Home » WhatsApp Ban: ಐಫೋನ್ ಬಳಕೆದಾರರಿಗೆ ಆಘಾತ- ವಾಟ್ಸಪ್ ನಿಷೇಧಿಸಲು ಸರ್ಕಾರ ಆದೇಶ !!

WhatsApp Ban: ಐಫೋನ್ ಬಳಕೆದಾರರಿಗೆ ಆಘಾತ- ವಾಟ್ಸಪ್ ನಿಷೇಧಿಸಲು ಸರ್ಕಾರ ಆದೇಶ !!

359 comments
WhatsApp Ban

WhatsApp Ban: ಆ್ಯಪಲ್ ತನ್ನ ಐಫೋನ್‌(iphone)ಗಳಿಂದ ಮೆಟಾ ಮಾಲೀಕತ್ವದ ವ್ಯಾಟ್ಸ್ಆ್ಯಪ್(WhatsApp Ban) ಹಾಗೂ ಥ್ರೆಡ್ಸ್ ಆ್ಯಪ್ ತೆಗೆದು ಹಾಕಿದೆ. ಇದು ಚೀನಾ ಸರ್ಕಾರದ ಆದೇಶದ ಬಳಿಕ ಇಂದು ಆ್ಯಪಲ್ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ: Peacock: ಬೆಳ್ಳಂಬೆಳಗ್ಗೆ ನೀವು ನವಿಲು ನೋಡುತ್ತೀರಾ? ಹಾಗಿದ್ರೆ ಮಿಸ್ ಮಾಡ್ದೆ ಈ ಸ್ಟೋರಿ ನೋಡಿ

ಹೌದು, ದೇಶದ ಅತಿದೊಡ್ಡ ಬ್ರಾಂಡೆಡ್ ಕಂಪೆನಿಗಳಲ್ಲಿ ಒಂದಾದ ಆ್ಯಪಲ್(Apple) ಮಹತ್ವದ ನಿರ್ಧಾರ ಕೈಗೊಂಡಿದ್ದು ಚೀನಾ(China) ದೇಶದಲ್ಲಿ ಮಾರಾಟ ಮಾಡುವ ಐಫೋನ್‌ಗಳಿಂದ ಮೆಟಾ ಮಾಲೀಕತ್ವದ ವ್ಯಾಟ್ಸ್ಆ್ಯಪ್, ಥ್ರೆಡ್ಸ್ ಎರಡೂ ಆ್ಯಪ್‌ಗಳನ್ನು ತೆಗೆದುಹಾಕಿದೆ. ಇನ್ಮುಂದೆ ಬಳಕೆದಾರರಿಗೆ ಡೌನ್ಲೋಡ್ ಮಾಡಲು ಸಾಧ್ಯವಿಲ್ಲ. ಚೀನಾ ಸರ್ಕಾರದ ಆದೇಶದ ಬಳಿಕ ಇಂದು ಆ್ಯಪಲ್ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ: Teachers Transfer: ಶಿಕ್ಷಕರ ವರ್ಗಾವಣೆ; ಸಕಲ ಸಿದ್ಧತೆ ಮಾಡಿಕೊಂಡ ಶಿಕ್ಷಣ ಇಲಾಖೆ

ಈ ಕುರಿತು ಚೀನಾದ ಇಂಟರ್ನೆಟ್ ರೆಗ್ಯುಲೇಟರ್ ಸೈಬರ್‌ಸ್ಪೇಸ್ ಅಡ್ಮಿನಿಸ್ಟ್ರೇಶನ್(Internet regulator Cyberspace Administration) ಇಲಾಖೆ ಮಹತ್ವದ ಅಧಿಸೂಚನೆ ಹೊರಡಿಸಿದ್ದು, ಐಫೋನ್‌ಗಳಿಂದ ಮೇಟಾ ಮಾಲೀಕತ್ವದ ವ್ಯಾಟ್ಸ್ಆ್ಯಪ್ ಹಾಗೂ ಥ್ರೆಡ್ಸ್ ಆ್ಯಪ್ ತೆಗೆದು ಹಾಕವಂತೆ ಸೂಚಿಸಿದೆ. ರಾಷ್ಟ್ರೀಯ ಭದ್ರತೆಗೆ ಈ ಎರಡು ಆ್ಯಪ್ ಅಪಾಯ ತಂದೊಡ್ಡುತ್ತಿದೆ. ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಚೀನಾ ಯಾವತ್ತೂ ರಾಜೀಮಾಡಿಕೊಳ್ಳುವುದಿಲ್ಲ. ಹೀಗಾಗಿ ಈ ಎರಡೂ ಆಪ್ ಗಳನ್ನು ರದ್ಧು ಮಾಡಲು ಆದೇಶಿದೆ ಎಂದು ಸರ್ಕಾರ ತಿಳಿಸಿದೆ.

You may also like

Leave a Comment