Home » Tata-mahindra flop cars : ಇವು ದೇಶೀಯ ಮಾರುಕಟ್ಟೆಯಲ್ಲಿ ಫ್ಲಾಪ್ ಆದ ಟಾಟಾ, ಮಹೀಂದ್ರಾದ ಕಾರುಗಳು!!

Tata-mahindra flop cars : ಇವು ದೇಶೀಯ ಮಾರುಕಟ್ಟೆಯಲ್ಲಿ ಫ್ಲಾಪ್ ಆದ ಟಾಟಾ, ಮಹೀಂದ್ರಾದ ಕಾರುಗಳು!!

0 comments
Tata-mahindra flop cars

Tata-mahindra flop cars : ದೇಶೀಯ ಮಾರುಕಟ್ಟೆಗೆ ಹಲವು ಕಾರುಗಳು ಲಗ್ಗೆ ಇಡುತ್ತಿವೆ. ವಿಭಿನ್ನ ವಿನ್ಯಾಸ, ಉತ್ತಮ ವೈಶಿಷ್ಟ್ಯತೆಯೊಂದಿಗೆ ಎಂಟ್ರಿ ಕೊಡುತ್ತಿವೆ. ಜನರು ನೂತನ ಕಾರು (car) ಕೊಳ್ಳಲು ಮುಗಿಬೀಳುತ್ತಿದ್ದಾರೆ. ಕಂಪನಿಗಳು ಕೂಡ ಅತ್ಯುತ್ತಮ ಕಾರುಗಳನ್ನು ಬಿಡುಗಡೆ ಮಾಡುತ್ತಲೇ ಇವೆ. ಆದರೆ, ನಿಮಗೆ ಗೊತ್ತಾ? ದೇಶದಲ್ಲಿ ನೀರಿಕ್ಷೆ ಹುಟ್ಟಿಸಿ ನಂತರ ಫ್ಲಾಪ್ ಆದ ಕಾರುಗಳು ಯಾವುದು ಎಂದು? ಅದು ಕೂಡ ಜನಪ್ರಿಯ ಕಂಪನಿ ಟಾಟಾ ಮೋಟಾರ್ಸ್ (tata motors) ಹಾಗೂ ಮಹೀಂದ್ರಾದ (mahindra) ಕಾರುಗಳು ಮಾರಾಟವಾಗದೆ ಫ್ಲಾಪ್ ಆಗಿವೆ (Tata-mahindra flop cars). ಯಾವೆಲ್ಲಾ? ನೋಡೋಣ.

ಮಹೀಂದ್ರಾದ ವೆರಿಟೊ ವೈಬ್ ಹ್ಯಾಚ್‌ಬ್ಯಾಕ್‌ (Mahindra’s Verito Vibe hatchback) : ದೇಶೀಯ ಮಾರುಕಟ್ಟೆಯಲ್ಲಿ ವೆರಿಟೊ ವೈಬ್ ಹ್ಯಾಚ್‌ಬ್ಯಾಕ್‌ 2013ರಲ್ಲಿ ಬಿಡುಗಡೆಯಾಗಿದ್ದು, ಈ ಕಾರು, 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿತ್ತು. 65 PS ಪವರ್,160 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿತ್ತು. ಜೊತೆಗೆ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಡ್ರೈವರ್ ಏರ್‌ಬ್ಯಾಗ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದಿತ್ತು. ಆದರೂ ಈ ಹ್ಯಾಚ್‌ಬ್ಯಾಕ್ ಉತ್ತಮ ಮಾರಾಟ ಕಾಣಲಿಲ್ಲ. ಈ ಕಾರಣದಿಂದ 2020ರಲ್ಲಿ ಇದನ್ನು ಸ್ಥಗಿತಗೊಳಿಸಲಾಯಿತು.

ಮಹೀಂದ್ರಾ ಕ್ವಾಂಟೊ ಮಿನಿ ಎಸ್‌ಯುವಿ (Mahindra Quanto Mini SUV) : 2012ರಲ್ಲಿ ಮಹೀಂದ್ರಾ ಏಳು ಆಸನಗಳ ಕ್ವಾಂಟೊ ಮಿನಿ ಎಸ್‌ಯುವಿಯನ್ನು ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದರ ಬೆಲೆ ರೂ.5.82 ಲಕ್ಷ ಆಗಿದೆ. ಆದರೆ, ಈ ಕಾರು ಮಾರಾಟ ಕಂಡಿಲ್ಲ. ಭಾರತೀಯರನ್ನು ಆಕರ್ಷಿಸುವಲ್ಲಿ ವಿಫಲವಾಯಿತು. ಇದು, ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿತ್ತು. ಮಹೀಂದ್ರಾ ಕಂಪನಿ 2016ರಲ್ಲಿ ಈ ಕಾರಿಗೆ ಮಿಡ್ ಲೈಫ್ ಫೇಸ್‌ಲಿಫ್ಟ್ ಮಾದರಿಯನ್ನು ‘ನುವೋಸ್ಪೋರ್ಟ್’ ಹೆಸರಿನಲ್ಲಿ ಪರಿಚಯಿಸಿತ್ತು. ಆದರೆ, ಇದಕ್ಕೂ ಗ್ರಾಹಕರಿಂದ ಬೆರಳೆಣಿಕೆಯಷ್ಟು ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು. 2020ರಲ್ಲಿ ದೇಶಾದ್ಯಂತ BS6 ಎಮಿಷನ್ ಮಾನದಂಡಗಳು ಜಾರಿಯಾದ ಬಳಿಕ ಈ ಕಾರಿನ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು.

ಟಾಟಾದ ಬೋಲ್ಟ್ ಹಾಗೂ ಜೆಸ್ಟ್ ಕಾರು (Tata’s Bolt and Zest cars): 2015ರಲ್ಲಿ ದೇಶೀಯ ಮಾರುಕಟ್ಟೆಗೆ ಟಾಟಾ ಮೋಟಾರ್ಸ್ ಬೋಲ್ಟ್ ಹ್ಯಾಚ್‌ಬ್ಯಾಕ್, ಜೆಸ್ಟ್ ಸೆಡಾನ್ ಅನ್ನು ಬಿಡುಗಡೆ ಮಾಡಿತ್ತು. ಇವೆರೆಡು ಸಬ್-4 ಮೀಟರ್ ಕಾರಗಳಾಗಿದ್ದವು. ಇವೆರೆಡು ಕಾರುಗಳ ಬೆಲೆ ರೂ.5 ಲಕ್ಷದಿಂದ ರೂ.7 ಲಕ್ಷವರೆಗೆ ಇತ್ತು. ಬೋಲ್ಟ್, ಜೆಸ್ಟ್ ನಲ್ಲಿ ಬಳಕೆ ಮಾಡಿದ್ದ 1.2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 90 PS ಪವರ್, 140 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿತ್ತು. ಹಾಗೆಯೇ ಜೆಸ್ಟ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿಯೂ ಲಭ್ಯವಿತ್ತು. ಆದರೆ, ದೇಶದಲ್ಲಿ ಹೆಚ್ಚು ಮಾರಾಟವಾಗಲೇ ಇಲ್ಲ. ಹಾಗಾಗಿ 2019ರಲ್ಲಿ ಮಾರುಕಟ್ಟೆಯಿಂದಲೇ ಕಣ್ಮರೆಯಾದವು.

You may also like

Leave a Comment