Home » Suzuki : ಸುಸುಕಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ‘ಇ-ಅಕ್ಸೆಸ್’ ಮಾರುಕಟ್ಟೆಗೆ ಲಗ್ಗೆ – ಬುಕಿಂಗ್ ಆರಂಭ

Suzuki : ಸುಸುಕಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ‘ಇ-ಅಕ್ಸೆಸ್’ ಮಾರುಕಟ್ಟೆಗೆ ಲಗ್ಗೆ – ಬುಕಿಂಗ್ ಆರಂಭ

0 comments

Suzuki : ದೇಶದ ಅತ್ಯಂತ ಜನಪ್ರಿಯ ಕಾರು ಕಂಪನಿಗಳಲ್ಲಿ ಒಂದಾಗಿರುವ ಸುಜುಕಿ ತನ್ನ ಬಹುನಿರೀಕ್ಷಿತ ಹಾಗೂ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆದ ‘ಸುಜುಕಿ ಇ-ಅಕ್ಸೆಸ್’ (Suzuki e-Access) ನ ಬುಕಿಂಗ್ ಪ್ರಾರಂಭಿಸಿದೆ.

ಹೌದು, ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಆರಂಭಿಸುವುದರ ಮುಖಾಂತರ ಇದೀಗ ಸುಜುಕಿಯ ಎಲೆಕ್ಟ್ರಿಕ್ ಸ್ಕೂಟರ್ ಅಧಿಕೃತವಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದರ ಫೀಚರ್ಸ್ ಏನು? ಬೆಲೆ ಎಷ್ಟು? ಎಂಬ ಡೀಟೇಲ್ಸ್ ಇಲ್ಲಿದೆ ನೋಡಿ.

ಬಲಿಷ್ಠ ಬ್ಯಾಟರಿ: ಇದರಲ್ಲಿ ಲಿಥಿಯಂ ಐರನ್ ಫಾಸ್ಫೇಟ್ (LFP) ಬ್ಯಾಟರಿಯನ್ನು ಬಳಸಲಾಗಿದ್ದು, ಇದು ಸಾಮಾನ್ಯ ಬ್ಯಾಟರಿಗಳಿಗಿಂತ 4 ಪಟ್ಟು ಹೆಚ್ಚು ಬಾಳಿಕೆ ಬರುತ್ತದೆ ಎಂದು ಕಂಪನಿ ತಿಳಿಸಿದೆ.

ಪರ್ಫಾರ್ಮೆನ್ಸ್: 4.1 ಕಿಲೋವ್ಯಾಟ್ ಮೋಟಾರ್ ಸಾಮರ್ಥ್ಯವಿದ್ದು, ಇಕೋ, ರೈಡ್-ಎ ಮತ್ತು ರೈಡ್-ಬಿ ಎಂಬ 3 ಡ್ರೈವಿಂಗ್ ಮೋಡ್‌ಗಳಿವೆ. ಜೊತೆಗೆ ರಿವರ್ಸ್ ಮೋಡ್ (ಹಿಂದಕ್ಕೆ ಚಲಿಸುವ) ಸೌಲಭ್ಯವೂ ಇದೆ.

ದೀರ್ಘ ಬಾಳಿಕೆ: ಕಠಿಣ ರಸ್ತೆಗಳು, ನೀರು, ಬಿಸಿಲು ಮತ್ತು ಧೂಳಿನ ವಾತಾವರಣದಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.

ಗ್ರಾಹಕರಿಗೆ ಭರ್ಜರಿ ಕೊಡುಗೆಗಳು:

ಸುಜುಕಿ ಇ-ಅಕ್ಸೆಸ್ ಖರೀದಿಸುವ ಗ್ರಾಹಕರಿಗೆ ಕಂಪನಿ ಈ ಕೆಳಗಿನ ಆಕರ್ಷಕ ಕೊಡುಗೆಗಳನ್ನು ನೀಡಿದೆ:

ವಾರೆಂಟಿ: 7 ವರ್ಷಗಳು ಅಥವಾ 80,000 ಕಿ.ಮೀ ವರೆಗೆ ವಿಸ್ತೃತ ವಾರೆಂಟಿ (ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ).

ಬೈ-ಬ್ಯಾಕ್ ಆಫರ್: 3 ವರ್ಷಗಳ ನಂತರ ಸ್ಕೂಟರ್ ಹಿಂತಿರುಗಿಸಿದರೆ ಶೇ. 60ರಷ್ಟು ಹಣವನ್ನು ಮರಳಿ ಪಡೆಯುವ ಬೈ-ಬ್ಯಾಕ್ ಭರವಸೆ.

ಬೋನಸ್: ಈಗಾಗಲೇ ಸುಜುಕಿ ವಾಹನ ಹೊಂದಿರುವವರಿಗೆ 10,000 ರೂ. ಲಾಯಲ್ಟಿ ಬೋನಸ್ ಮತ್ತು ಹೊಸ ಗ್ರಾಹಕರಿಗೆ 7,000 ರೂ. ವೆಲ್ಕಮ್ ಬೋನಸ್.

ಕಡಿಮೆ ಬಡ್ಡಿ ದರದಲ್ಲಿ (ಶೇ. 5.99 ರಿಂದ ಆರಂಭ) ಸಾಲ ಸೌಲಭ್ಯ.

ಬೆಲೆ ಮತ್ತು ಲಭ್ಯತೆ: 

ಸುಜುಕಿ ಇ-ಅಕ್ಸೆಸ್ ಸ್ಕೂಟರ್‌ನ ಬೆಲೆ 1,88,490 ರೂ. (ಎಕ್ಸ್-ಶೋರೂಂ ದೆಹಲಿ) ನಿಗದಿಪಡಿಸಲಾಗಿದೆ. ಗ್ರಾಹಕರು ದೇಶಾದ್ಯಂತ ಇರುವ ಸುಜುಕಿ ಶೋರೂಂಗಳಲ್ಲಿ ಬುಕಿಂಗ್ ಆರಂಭವಾಗಿದೆ‌.

You may also like