Home » Smartphone Camera : ನಿಮಗಿದು ಗೊತ್ತೇ ? ಫೋನ್‌ನಲ್ಲಿ 3 ಕ್ಯಾಮೆರಾಗಳು ಯಾಕೆ ಬೇಕು? ಸೆನ್ಸರ್‌ ಯಾಕೆ ಸಾಲೋದಿಲ್ಲ? ಇದಕ್ಕೊಂದು ವಿಶೇಷ ಕಾರಣವಿದೆ!

Smartphone Camera : ನಿಮಗಿದು ಗೊತ್ತೇ ? ಫೋನ್‌ನಲ್ಲಿ 3 ಕ್ಯಾಮೆರಾಗಳು ಯಾಕೆ ಬೇಕು? ಸೆನ್ಸರ್‌ ಯಾಕೆ ಸಾಲೋದಿಲ್ಲ? ಇದಕ್ಕೊಂದು ವಿಶೇಷ ಕಾರಣವಿದೆ!

0 comments
smartphone camera

Smartphone Camera : ಸ್ಮಾರ್ಟ್ಫೋನ್ ಗಳಲ್ಲಿ 3 ಕ್ಯಾಮೆರಾ (Smartphone Camera) ಇರೋದನ್ನ ನೀವು ಗಮನಿಸಿರುತ್ತೀರಾ. ಹಾಗೇ ಫೋನ್‌ನಲ್ಲಿ 3 ಕ್ಯಾಮೆರಾ(camera)ಗಳು ಏಕೆ ಬೇಕು? ಎಂಬ ಪ್ರಶ್ನೆಯೂ ಮೂಡಿರಬಹುದು. ಇದಕ್ಕೆ ಉತ್ತರ ಇಲ್ಲಿದೆ. ಕಂಪನಿಗಳು ಸ್ಮಾರ್ಟ್ಫೋನ್ನಲ್ಲಿ ಮೊದಲು ಡ್ಯುಯಲ್ ಕ್ಯಾಮೆರಾ ಅಳವಡಿಸಿ, ಕಾಲಕ್ರಮೇಣ ಟ್ರಿಪಲ್ ರಿಯರ್ ಕ್ಯಾಮೆರಾ(Tripal rear camera) ವನ್ನು ಅಳವಡಿಸಲು ಆರಂಭಿಸಿದರು. ಸದ್ಯ ಫೋನ್‌ನಲ್ಲಿ 3 ಕ್ಯಾಮೆರಾಗಳು ಏಕೆ ಬೇಕು? ಒಂದೇ ಕ್ಯಾಮೆರಾ ಸೆನ್ಸರ್ ಯಾಕೆ ಸಾಲದು? ಎಂಬುದರ ಮಾಹಿತಿ ತಿಳಿಯೋಣ.

ಫೋನ್ ನಲ್ಲಿ ಒಂದೇ ಕ್ಯಾಮೆರಾ ಸೆನ್ಸರ್ ಯಾಕೆ ಸಾಕಾಗಲ್ಲ ಅಂದ್ರೆ, ಕಂಪನಿಗಳು ಉತ್ತಮ ಫೋಟೋಗ್ರಾಫಿ (photography) ಗಾಗಿ 3 ಕ್ಯಾಮೆರಾ ಸೆನ್ಸರ್ಗಳನ್ನು ಅಳವಡಿಸಿಲ್ಲ, ಬದಲಾಗಿ ಫೋನ್ ಅನ್ನು ಸ್ಲಿಮ್ ಆಗಿ ಇರಿಸಿಕೊಳ್ಳಲು 3 ಕ್ಯಾಮೆರಾ ಅಳವಡಿಸುತ್ತಾರಂತೆ . ಸ್ಮಾರ್ಟ್ಫೋನ್ ಗೆ ಅದರ ಗಾತ್ರ ತುಂಬಾ ಮುಖ್ಯ. ವೇರಿಯಬಲ್ ಫೋಕಲ್ ಲೆನ್ಸ್ ಅನ್ನು ಸ್ಮಾರ್ಟ್ಫೋನ್ನಲ್ಲಿ ಬಳಸುವುದಿಲ್ಲ. ಅವುಗಳನ್ನು ಫೋನ್ನಲ್ಲಿ ಬಳಸಿದರೆ, ಅದರ ಕ್ಯಾಮೆರಾ ಹೊರಹೊಮ್ಮುತ್ತದೆ ಮತ್ತು ಫೋನ್ ನ ಗಾತ್ರ ಹೆಚ್ಚಾಗುತ್ತದೆ.

ಇದನ್ನೂ ಓದಿ : ಇನ್ನು ಮುಂದೆ ಹೊಸ ಸ್ಮಾರ್ಟ್‌ಫೋನ್‌ ಖರೀದಿದಾರರಿಗೆ ಈ ಸಮಸ್ಯೆ ಇಲ್ಲ!

ಫೋನ್ ನಲ್ಲಿ 3 ಕ್ಯಾಮೆರಾಗಳ ಕೆಲಸ ಏನಂದ್ರೆ, ಹೆಚ್ಚು ಕ್ಯಾಮೆರಾ ಇದ್ದರೆ, ಚಿತ್ರದ ಗುಣಮಟ್ಟ ಉತ್ತಮವಾಗಿರುತ್ತದೆ. ಜೊತೆಗೆ ಫೋನ್ ನ ಆಪ್ಟಿಕಲ್ ಜೂಮ್ ಕಾರ್ಯವೂ ಉತ್ತಮವಾಗಿರುತ್ತದೆ. ಮೂರು ಕ್ಯಾಮೆರಾಗಳು ಫೋನ್ನಲ್ಲಿ ಸಾಮಾನ್ಯ ಸೆನ್ಸರ್(sensor) ಹೊಂದಿವೆ. ಇದು ಅತ್ಯಂತ ಪವರ್ಫುಲ್ ಕ್ಯಾಮೆರಾ ಮತ್ತು ಇದರೊಂದಿಗೆ ನೀವು ಸಾಮಾನ್ಯ ದೂರದಲ್ಲಿ ಉತ್ತಮವಾದ ಶಾಟ್ಗಳನ್ನು ತೆಗೆಯಬಹುದು. ಜೊತೆಗೆ ಸ್ಮಾರ್ಟ್ಫೋನ್ನಲ್ಲಿ ಮೈಕ್ರೋಲೆನ್ಸ್(Microlens) ಅನ್ನು ಸಹ ನೀಡಲಾಗುತ್ತದೆ. ಹಾಗೆಯೇ ಫೋನ್ನಲ್ಲಿರುವ ಟೆಲಿಫೋಟೋ ಲೆನ್ಸ್ ದೂರದ ಶಾಟ್ಗಳನ್ನು ಉತ್ತಮ ರೀತಿಯಲ್ಲಿ ಸೆರೆಹಿಡಿಯಲು ಬಳಸಲಾಗುತ್ತದೆ.

ಇನ್ನು ಫೋನ್ನಲ್ಲಿ ಹೆಚ್ಚಿನ ಕ್ಯಾಮೆರಾಗಳು ಯಾಕೆ ಬೇಕಂದ್ರೆ, ಲೆನ್ಸ್ನ ಫೋಕಲ್ ಲೆಂತ್ ಮತ್ತು ಲೆನ್ಸ್ನ ವೀಕ್ಷಣೆಯ ಪರಿಣಾಮ, ವಸ್ತು ಮತ್ತು ಲೆನ್ಸ್ ಮಧ್ಯಭಾಗದ ನಡುವಿನ ಅಂತರವನ್ನು ಸೂಚಿಸುತ್ತದೆ. ಹಾಗೂ ಅಲ್ಲಿ ಬೆಳಕಿನ ಸೆನ್ಸರ್ ಒಮ್ಮುಖವಾಗುತ್ತದೆ. ಲೆನ್ಸ್ ಫೋಕಲ್ ಲೆಂತ್ ಉದ್ದವಾದಷ್ಟೂ ನೋಟದ ಕೋನವು ತೆಳ್ಳಗಿರುತ್ತದೆ.

You may also like

Leave a Comment