Home » Technology : ಇನ್ವರ್ಟರ್ ಬ್ಯಾಟರಿ ಚಾರ್ಜ್ ಮಾಡಿದ ನಂತರವೂ ಹೆಚ್ಚು ಸಮಯ ಇರುವುದಿಲ್ಲವೇ? ನಿಮ್ಮ ಈ ಸಮಸ್ಯೆಗೆ ಇಲ್ಲಿದೆ ಸುಲಭ ಟ್ರಿಕ್ಸ್!

Technology : ಇನ್ವರ್ಟರ್ ಬ್ಯಾಟರಿ ಚಾರ್ಜ್ ಮಾಡಿದ ನಂತರವೂ ಹೆಚ್ಚು ಸಮಯ ಇರುವುದಿಲ್ಲವೇ? ನಿಮ್ಮ ಈ ಸಮಸ್ಯೆಗೆ ಇಲ್ಲಿದೆ ಸುಲಭ ಟ್ರಿಕ್ಸ್!

0 comments
Invertor Battery

Invertor Battery : ಇಂದಿನ ದಿನದಲ್ಲಿ ಹೆಚ್ಚಾಗಿ ಎಲ್ಲರ ಮನೆಯಲ್ಲೂ ಇನ್ವರ್ಟರ್ (Invertor) ಇದ್ದೇ ಇದೆ. ವಿದ್ಯುತ್ ಯಾವ ಕ್ಷಣದಲ್ಲಿ ಕೈ ಕೊಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮಳೆಗಾಲದಲ್ಲಂತೂ ಗಾಳಿ, ಮಳೆಗೆ ವಿದ್ಯುತ್ ಇರೋದೇ ಇಲ್ಲ. ಹಾಗಾಗಿ ಇನ್ವರ್ಟರ್ ತುಂಬಾ ಮುಖ್ಯವಾಗುತ್ತದೆ. ಕೆಲವೊಮ್ಮೆ ಚಾರ್ಜ್ ಮಾಡಿದ ನಂತರವೂ ಇನ್ವರ್ಟರ್ ಬ್ಯಾಟರಿ (Invertor Battery) ಹೆಚ್ಚು ಕಾಲ ಉಳಿಯುವುದಿಲ್ಲ. ಇದಕ್ಕೆ ಸಿಂಪಲ್ ಟ್ರಿಕ್ಸ್ ಇಲ್ಲಿದೆ.

ಇನ್ವರ್ಟರ್​ ಚಾರ್ಜ್​ ಬೇಗನೆ ಮುಗಿಯಲು ಕೆಲವೊಂದು ಕಾರಣಗಳಿವೆ. ನೀವು ಇನ್ವರ್ಟರ್‌ನ ಬ್ಯಾಟರಿಯನ್ನು 4-5 ಗಂಟೆಗಳ ಕಾಲ ನಿರಂತರವಾಗಿ ಚಾರ್ಜ್ ಮಾಡಿದರುನೂ 1 ಗಂಟೆಯ ನಂತರ ಅದು ಖಾಲಿಯಾಗುತ್ತಿದೆ. ಇನ್ವರ್ಟರ್ ಚಾರ್ಜ್ ಮಾಡಿದ ಕೆಲ ಗಂಟೆಗಳ ನಂತರವೂ ಅದರ ಬ್ಯಾಟರಿ ದೀರ್ಘ ಬ್ಯಾಕಪ್ ನೀಡದಿದ್ದರೆ, ಮೊದಲು ಅದರ ಆಮ್ಲ ಮಟ್ಟವನ್ನು ಪರಿಶೀಲಿಸಬೇಕು. ಯಾಕಂದ್ರೆ ಬ್ಯಾಟರಿಯಲ್ಲಿ ಕಡಿಮೆ ಆಮ್ಲದ ಮಟ್ಟದಿಂದಾಗಿ, ಬ್ಯಾಟರಿಯು ದೀರ್ಘಕಾಲದವರೆಗೆ ಬ್ಯಾಕಪ್ ನೀಡುವುದಿಲ್ಲ. ಅಲ್ಲದೆ, ಬ್ಯಾಟರಿಯ ಮೇಲೆ ಹೆಚ್ಚಿನ ಲೋಡ್ ನೀಡಿದರೆ, ಬ್ಯಾಟರಿಯ ಟರ್ಮಿನಲ್‌ನಲ್ಲಿ ಕೊಳೆ ಸಂಗ್ರಹವಾದರೆ ಬ್ಯಾಟರಿ ಬ್ಯಾಕಪ್ ಕಡಿಮೆಯಾಗುತ್ತದೆ. ಹಾಗೆಯೇ ಬ್ಯಾಟರಿಯ ಸೀಲಿಂಗ್ ಕೂಡ ಬ್ಯಾಟರಿ ಬ್ಯಾಕಪ್ ಅನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ : ಅಡುಗೆ ಮನೆಯ ಆಹಾರ ಸಾಮಾಗ್ರಿಗಳು ವ್ಯರ್ಥವಾಗದಂತೆ ನೋಡಿಕೊಳ್ಳುವ ಟಿಪ್ಸ್‌ ನಿಮಗಾಗಿ ಇಲ್ಲಿದೆ !

ಇನ್ವರ್ಟರ್ ಬ್ಯಾಟರಿ ದೀರ್ಘಕಾಲದವರೆಗೆ ಬರಬೇಕೆಂದರೆ, ಬ್ಯಾಟರಿಯ ಆಮ್ಲ ಮಟ್ಟದ ಬಗ್ಗೆ ಗಮನಹರಿಸಿ. ನೀವು ಈ ಆಸಿಡ್ ಮಟ್ಟವನ್ನು ಪರೀಕ್ಷಿಸಲು ತಜ್ಞರ ಸಹಾಯವನ್ನು ತೆಗೆದುಕೊಳ್ಳಬಹುದು. ಇದಲ್ಲದೆ, ಆಸಿಡ್ ಮಟ್ಟವನ್ನು ಪರೀಕ್ಷಿಸಲು ವಿಶೇಷ ರೀತಿಯ ಸಾಧನವಿರುತ್ತದೆ. ಅದು ಹಾರ್ಡ್‌ವೇರ್ ಅಥವಾ ಬ್ಯಾಟರಿ ಅಂಗಡಿಯಲ್ಲಿ ಲಭ್ಯವಾಗುತ್ತದೆ.

ಬ್ಯಾಟರಿಯ ಮೇಲೆ ಹೆಚ್ಚಿನ ಹೊರೆ ಇರಬಾರದು. ಬ್ಯಾಟರಿಯ ಟರ್ಮಿನಲ್ ಅನ್ನು ಸ್ವಚ್ಛಗೊಳಿಸುತ್ತಿರಬೇಕು. ಮುಖ್ಯವಾಗಿ, ಇನ್ವರ್ಟರ್ ಬ್ಯಾಟರಿಯನ್ನು ಒದ್ದೆಯಾದ ಸ್ಥಳದಲ್ಲಿ ಇಡಬೇಡಿ. ಹೀಗೆ ಮಾಡುವುದರಿಂದ ಚಾರ್ಜ್ ಮಾಡಿದ ನಂತರವೂ ಇನ್ವರ್ಟರ್ ಬ್ಯಾಟರಿ ಹೆಚ್ಚು ಕಾಲ ಉಳಿಸಬಹುದು.

You may also like

Leave a Comment