Honda city :ಪ್ರಸಿದ್ದ ಕಾರು ಕಂಪನಿಗಳಲ್ಲಿ ಹೋಂಡಾ(Honda) ಕೂಡ ಒಂದಾಗಿದೆ. ಪ್ರತಿಬಾರಿ ವಿಭಿನ್ನ ವಿನ್ಯಾಸದ, ಅತ್ಯುತ್ತಮ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಹಾಗೆಯೇ ಇದೀಗ ಹೋಂಡಾ ಕಾರ್ಸ್(Honda Cars) ಕಂಪನಿಯು ತನ್ನ ನವೀಕೃತ ಸಿಟಿ ಸೆಡಾನ್(Honda city sedan) ಕಾರು ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಈ ನೂತನ ಕಾರಿನ ಮಾದರಿಯೂ ಮಹತ್ವದ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಸದ್ಯ ಈ ಕಾರು ಗ್ರಾಹಕರ ಮನಸೆಳೆಯೋದು ಪಕ್ಕಾ!!.
ಸಿಟಿ ಸೆಡಾನ್ ಕಾರು(city sedan) ಮಾದರಿಯು ಎಸ್ ವಿ, ವಿ, ವಿಎಕ್ಸ್ ಮತ್ತು ಜೆಡ್ಎಕ್ಸ್ ಎಂಬ ನಾಲ್ಕು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಈ ಕಾರಿನ ಆರಂಭಿಕ ಎಕ್ಸ್ ಶೋರೂಂ ಬೆಲೆ ರೂ. 11.49 ಲಕ್ಷ ಆಗಿದ್ದು, ಟಾಪ್ ಎಂಡ್ ಮಾದರಿಗೆ ರೂ. 20.39 ಲಕ್ಷ ಬೆಲೆ ಇರಲಿದೆ. ಸಿಟಿ ಸೆಡಾನ್ ಕಾರಿನ ಮಾದರಿ ಈಗಾಗಲೇ ರೂ. 21 ಸಾವಿರ ಮುಂಗಡದೊಂದಿಗೆ ಬುಕಿಂಗ್ ಆರಂಭವಾಗಿದ್ದು, ಹೊಸ ಕಾರು ಮಾದರಿಯನ್ನು ಇದೇ ತಿಂಗಳು ವಿತರಣೆ ಆಗಲಿದೆ.
ಹೊಸ ಸಿಟಿ ಸೆಡಾನ್ ಕಾರು ಪೆಟ್ರೋಲ್ ಮತ್ತು ಹೈಬ್ರಿಡ್ ಮಾದರಿಗಳಲ್ಲಿ ಮಾತ್ರ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ. ಇದರಲ್ಲಿ ಪೆಟ್ರೋಲ್ ಮಾದರಿಯು 6 ಸ್ಪೀಡ್ ಮ್ಯಾನುವಲ್ ಮತ್ತು ಸಿಟಿವಿ ಗೇರ್ ಆಯ್ಕೆಯೊಂದಿಗೆ 121 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಇದರ ಹೈಬ್ರಿಡ್ ಮಾದರಿಯು ಆಟ್ಕಿನ್ಸನ್ ಹೈಬ್ರಿಡ್ ಎಂಜಿನ್ ನೊಂದಿಗೆ ಇಸಿವಿಟಿ ಗೇರ್ ಬಾಕ್ಸ್ ಹೊಂದಿದ್ದು, ಇದು 126 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಪ್ರತಿ ಲೀಟರ್ ಪೆಟ್ರೋಲ್ ಗೆ 26.5 ಕಿ.ಮೀ ಮೈಲೇಜ್ ನೀಡುತ್ತದೆ.
ಹೊಸ ಸಿಟಿ ಸೆಡಾನ್ ಕಾರಿನಲ್ಲಿ ಟಾಪ್ ಎಂಡ್ ವೆರಿಯೆಂಟ್ ಗಳಲ್ಲಿ ಅಡ್ವಾನ್ಸ್ ಡ್ರೈವಿಂಗ್ ಸಿಸ್ಟಂ ಸೌಲಭ್ಯವಿದ್ದು, ಸುರಕ್ಷತೆಗಾಗಿ 6 ಏರ್ ಬ್ಯಾಗ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರೈನ್ ಸೆನ್ಸಿಂಗ್ ವೈಪರ್, ಆಂಬಿಯೆಂಟ್ ಲೈಟಿಂಗ್, ವೈರ್ ಲೆಸ್ ಚಾರ್ಜರ್, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸೌಲಭ್ಯಗಳು ಇವೆ.
