Home » Karnataka: ರೇಷನ್‌ ಕಾರ್ಡ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌! ಹೊಸ ಮೊಬೈಲ್‌ ಅಪ್ಲಿಕೇಶನ್‌ ಬಿಡುಗಡೆ

Karnataka: ರೇಷನ್‌ ಕಾರ್ಡ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌! ಹೊಸ ಮೊಬೈಲ್‌ ಅಪ್ಲಿಕೇಶನ್‌ ಬಿಡುಗಡೆ

0 comments
Mobile Phone Track

Karnataka: ಕರ್ನಾಟಕದಲ್ಲಿ 20 ಸಾವಿರಕ್ಕೂ ಅಧಿಕಾ ನ್ಯಾಯಬೆಲೆ ಅಂಗಡಿಗಳು ಕಾರ್ಯ ನಿರ್ವಹಿಸುತ್ತಿದೆ. ಆದ್ದರಿಂದ ಎಲ್ಲಾ ರೇಷನ್‌ ಕಾರ್ಡ್‌ (Ration Card) ಬಳಕೆದಾರರಿಗೆ, ನ್ಯಾಯಬೆಲೆ ಅಂಗಡಿಯವರಿಗೆ ಅನುಕೂಲವಾಗುವಂತೆ ಸರ್ಕಾರ ಹೊಸ ಮೊಬೈಲ್‌ ಅಪ್ಲಿಕೇಶನ್‌ ಬಿಡುಗಡೆ ಮಾಡಲು ಮುಂದಾಗಿದೆ.ಹೌದು, ಕರ್ನಾಟಕದಲ್ಲಿ ಶೀಘ್ರದಲ್ಲೇ ರೇಷನ್‌ ಕಾರ್ಡ್‌ಗೆ ಸಂಬಂಧಿಸಿ ಹೊಸ ಅಪ್ಡೇಟ್‌ ಬಿಡುಗಡೆಯಾಗಲಿದೆ. ಆ ಪ್ರಕಾರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಮೊಬೈಲ್‌ ಅಪ್ಲಿಕೇಶನ್‌ ಒಂದನ್ನು ಪರಿಚಯಿಸಲು ಸಿದ್ದವಾಗಿದೆ. ಈ ಮೂಲಕ ಇನ್ಮೇಲೆ ಮೊಬೈಲ್‌ ಅಪ್ಲಿಕೇಶನ್‌ ಮೂಲಕವೂ ನ್ಯಾಯಬೆಲೆ ಅಂಗಡಿ ಜೊತೆ ವ್ಯವಹಾರ ನಡೆಸಬಹುದು.ಹೊಸ ಆಪ್‌ ಬಿಡುಗಡೆಗೆ ಪ್ಲಾನ್:‌ಒಂದು ವೇಳೆ ಈ ಆಪ್‌ ಆಧಾರಿತ ಸೇವೆ ಜಾರಿಗೆ ಬಂದರೆ, ಈ ಮೊಬೈಲ್‌ ಅಪ್ಲಿಕೇಶನ್‌ ಮತ್ತು ಸರ್ಕಾರಿ ಡೇಟಾಬೇಸ್‌ನೊಂದಿಗೆ ಸಂಯೋಜನೆಗೊಂಡಿರುವ ಎಲೆಕ್ಟ್ರಾನಿಕ್‌ ಪಾಯಿಂಟ್‌ ಆಫ್‌ ಸೇಲ್‌(EPOS) ಯಂತ್ರವು ಯೋಜನೆಯ ಫಲಾನುಭವಿಗಳ ಆಧಾರ್‌ ಮಾಹಿತಿಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸುತ್ತದೆ. ನಂತರ ಈ ಆಪ್‌ ವಿತರಿಸಿದ ಆಹಾರ ಧಾನ್ಯದ ತೂಕ, ಅಕ್ಕಿಯ ತೂಕವನ್ನು ದಾಖಲಿಸಿಕೊಂಡು ಕೇಂದ್ರದ ಸರ್ವರ್‌ ಜೊತೆ ಅಪ್ಡೇಟ್‌ ಮಾಡುತ್ತದೆ. ಈ ಮೂಲಕ ಸದ್ಯ ನ್ಯಾಯಬೆಲೆ ಅಂಗಡಿಗಳಲ್ಲಾಗುತ್ತಿರುವ ಅಕ್ರಮ, ವಂಚನೆಗೆ ಬ್ರೇಕ್‌ ಹಾಕಿ, ಪಾರದರ್ಶಕತೆಯನ್ನು ಹೆಚ್ಚಿಸಲು ದಾರಿಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಇ-ಪಾಯಿಂಟ್‌ ಆಫ್‌ ಸೇಲ್‌ (e-PoS) ವ್ಯವಸ್ಥೆಯ ವಿಸ್ತರಣೆ ಇದಾಗಿದ್ದು, ಮೊಬೈಲ್‌ ಆಪ್‌ ಮೂಲಕ ಕಾರ್ಯನಿರ್ವಹಿಸಲಿದೆ. ಈ ಆಪ್‌ ಮೂಲಕ ಆಧಾರ್‌ ಸಂಬಂಧಿಸಿದ ಬಯೋ ಮೆಟ್ರಿಕ್‌, ಸ್ಕ್ಯಾನಿಂಗ್‌, ಬಾರ್‌ಕೋಡ್‌ ಸ್ಕ್ಯಾನರ್‌ ಮತ್ತಯ ಜಿಪಿಎಸ್‌ನಂತಹ ಟ್ರ್ಯಾಕಿಂಗ್‌ ಸೌಲಭ್ಯಗಳಿವೆ. ಆದ್ದರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ನೀಡಲಾಗುವ ಪ್ರತೀ ವಸ್ತುವನ್ನು ಆಪ್‌ ಮೂಲಕ ರಿಪೋರ್ಟ್‌ ಮಾಡಲಾಗುತ್ತದೆ.ಶೀಘ್ರದಲ್ಲೇ ಎಲ್ಲಾ ಶಾಪ್‌ಗಳಲ್ಲೂ ಈ ಆಪ್‌ ಆಧಾರಿತ ಸಿಸ್ಟಮ್‌ ಕಾರ್ಯನಿರ್ವಹಿಸಲಿದೆ. ಇದೇ ವರ್ಷಾಂತ್ಯದಲ್ಲಿ ಆಪ್‌ ಬಿಡುಗಡೆ ಮಾಡಲು ಸರ್ಕಾರ ಸಜ್ಜಾಗಿದೆ ಎಂದು ವರದಿಯಾಗಿದೆ.

You may also like