Home » Hyundai Verna Vs Honda city: 2023ರ ಹ್ಯುಂಡೈ ವೆರ್ನಾ ಹಾಗೂ 2023ರ ಹೋಂಡಾ ಸಿಟಿ ಇದರಲ್ಲಿ ಯಾವುದು ಉತ್ತಮ?

Hyundai Verna Vs Honda city: 2023ರ ಹ್ಯುಂಡೈ ವೆರ್ನಾ ಹಾಗೂ 2023ರ ಹೋಂಡಾ ಸಿಟಿ ಇದರಲ್ಲಿ ಯಾವುದು ಉತ್ತಮ?

0 comments
Hyundai Verna Vs Honda city

Hyundai-Verna Vs Honda-city: ಜನಪ್ರಿಯ ಕಾರು ತಯಾರಕ ಕಂಪನಿಗಳು ಹಲವು ಹೊಚ್ಚ ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಗ್ರಾಹಕರಿಗೆ ಉತ್ತಮ ವೈಶಿಷ್ಟ್ಯದ ಅತ್ಯುತ್ತಮ ಕಾರುಗಳನ್ನು ಪರಿಚಯಿಸುವ ಮೂಲಕ ಜನಪ್ರಿಯತೆ ಗಳಿಸುತ್ತಿದೆ. ಹಾಗೆಯೇ ಹ್ಯುಂಡೈ ಮೋಟಾರ್ ಇಂಡಿಯಾ (Hyundai motors) ತನ್ನ ಬಹುನಿರೀಕ್ಶಿತ 2023ರ ವೆರ್ನಾ ಸೆಡಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಸದ್ಯ 2023ರ ಹ್ಯುಂಡೈ ವೆರ್ನಾ ಕಾರಿನ ಪ್ರಮುಖ ಪ್ರತಿಸ್ಪರ್ಧಿಯಾದ 2023ರ ಹೋಂಡಾ ಸಿಟಿಯ ಜೊತೆಗೆ ಹೋಲಿಕೆ ಮಾಡಿದ್ದು (Hyundai-Verna Vs Honda-city), ಇದರ ಮಾಹಿತಿ ಇಲ್ಲಿದೆ.

ಹೋಂಡಾ ಸಿಟಿ (Honda city) ಕಾರಿನಲ್ಲಿ ಲೆವೆಲ್-2 ADAS ಅನ್ನು ನೀಡಲಾಗಿದೆ. ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಆಟೋ-ಡಿಮ್ಮಿಂಗ್ ಫ್ರೇಮ್‌ಲೆಸ್ ಐಆರ್‌ವಿಎಂ, ಸನ್‌ರೂಫ್, ರೈನ್-ಸೆನ್ಸಿಂಗ್ ವೈಪರ್‌ಗಳು, ಆಂಬಿಯೆಂಟ್ ಲೈಟಿಂಗ್, 8-ಇಂಚಿನ ಇನ್ಫೋಟೈನ್‌ಮೆಂಟ್ ಯೂನಿಟ್, 7- ಮುಂತಾದ ಫೀಚರ್ಸ್ ಗಳು ಇವೆ.

ಹ್ಯುಂಡೈ ವೆರ್ನಾ ಕಾರಿನಲ್ಲಿ ಲೆವೆಲ್-2 ADAS ಅನ್ನು ಹೊಂದಿದೆ. ಈ ಕಾರಿನ ಮುಂಭಾಗದ ಸೀಟುಗಳು ಮತ್ತು ಚಾಲಿತ ಡ್ರೈವರ್ ಸೀಟ್‌ಗಳನ್ನು ಒಳಗೊಂಡಂತೆ ಹಲವಾರು ಮೊದಲ-ಇನ್-ಸೆಗ್ಮೆಂಟ್ ಫೀಚರ್ಸ್ ಗಳೊಂದಿಗೆ ಬರುತ್ತದೆ. ಈ ಫೀಚರ್ಸ್ ಜೊತೆಗೆ ಸೆಡಾನ್ 10.25-ಇಂಚಿನ ಇನ್ಫೋಟೈನ್‌ಮೆಂಟ್ ಯೂನಿಟ್, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಸನ್‌ರೂಫ್, ಸ್ಮಾರ್ಟ್ ಬೂಟ್, ಕನೆಕ್ಟ್-ಕಾರ್ ಟೆಕ್ ಇದೆ.

ಹೋಂಡಾ ಸಿಟಿ ಕಾರು 1.5-ಲೀಟರ್, ನ್ಯಾಚುರಲ್ ಆಸ್ಪರ್ಡ್ ಪೆಟ್ರೋಲ್ ಎಂಜಿನ್ 120bhp ಪವರ್ ಮತ್ತು 145Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರಿನ ಲೀಟರ್ ಅಟ್ಕಿನ್ಸನ್ ಸೈಕಲ್ ಎಂಜಿನ್ ಹೊಂದಿರುವ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್ ಸಂಯೋಜಿತವಾಗಿ 125bhp ಮತ್ತು 253Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ.

2023ರ ಹ್ಯುಂಡೈ ವೆರ್ನಾ (Hyundai Verna) ಕಾರಿನಲ್ಲಿ ಎರಡು ಎಂಜಿನ್ ಆಯ್ಕೆಗಳು ಇದ್ದು, ಇದು 1.5 ಲೀಟರ್ ಪೆಟ್ರೋಲ್ ಎಂಜಿನ್ 113.4 ಬಿಹೆಚ್‍ಪಿ ಪವರ್ ಮತ್ತು 144 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಹಾಗೆಯೇ 1.5 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ 158bhp ಮತ್ತು 253Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

2023ರ ಹೋಂಡಾ ಸಿಟಿ ಸೆಡಾನ್‌ನ ಬೆಲೆಯು ರೂ.11.49 ಲಕ್ಷವಾಗಿದೆ, ಆದರೆ ಸೆಡಾನ್‌ನ ಇ:ಹೆಚ್‌ಇವಿ (ಸ್ಟ್ರಾಂಗ್ ಹೈಬ್ರಿಡ್) ರೂಪಾಂತರಗಳ ಪ್ರಾರಂಭಿಕ ಎಕ್ಸ್ ಶೋರೂಂ ಬೆಲೆಗಳು ರೂ,18.89 ಲಕ್ಷವಾಗಿದೆ. ಹೊಸ ಹ್ಯುಂಡೈ ವೆರ್ನಾ ಕಾರಿನ ಪ್ರಾರಂಭಿಕ ಎಕ್ಸ್ ಶೋರೂಂ ಬೆಲೆಯು ರೂ, 10.89 ಲಕ್ಷಗಳಾಗಿದೆ. ಪವರ್ ಫುಲ್ 1.5 ಟರ್ಬೊ’ಎಂಜಿನ್ ಹೊಂದಿರುವ ರೂಪಾಂತರಗಳ ಪ್ರಾರಂಭಿಕ ಎಕ್ಸ್ ಶೋರೂಂ ಬೆಲೆಯು ರೂ.14.83 ಲಕ್ಷಗಳಾಗಿದೆ.

You may also like

Leave a Comment