುಗಳ ಮೂಲಕ ಪವರ್ ಆನ್ ಮತ್ತು ಆಫ್ ಮಾಡಬಹುದಾಗಿದೆ ಜೊತೆಗೆ ಕೊನೆಯದಾಗಿ ಬಳಸಿದ ನಂತರ ಆಫ್ ಆನ್ ಮಾಡಲು ಇವು ಸಹಕಾರಿಯಾಗಿವೆ.
ಇನ್ನು ಈ ವಾಚ್ ಜಿಪಿಎಸ್ ಸೌಲಭ್ಯ ಹೊಂದಿದ್ದು, ನಿಮ್ಮ ದೈನಂದಿನ ಚಟುವಟಿಕೆಯನ್ನು ಟ್ರ್ಯಾಕ್ ಮಾಡುತ್ತದೆ. ಜೊತೆಗೆ ವಿಫಿಟ್ ಮೊಬೈಲ್ ಆಪ್ ಮೂಲಕ ಚಟುವಟಿಕೆಯನ್ನು ಟ್ರ್ಯಾಕ್ ಮಾಡಲು ಮತ್ತು ಶೇರ್ ಮಾಡಿಕೊಳ್ಳುವ ಈ ವಾಚ್ ಅನುವು ಮಾಡಿಕೊಡುತ್ತದೆ.
ಅದಲ್ಲದೆ ಹೃದಯ ಬಡಿತ ಮಾನಿಟರಿಂಗ್ ಸೆನ್ಸರ್, SpO2 ಸೆನ್ಸರ್, ಮಹಿಳೆಯರಿಗೆ ಸಂಬಂಧಿಸಿದ ಆರೋಗ್ಯ ಸಂಬಂಧಿ ಮಾಹಿತಿ ಮತ್ತು ನಿದ್ರೆಯ ಟ್ರ್ಯಾಕಿಂಗ್ ಸೇರಿದಂತೆ ಇನ್ನಿತರೆ ಮಾಹಿತಿ ನೀಡುತ್ತದೆ.
ಇದರೊಂದಿಗೆ ಈ ಗಿಜ್ಮೋರ್ ವಾಚ್ ಕೃತಕ ಬುದ್ಧಿಮತ್ತೆ (AI) ವಾಯ್ಸ್ ಅಸಿಸ್ಟೆಂಟ್ ಸೌಲಭ್ಯ ಹೊಂದಿದ್ದು, ವಾಚ್‌ನಲ್ಲಿ ಎಲ್ಲಾ ಕಾರ್ಯವನ್ನು ಈ ಮೂಲಕ ನಿಯಂತ್ರಣ ಮಾಡಬಹುದಾಗಿದೆ.
ಈ ಹೊಸ ಸ್ಮಾರ್ಟ್‌ವಾಚ್ 10 ಗಂಟೆಗಳವರೆಗೆ ಬ್ಯಾಕಪ್ ನೀಡಲಿದೆ. ಹಾಗೆಯೇ ಇದು ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಕಂಪೆನಿ ದೃಢಪಡಿಸಿದೆ.
ಇನ್ನುಳಿದಂತೆ ಗಿಜ್ಮೋರ್ ವೋಗ್ 5.1 ಬ್ಲೂಟೂತ್ ಆವೃತ್ತಿ ಹೊಂದಿದ್ದು, ಈ ಮೂಲಕ ಉತ್ತಮ ಕನೆಕ್ಟಿವಿಟಿ ಆಯ್ಕೆ ಪಡೆದುಕೊಂಡಿದೆ.
ವೋಗ್ ಸ್ಮಾರ್ಟ್‌ವಾಚ್‌ಗೆ ಭಾರತದಲ್ಲಿ 1,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಇದನ್ನು ನೀವು ಆನ್‌ಲೈನ್ ಮೂಲಕ ಖರೀದಿ ಮಾಡಬಹುದಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್ ಕಪ್ಪು, ಕಿತ್ತಳೆ ಮತ್ತು ಬಿಳಿಯ ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.
ಈ ವಾಚ್ ಇತ್ತೀಚಿನ ಟ್ರೆಂಡ್‌ಗೆ ತಕ್ಕ ಶೈಲಿಯನ್ನು ಪಡೆದುಕೊಂಡಿದ್ದು, IP67 ರೇಟಿಂಗ್ ಹೊಂದಿದ್ದು, ಎಲ್ಲಾ ಸಮಯದಲ್ಲೂ ಅಂದರೆ ಮಳೆ ಬಿಸಿಲೆನ್ನದೆ ಬಳಕೆ ಮಾಡಬಹುದಾಗಿದೆ. ಹಾಗೆಯೇ ಆಕರ್ಷಕ ಫೀಚರ್ಸ್ ಇರುವ ಈ ವಾಚ್ ಅನ್ನು ಮುಂದಿನ 12 ತಿಂಗಳಲ್ಲಿ ಸುಮಾರು 1 ಮಿಲಿಯನ್ ನಷ್ಟು ತಯಾರಿಸುವ ಯೋಜನೆ ಕಂಪೆನಿ ರೂಪಿಸಿಕೊಂಡಿದೆ.
ಇದನ್ನೂ ಓದಿ: Nissan Magnite : ನಿಸ್ಸಾನ್ ಇಂಡಿಯಾದಿಂದ ಗೇಮ್ ಚೇಂಜರ್ ಮ್ಯಾಗ್ನೈಟ್ ಎಸ್‌ಯುವಿಗೆ ಭಾರೀ ಕಡಿತ !!
