Home » Mahindra xuv 700 : ಬರಲಿದೆ ಮಹೀಂದ್ರಾದಿಂದ ಅದ್ಭುತ ಕಾರುಗಳು! ಯಾವುದೆಲ್ಲ? ಇಲ್ಲಿದೆ ಲಿಸ್ಟ್‌

Mahindra xuv 700 : ಬರಲಿದೆ ಮಹೀಂದ್ರಾದಿಂದ ಅದ್ಭುತ ಕಾರುಗಳು! ಯಾವುದೆಲ್ಲ? ಇಲ್ಲಿದೆ ಲಿಸ್ಟ್‌

0 comments
Mahindra xuv 700

Mahindra xuv 700 : ಇತ್ತೀಚೆಗೆ ಜನರು ಹೊಸ ಮಾದರಿ ಕಾರನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ. ಅದರಲ್ಲೂ ಮಹೀಂದ್ರಾ (Mahindra ) ಕಂಪನಿಯ (company )ಕಾರುಗಳು ಈಗಾಗಲೇ ಭಾರತದಲ್ಲಿ ಸಾಕಷ್ಟು ಖ್ಯಾತಿಗಳಿಸಿವೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ 5 ಅಥವಾ 7 ಆಸನ ವ್ಯವಸ್ಥೆಯನ್ನು ಹೊಂದಿರುವ ಮಹಿಂದ್ರಾ ಸ್ಕಾರ್ಪಿಯೋ ಎಸ್‌ಯುವಿಗಳನ್ನು ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ.

ಇದೀಗ, ಮುಂಬರುವ ಎರಡು – ಮೂರು ವರ್ಷಗಳಲ್ಲಿ ಕಂಪನಿಯು ಇಂಧನ ಹಾಗೂ ಎಲೆಕ್ಟ್ರಿಕ್ ಚಾಲಿತ ಕಾರುಗಳನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. ಬಹುನೀರಿಕ್ಷಿತ ಬೊಲೆರೋ ನಿಯೋದ ನವೀಕರಿಸಿದ ಆವೃತ್ತಿಯಾದ ಬೊಲೆರೋ ನಿಯೋ ಪ್ಲಸ್ (Bolero Neo Plus) ಸಿದ್ಧಪಡಿಸುವಲ್ಲಿ ಮಹೀಂದ್ರಾ ಕಂಪನಿ ನಿರತವಾಗಿದೆ.

ಸದ್ಯ ಬೊಲೆರೋ ನಿಯೋ ಪ್ಲಸ್ ಹಿಂದಿನ ಮಾದರಿಯಂತೆ 1.5 – ಲೀಟರ್ ಡಿಸೇಲ್ ಎಂಜಿನ್ ಹೊಂದಿರಲಿದ್ದು, 100 hp ಪವರ್ ಉತ್ಪಾದಿಸಲಿದೆ. 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿರಲಿದೆ.

ಮಹೀಂದ್ರಾ ಮುಂದಿನ ವರ್ಷ ಅಂದರೆ 2024ರಲ್ಲಿ ತನ್ನ ಜನಪ್ರಿಯ 5 ಡೋರ್ ಥಾರ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ. ಇದು ಪೆಟ್ರೋಲ್, ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದ್ದು, ಶೀಘ್ರದಲ್ಲೇ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿರುವ ಮಾರುತಿ ಸುಜುಕಿ 5 ಡೋರ್ ಜಿಮ್ನಿ ಹಾಗೂ 5 ಡೋರ್ ಫೋರ್ಸ್ ಗೂರ್ಖಾಗೆ ಪ್ರತಿಸ್ಪರ್ಧಿಯಾಗಲಿದೆ.

ಹೊಸ ಮಹೀಂದ್ರಾ 5 ಡೋರ್ ಥಾರ್ ಎಸ್‌ಯುವಿಯ ಹೊರಭಾಗ, ಒಳಭಾಗದ ಡಿಸೈನ್, ಫೀಚರ್ಸ್ 3 ಡೋರ್ ಥಾರ್ ಗೆ ಹೋಲಿಕೆಯಾಗುತ್ತದೆ. ಆದರೆ, 300 ಎಂಎಂ ಹೆಚ್ಚಿನ ಉದ್ದದ ವೀಲ್ ಬೇಸ್ ಪಡೆದುಕೊಂಡಿದ್ದು, ಆಫ್-ರೋಡ್ ಆಗಿದೆ.

ಸದ್ಯ, 3 ಡೋರ್ ಥಾರ್, ರೂ.9.99 ಲಕ್ಷ ಪ್ರಾರಂಭಿಕ ಆನ್-ರೋಡ್ ಬೆಲೆಯಲ್ಲಿ ಸಿಗಲಿದ್ದು, 2-ಲೀಟರ್ ಟರ್ಬೊ ಪೆಟ್ರೋಲ್, 2.2-ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. 15.2 kmpl ಮೈಲೇಜ್ ನೀಡಲಿದೆ.

ಮಹೀಂದ್ರಾ ಕಂಪನಿ ನವೀಕರಿಸಿದ ವಿನ್ಯಾಸ ಹಾಗೂ ವೈಶಿಷ್ಟ್ಯದೊಂದಿಗೆ ಬೊಲೆರೋ ನಿಯೋವನ್ನು ಮುಂದಿನ ವರ್ಷ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಆದರೆ, ಈ ಬಗ್ಗೆ ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್‌ಗೆ ಪ್ರತಿಸ್ಪರ್ಧಿಯಾಗಿ ಕಾರೊಂದನ್ನು ನಿರ್ಮಿಸಲು ಮಹೀಂದ್ರಾ ಮುಂದಾಗಿದ್ದು, ಅದಕ್ಕೆ ಬಹುತೇಕ XUV500 ಎಂಬ ಹೆಸರಿಡಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಖಚಿತತೆ ಇಲ್ಲ.

ಇದೀಗ, ಮಹೀಂದ್ರಾ ಭಾರತದ ಎಲೆಕ್ಟ್ರಿಕ್ ವಾಹನ (ಇವಿ) ಮಾರುಕಟ್ಟೆಯಲ್ಲಿ ದೊಡ್ಡ ಕ್ರಾಂತಿ ಮಾಡಲ ಸಿದ್ದವಾಗಿದ್ದು, ‘XUV700’ (Mahindra xuv 700) ಇವಿ ಕಾರನ್ನು 2024ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದು XUV.e8 ಕಾನ್ಸೆಪ್ಟ್ ಆಧರಿಸಿರಲಿದೆ. ಆದರೆ, ಈ ಕಾರಿನ ವೈಶಿಷ್ಟ್ಯ ಹಾಗೂ ವಿನ್ಯಾಸದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ನೂತನ ‘XUV700’ 70 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಗರಿಷ್ಠ 500 ಕಿ.ಮೀ ರೇಂಜ್ ನೀಡಬಹುದು.

ಒಟ್ಟಾರೆಯಾಗಿ ಮಹೀಂದ್ರಾ ದೇಶೀಯ ಮಾರುಕಟ್ಟೆಯಲ್ಲಿ ಬೊಲೆರೋ ನಿಯೋ ಪ್ಲಸ್, 5 ಡೋರ್ ಥಾರ್ ಹಾಗೂ ಎಲೆಕ್ಟ್ರಿಕ್ ಕಾರು ‘XUV700’ನ್ನು ಮುಂದಿನ ವರ್ಷ ಬಿಡುಗಡೆ ಮಾಡಲು ಹೊರಟಿದ್ದು, ಇವು ಬೇರೆ ಕಂಪನಿ ಕಾರುಗಳಿಗೆ ಪೈಪೋಟಿ ನೀಡಲಿವೆ.

ಇದನ್ನೂ ಓದಿ: M S Dhoni Girlfriend : ಅಪಘಾತದಲ್ಲಿ ಮೃತಪಟ್ಟ MS Dhoni ಗೆಳತಿ ಫೋಟೋ ನೋಡಿದ್ದೀರಾ?

You may also like

Leave a Comment