Moto Tab G70 : ಇತ್ತೀಚಿಗೆ ಬಿಡುಗಡೆ ಆಗಿರುವ ಮೊಟೊರೊಲಾ (Motorola) ಸಂಸ್ಥೆಯ ಮೊಟೊ ಟ್ಯಾಬ್ G70 ಟ್ಯಾಬ್ಲೆಟ್ ಕೆಲವು ಆಕರ್ಷಕ ಫೀಚರ್ಸ್‌ಗಳ ಮೂಲಕ ಗ್ರಾಹಕರ ಮನಸ್ಸನ್ನು ಗೆದ್ದಿದೆ. ಈ ಮೊಟೊ ಟ್ಯಾಬ್ G70 ಡಿವೈಸ್ ನಲ್ಲಿ ಭರ್ಜರಿ ಆಫರ್ ನೀಡಲಾಗುತ್ತಿದೆ.
4GB RAM ಮತ್ತು 64GB ಸ್ಟೋರೇಜ್ ಹೊಂದಿರುವ ಮೊಟೊ ಟ್ಯಾಬ್ G70 (Moto Tab G70) ಈ ಟ್ಯಾಬ್ ಬೆಲೆಯಲ್ಲಿ ಈಗ 2,000ರೂ. ಗಳ ಇಳಿಕೆ ಆಗಿದ್ದು, ಬೆಲೆ ಇಳಿಕೆ ಬಳಿಕ 19,999ರೂ. ಗಳ ಪ್ರೈಸ್ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಈ ಡಿವೈಸ್ ಮಾಡರ್ನಿಸ್ಟ್ ಟೀಲ್ ಕಲರ್ ಆಯ್ಕೆಯಲ್ಲಿ ಲಭ್ಯವಿದೆ
ಮೊಟೊ ಟ್ಯಾಬ್ G70 ಟ್ಯಾಬ್ ಕಾರ್ಯಕ್ಷಮತೆ :
ಮೊಟೊ ಟ್ಯಾಬ್ G70 LTE ಟ್ಯಾಬ್ಲೆಟ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ G90T ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ಮೊಟೊ ಟ್ಯಾಬ್ G70 ಟ್ಯಾಬ್ ಡಿವೈಸ್ ಹೆಲಿಯೊ G90T ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಿಂಗಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 13 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಹೊಂದಿದೆ. ಜೊತೆಗೆ ಈ ಟ್ಯಾಬ್ಲೆಟ್ f/2.2 ಅಪರ್ಚರ್ ಲೆನ್ಸ್‌ನೊಂದಿಗೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಮೊಟೊ ಟ್ಯಾಬ್ G70 LTE 2,000 x 1,200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 11-ಇಂಚಿನ IPS 2K ಡಿಸ್‌ಪ್ಲೇ ಹೊಂದಿದೆ. ಇದು LCD ಡಿಸ್‌ಪ್ಲೇ ಆಗಿದ್ದು 400 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ. ಟ್ಯಾಬ್ಲೆಟ್‌ನ ಸ್ಕ್ರೀನ್ ಕಡಿಮೆ ನೀಲಿ ಬೆಳಕಿನ ಮಾನ್ಯತೆ ಮತ್ತು ಸುಧಾರಿತ ಐ ಪ್ರೊಟೆಕ್ಷನ್‌ಗಾಗಿ TUV ರೈನ್‌ಲ್ಯಾಂಡ್ ಹೊಂದಿದೆ.
ಮೊಟೊ ಟ್ಯಾಬ್ G70 ಯು 7,700 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು USB ಟೈಪ್ ಸಿ ಮೂಲಕ 20W ನಲ್ಲಿ ಟರ್ಬೋಪವರ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಈ ಟ್ಯಾಬ್ಲೆಟ್ ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಕ್ವಾಡ್-ಸ್ಪೀಕರ್ ಸೆಟಪ್ ಅನ್ನು ಹೊಂದಿದೆ.
ಇನ್ನು ಮೊಟೊ ಟ್ಯಾಬ್ G70 ಕನೆಕ್ಟಿವಿಟಿ ಆಯ್ಕೆಗಳಲ್ಲಿ GPS ಮತ್ತು GLONASS ಜೊತೆಗೆ 4G LTE, Wi-Fi ಮತ್ತು Bluetooth v5.1 ಅನ್ನು ಬೆಂಬಲಿಸುತ್ತದೆ.
ಜೊತೆಗೆ ಅಕ್ಸಿಲೆರೊ ಮೀಟರ್, ಗೈರೊಸ್ಕೋಪ್, ಹಾಲ್ ಎಫೆಕ್ಟ್ ಸೆನ್ಸರ್ ಮತ್ತು ಆಂಬಿಯೆಂಟ್ ಲೈಟ್ ಸೆನ್ಸರ್ ಅನ್ನು ಒಳಗೊಂಡಿದೆ.
ಮೊಟೊ ಟ್ಯಾಬ್ G70 ಟ್ಯಾಬ್ಲೆಟ್ ಮಾಡರ್ನಿಸ್ಟ್ ಟೀಲ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಟ್ಯಾಬ್ಲೆಟ್ ನೋಡಲು ಸಹ ಆಕರ್ಷಣೀಯವಾಗಿದ್ದು, ಗ್ರಾಹಕರ ಬೇಡಿಕೆ ಅನುಸಾರ ರೂಪಿಸಲಾಗಿದೆ.
