Realme smart TV : ದೈನಂದಿನ ಬಳಕೆಯ ವಸ್ತುಗಳು ಸ್ಮಾರ್ಟ್ ರೂಪ ಪಡೆದುಕೊಳ್ಳುತ್ತಿವೆ. ಸ್ಮಾರ್ಟ್ ವಾಚ್, ಸ್ಮಾರ್ಟ್ ಫಿಟ್ನೆಸ್ ಬ್ಯಾಂಡ್, ಸ್ಮಾರ್ಟ್ ಪ್ಲಗ್, ಸ್ಮಾರ್ಟ್ ಹಿಡನ್ ಕ್ಯಾಮೆರಾಗಳು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವುಗಳ ಲಿಸ್ಟ್ ನಲ್ಲಿ ಸ್ಮಾರ್ಟ್ ಟಿವಿ ಕೂಡ ದೈನಂದಿನ ಬಳಕೆಯ ವಸ್ತುಗಳಲ್ಲಿಯು ಒಂದಾಗಿದೆ.
ಇತ್ತೀಚಿಗೆ ಸ್ಮಾರ್ಟ್ ಟಿವಿಗಳಿಗೆ ಬೇಡಿಕೆ ಹೆಚ್ಚಾದಂತೆ ಸ್ಮಾರ್ಟ್‌ಟಿವಿಗಳ ಬೆಲೆಯೂ ಸಹ ಹೆಚ್ಚಾಗುತ್ತಿದೆ. ಇದೀಗ ಇ- ಕಾಮರ್ಸ್ ಸೈಟ್‌ನಲ್ಲಿ ಅತ್ಯುತ್ತಮವಾದ ಸ್ಮಾರ್ಟ್‌ಟಿವಿ 36% ಡಿಸ್ಕ್‌ಂಟ್ ಪಡೆದುಕೊಂಡಿದೆ. ಈ ಮೂಲಕ ಕೈಗೆಟಕುವ ದರದಲ್ಲಿ ಖರೀದಿ ಮಾಡಬಹುದಾಗಿದೆ.
ಹೌದು, ಸ್ಮಾರ್ಟ್‌ಟಿವಿ ಖರೀದಿ ಮಾಡಬೇಕು ಎಂದುಕೊಂಡವರಿಗೆ ಇದು ಅತ್ಯುತ್ತಮ ಸಮಯ ಯಾಕೆಂದರೆ ಒಂದೆಡೆ ಐಪಿಎಲ್ ಹಾಗೂ ಮತ್ತೊಂದೆಡೆ ಈ ರಿಯಲ್‌ಮಿ ಸ್ಮಾರ್ಟ್‌ಟಿವಿ ಮೇಲೆ 36% ಡಿಸ್ಕೌಂಟ್ ಘೋಷಣೆ ಮಾಡಿರುವುದು. ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.
43 ಇಂಚಿನ ಈ ರಿಯಲ್‌ಮಿ ಸ್ಮಾರ್ಟ್‌ಟಿವಿ (Realme smart TV)35,999 ರೂ. ಗಳ ಆಫರ್ ಬೆಲೆ ಹೊಂದಿದ್ದು, 36% ರಿಯಾಯಿತಿ ಪಡೆಯುವ ಮೂಲಕ ನಿಮಗೆ 22,999 ರೂ. ಗಳಿಗೆ ಲಭ್ಯವಾಗಲಿದೆ. ಅದಾಗ್ಯೂ ಇನ್ನೂ ಹೆಚ್ಚಿನ ಆಫರ್ ಬೆಲೆಯಲ್ಲಿ ಖರೀದಿ ಮಾಡಬೇಕು ಎಂದರೆ ಅದಕ್ಕೂ ಅವಕಾಶ ಕಲ್ಪಿಸಲಾಗಿದೆ.
ಪ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಲಭ್ಯವಿದ್ದು, ಈ ಟಿವಿ ಖರೀದಿಯ ಮೇಲೆ ವಿನಿಮಯ ಆಫರ್ ಸಹ ಇದೆ. ಹೀಗಾಗಿ ನೀವು 16,900 ರೂ. ಗಳ ವರೆಗೂ ಡಿಸ್ಕೌಂಟ್ ಪಡೆದುಕೊಳ್ಳಬಹುದು. ಇದರೊಂದಿಗೆ ಡಿಬಿಎಸ್, ಆಕ್ಸಿಸ್ ಬ್ಯಾಂಕ್ ಕಾರ್ಡ್‌ದಾರರಿಗೆ ಇನ್ನೂ ಹೆಚ್ಚಿನ ಆಫರ್ ಲಭವಾಗಲಿದೆ. ಇದರೊಂದಿಗೆ ಗಿಫ್ಟ್ ಕಾರ್ಡ್ ಸಹ ಲಭ್ಯವಿದೆ.
ರಿಯಲ್‌ಮಿಯ ಪ್ರಮುಖ ಫಿಚರ್ಸ್ ಬಗ್ಗೆ ತಿಳಿಯೋಣ :
ಇದು 43 ಇಂಚಿನ ಫುಲ್ ಹೆಚ್‌ಡಿ ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, 1920 x 1080 ಪಿಕ್ಸೆಲ್ ರೆಸಲ್ಯೂಶನ್ ನೀಡಲಿದೆ. ಹಾಗೆಯೇ 60 Hz ರಿಫ್ರೆಶ್ ರೇಟ್ ಆಯ್ಕೆ ಹೊಂದಿದ್ದು, ಟಿವಿ ವೀಕ್ಷಣೆಯು ತುಂಬಾ ಆಕರ್ಷಣೀಯವಾಗಿರಲಿದೆ.
ಇನ್ನು 400 nits ಬೈಟ್‌ನೆಸ್ ಆಯ್ಕೆ ಸಹ ಇದೆ. ಇಷ್ಟೆಲ್ಲಾ ಸೌಲಭ್ಯದೊಂದಿಗೆ ಈ ಟಿವಿಯನ್ನು 178 ಡಿಗ್ರಿಯಲ್ಲಿಯೂ ಸಹ ಸ್ಪಷ್ಟವಾಗಿ ವೀಕ್ಷಣೆ ಮಾಡಬಹುದು. ಇನ್ನುಳಿದಂತೆ ಇದು ತೆಳುವಾದ ಬಿಜೆಲ್ ವಿನ್ಯಾಸವನ್ನು ಹೊಂದಿದ್ದು, ಈ ಮೂಲಕ ಎಡ್ಸ್-ಟು-ಎಡ್ ಚಿತ್ರಗಳನ್ನು ನೀಡುತ್ತದೆ.
ಈ ಸ್ಮಾರ್ಟ್‌ಟಿವಿ ಮೀಡಿಯಾ ಟೆಕ್ ಕ್ವಾಡ್- ಕೋರ್ ಪ್ರೊಸೆಸರ್ ನಲ್ಲಿ ಕಾರ್ಯ ನಿರ್ವಹಿಸಲಿದ್ದು , ಇದರಲ್ಲಿ ARM ಕಾರ್ಟೆಕ್ಸ್ A55 CPU ಮತ್ತು ಮಾಲಿ-G31 MP2 GPU ಜೊತೆಗೆ ಪ್ಯಾಕ್ ಆಗಿದೆ. ಹಾಗೆಯೇ 1 GB RAM ಹಾಗೂ 8 GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹೀಗಾಗಿ ಸಾಕಷ್ಟು ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.
ಇದರೊಂದಿಗೆ ಕ್ರೋಮಾಕಾಸ್ಟ್ ಫೀಚರ್ಸ್ ಸಹ ಇದ್ದು, ಈ ಮೂಲಕ ಅತ್ಯಂತ ಸರಳವಾಗಿ ನಿಮ್ಮ ಸ್ಮಾರ್ಟ್ ಫೋನ್‌ನಿಂದ ಮಲ್ಟಿಮೀಡಿಯಾ ಪ್ರೊಜೆಕ್ಷನ್‌ಗಾಗಿ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಆಡಿಯೋ ಫೀಚರ್ಸ್‌ನಲ್ಲಿ 4 ಸ್ಪೀಕರ್‌ಗಳನ್ನು ಹೊಂದಿದ್ದು, ಪ್ರತಿ ಸ್ಪೀಕರ್ ಟ್ವಿಟರ್ ಮತ್ತು ಪೂರ್ಣ ಆವರ್ತನ ಸ್ಪೀಕರ್ ಅನ್ನು ಒಳಗೊಂಡಿರುತ್ತದೆ ಹಾಗೆಯೇ ಇದು 24 W ಸ್ಪೀಕರ್ ಔಟ್‌ಪುಟ್ ಹೊಂದಿದೆ.
ಇದರೊಂದಿಗೆ MPEG1/2 ಲೇಯರ್1, MPEG1/2 ao 2, MPEG1/2/2.5 ea 3, AAC, HEAAC, WMA, WMA Pro, LPCM, IMA-ADPCM/MS-ADPCM, AC3, EAC3 ಸೇರಿದಂತೆ ಇನ್ನಿತರೆ ಆಡಿಯೋಗಳಿಗೆ ಬೆಂಬಲ ನೀಡುತ್ತದೆ.
ಹಾಗೆಯೇ ಕನೆಕ್ಟಿವಿಟಿ ಆಯ್ಕೆಯಲ್ಲಿ ಮೂರು ಹೆಚ್‌ಡಿಎಮ್‌ಐ, ಎರಡು ಯುಎಸ್‌ಬಿ
ಹಾಗೆಯೇ ಕನೆಕ್ಟಿವಿಟಿ ಆಯ್ಕೆಯಲ್ಲಿ ಮೂರು ಹೆಚ್‌ಡಿಎಮ್‌ಐ, ಎರಡು ಯುಎಸ್‌ಬಿ ಸೇರಿದಂತೆ ಹೆಡ್‌ಫೋನ್ ಜಾಕ್ ಅನ್ನು ಪಡೆದುಕೊಂಡಿದೆ.
ಒಟ್ಟಿನಲ್ಲಿ ಇದರಲ್ಲಿರುವ ಡಾಲ್ಟಿ ಆಡಿಯೊ ಅಡಾಪ್ಟರ್ ನಿಮ್ಮ ಅಕೌಸ್ಟಿಕ್ ಅನುಭವವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ನೀಡಲಿದೆ. ಇದರಿಂದ ಸಿನಿಮಾ ಹಾಗೂ ಸ್ಪೋರ್ಟ್ಸ್ ಸಂಬಂಧಿ ವಿಡಿಯೋ ನೋಡುವಾಗ ಸಿನಿಮಾ ಥಿಯೇಟರ್ ಅನುಭವ ಆಗಲಿದೆ.
ಇದನ್ನೂ ಓದಿ: Cars Discontinued : ಇಂದಿನಿಂದ ಈ 10 ವಾಹನಗಳು ಸ್ಥಗಿತಗೊಳ್ಳಲಿವೆ, ನಿಮ್ಮ ನೆಚ್ಚಿನ ಕಾರು ಇದರಲ್ಲಿ ಸೇರಿದೆಯೇ? ಚೆಕ್ ಮಾಡಿ
