SUV under 10 Lakh : ದೇಶೀಯ ಮಾರುಕಟ್ಟೆಗೆ ದಿನಂಪ್ರತಿ ಹೊಸ ಹೊಸ ವೈಶಿಷ್ಟ್ಯದ ಆಕರ್ಷಕ ಲುಕ್ ಗ್ರಾಹಕರ ಮನ ಸೆಳೆಯುವ ಕಾರುಗಳು ಲಗ್ಗೆ ಇಟ್ಟು ಟ್ರೆಂಡ್ ಸೃಷ್ಟಿ ಮಾಡುತ್ತಲೇ ಇರುತ್ತವೆ. ಸದ್ಯ ವಿಭಿನ್ನ ವಿನ್ಯಾಸ, ಉತ್ತಮ ವೈಶಿಷ್ಟ್ಯತೆಯೊಂದಿಗೆ ಎಂಟ್ರಿ ಕೊಡುತ್ತಿವೆ. ಜನರು ನೂತನ ಕಾರು (car) ಕೊಳ್ಳಲು ಮುಗಿಬೀಳುತ್ತಿದ್ದಾರೆ. ಅದರಲ್ಲೂ ಕಂಪನಿಗಳು ಜನರಿಗೆ ಬೇಕಾಗುವಂತಹ, ಕೈಗೆಟುಕುವ ಬೆಲೆಯ ಕಾರುಗಳನ್ನು ಪರಿಚಯಿಸುತ್ತಿದೆ. ನೀವೇನಾದರೂ ಕಾರು ಕೊಳ್ಳಲು ಬಯಸಿದ್ದರೆ ಇಲ್ಲಿದೆ ನೋಡಿ, 10 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಶಕ್ತಿಯುತ SUVಗಳು (SUV under 10 Lakh).
ಮಾರುತಿ ಬ್ರೆಝಾ (Maruti Brezza) :
ದೇಶದ ಅತಿ ಹೆಚ್ಚು ಜನರ ಆಕರ್ಷಕ ಕಾರ್ ಆಗಿರುವ ಮಾರುತಿ ಬ್ರೆಝಾ ಪೆಟ್ರೋಲ್ ಎಂಜಿನ್ನೊಂದಿಗೆ ಮಾತ್ರ ಬರುತ್ತದೆ. ಇದು ಫೆಬ್ರವರಿ 2023ರಲ್ಲಿ ಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿದೆ. ಈ ಕಾರ್ 20.15KMPL ವರೆಗೆ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ. ಇದು 1.5-ಲೀಟರ್, 4-ಸಿಲಿಂಡರ್ K15C ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, 87 hp ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 7-ಇಂಚಿನ ಸ್ಮಾರ್ಟ್‌ಪ್ಲೇ ಸ್ಟುಡಿಯೋ ಟಚ್‌ಸ್ಕ್ರೀನ್ ಮತ್ತು LED ಟೈಲ್‌ಲೈಟ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಮಾರುತಿ ಬ್ರೆಝಾ ಬೆಲೆ 8.19 ಲಕ್ಷದಿಂದ 14.04 ಲಕ್ಷ ರೂ.ವರೆಗೆ ಇದೆ.
ಟಾಟಾ ನೆಕ್ಸಾನ್ (Tata Nexon) :
ಟಾಟಾ (Tata) ಕಂಪೆನಿಯ ಕಾರುಗಳು ಮತ್ತು SUVಗಳು ಉತ್ತಮ ಗುಣಮಟ್ಟದ್ದಾಗಿರುತ್ತವೆ. ಇದು ಗ್ಲೋಬಲ್ NCAP ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ. ಸದ್ಯ ಈ ಕಾರು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿವೆ. ಟಾಟಾ ನೆಕ್ಸನ್ ಎಸ್‌ಯುವಿಯಲ್ಲಿ ಪಂಚ್‌ಗಿಂತಲೂ ಹೆಚ್ಚಿನ ಸ್ಥಳವಕಾಶವಿದ್ದು, ನೆಕ್ಸನ್ ಪಂಚ್ ಗಿಂತ ಸುಮಾರು 170 ಮಿಲಿಮೀಟರ್ ಉದ್ದ ಮತ್ತು ಸುಮಾರು 60 ಮಿಲಿಮೀಟರ್ ಅಗಲವಿದೆ. ದೇಶದ ಅತಿ ಬೇಡಿಕೆಯ ಎಸ್ಯುವಿ ಆಗಿರುವ ಟಾಟಾ ನೆಕ್ಸಾನ್ ಕೂಡ ಒಂದು ಲೀಟರ್ ಪೆಟ್ರೋಲ್ ನಲ್ಲಿ ಸುಮಾರು 21.5ಕಿ.ಮೀ. ವರೆಗೆ ಮೈಲೇಜ್ ನೀಡುತ್ತದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಲ್ಲಿ ಮ್ಯಾನುಯಲ್ ಮತ್ತು ಆಟೋಮೇಟೆಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಸದ್ಯ ಟಾಟಾ ನೆಕ್ಸಾನ್ ಬೆಲೆ 7.7 ಲಕ್ಷದಿಂದ 14 ಲಕ್ಷದವರೆಗೆ ಇದೆ.
ರೆನಾಲ್ಟ್ ಕಿಗರ್:
ಇದು ದೇಶದ ಅಗ್ಗದ ಸಬ್-ಕಾಂಪ್ಯಾಕ್ಟ್ SUV ಕಾರುಗಳಲ್ಲಿ ಒಂದಾಗಿದೆ. ಇದು 18.24 – 20.5 kmpl ಮೈಲೇಜ್ ನೀಡಲಿದೆ. 1-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 72 PS ಪವರ್ ಹಾಗೂ 96 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 100 PS ಪವರ್ 160 Nm ಹಾಗೂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ನಾಲ್ಕು ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ. ಇದು ಎಲ್ಇಡಿ ಹೆಡ್ಲೈಟ್ಗಳು, ಪುಶ್ ಸ್ಟಾರ್ಟ್ ಮತ್ತು ವೈರ್ಲೆಸ್ ಚಾರ್ಜಿಂಗ್ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ರೆನಾಲ್ಟ್ ಕಿಗರ್ ಬೆಲೆ 6.5 ಲಕ್ಷದಿಂದ ಪ್ರಾರಂಭವಾಗಿ 11.23 ಲಕ್ಷ ರೂ.ವರೆಗೆ ಇರುತ್ತದೆ.
ಮಹೀಂದ್ರಾ XUV 300:
mahindra XUV300 ಗ್ಲೋಬಲ್ NCAPಯಿಂದ 5-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. XUV300 1.2 ಲೀಟರ್ ಟರ್ಬೊ ಪೆಟ್ರೋಲ್, 1.5 ಲೀಟರ್ ಡೀಸೆಲ್ ಎಂಜಿನ್ ಹಾಗೂ 1.2-ಲೀಟರ್ TGDI ಟರ್ಬೊ ಪೆಟ್ರೋಲ್ ಎಂಜಿನ್ ಈ ಮೂರು ಎಂಜಿನ್ ಆಯ್ಕೆಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ. ಕಾರು ಐದು ಆಸನಗಳನ್ನು ಹೊಂದಿದ್ದು, 16.5 – 20.1 kmpl ಮೈಲೇಜ್ ನೀಡಲಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಮತ್ತು ಸನ್‌ರೂಫ್‌ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಮಹೀಂದ್ರಾ XUV 300 ಬೆಲೆ 8.41 ಲಕ್ಷದಿಂದ 14.07 ಲಕ್ಷ ರೂ.ವರೆಗೆ ಇದೆ.
ಹುಂಡೈ ವೆನ್ಯೂ ಎಸ್ಯುವಿ (Hyundai Venue):
ಹ್ಯುಂಡೈ ಕಳೆದ ವರ್ಷ ತನ್ನ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಿತು. ಹ್ಯುಂಡೈ Venue ಸದ್ಯ, 16 ವೆರಿಯೆಂಟ್‌ಗಳನ್ನು ಹೊಂದಿದ್ದು, ವಿವಿಧ ನಮೂನೆಯ 6 ಬಣ್ಣಗಳಲ್ಲಿ ಲಭ್ಯವಿರಲಿದೆ. ಹ್ಯುಂಡೈ Venue ಮಾದರಿಯ ಬೆಲೆ, ತಾಂತ್ರಿಕ ವೈಶಿಷ್ಟ್ಯತೆಗಳನ್ನೂ ಹೊಂದಿದ್ದು, ವೆನ್ಯೂ ಎಸ್ಯುವಿ 23.4KMPL ವರೆಗೆ ಮೈಲೇಜ್ ನೀಡಬಲ್ಲದು ಎಂದು ಕಂಪನಿ ತಿಳಿಸಿದೆ. ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಡೀಸೆಲ್ ಮತ್ತು ಪೆಟ್ರೋಲ್ ಎರಡರಲ್ಲೂ ಲಭ್ಯವಿದೆ. ಹುಂಡೈ ವೆನ್ಯೂ ಬೆಲೆ 7.68 ಲಕ್ಷದಿಂದ 13.11 ಲಕ್ಷದವರೆಗೆ ಇರುತ್ತದೆ.
ಇದನ್ನೂ ಓದಿ: Maruti Suzuki : ಮಾರುತಿ ಸುಜುಕಿ ಆಲ್ಟೋ 800 ಉತ್ಪಾದನೆ ಸ್ಥಗಿತ…! ಯಾಕೆ ಗೊತ್ತಾ?
