Google Rules: ಬಹುತೇಕರು ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿರುವುದು ನಮಗೆ ತಿಳಿದಿರುವ ವಿಚಾರ. ಆದರೆ ಇದೀಗ ಸ್ಮಾರ್ಟ್ ಫೋನ್ ಬಳಕೆ ದಾರರಿಗೆ ಗೂಗಲ್ ದೊಡ್ಡ ಶಾಕ್ ಒಂದನ್ನು ನೀಡಿದೆ. ಹೌದು, ಗೂಗಲ್ ನಿಯಮ (Google Rules) ಪಾಲಿಸದ ಇರುವ ಹಲವಾರು ಜಿಮೇಲ್ ಮತ್ತು ಯೂಟ್ಯೂಬ್ ಖಾತೆಗಳನ್ನು ಡಿಲೀಟ್ ಮಾಡಲಾಗುವುದು ಎಂದು ಗೂಗಲ್ ತಿಳಿಸಿದೆ. ಖುಷಿಯ ವಿಚಾರವೆಂದರೆ ಗೂಗಲ್ ನಿಯಮಗಳನ್ನು ಪಾಲಿಸುವವರಿಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಲಾಗಿದೆ.
ಈಗಾಗಲೇ ಖಾತೆಗಳನ್ನು ಅಳಿಸುವ ಅಪಾಯದಲ್ಲಿರುವ ಬಳಕೆದಾರರಿಗೆ ಎಚ್ಚರಿಸಲು. 8 ತಿಂಗಳ ಮುಂಚಿತವಾಗಿ ಎಚ್ಚರಿಕೆ ಮೇಲ್ ಕಳುಹಿಸಲಾಗಿದೆ. ಸದ್ಯ ಹೊಸ ನೀತಿಯು ಡಿಸೆಂಬರ್ 2023 ರಿಂದ ಜಾರಿಗೆ ಬರಲಿದೆ ಎಂದು ಗೂಗಲ್ ತಿಳಿಸಿದೆ. ಗೂಗಲ್ ಪ್ರಸ್ತುತ ನಿಷ್ಕ್ರಿಯ ಜಿಮೇಲ್ ಮತ್ತು ಯೂಟ್ಯೂಬ್ ಖಾತೆಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿದ್ದು, ನಿಷ್ಕ್ರಿಯ ಖಾತೆಗಳನ್ನು ಡಿಸೆಂಬರ್ 2023 ರಿಂದ ಅಳಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ.
ಸದ್ಯ ಗೂಗಲ್ ನ ಅನಗತ್ಯ ಹೊರೆಯನ್ನು ಕಡಿಮೆ ಮಾಡಲು ಮತ್ತು ಭದ್ರತಾ ಸಮಸ್ಯೆಗಳನ್ನು ಕಡಿಮೆ ಮಾಡಲು ನಿಷ್ಕ್ರಿಯವಾಗಿರುವ ಜಿ ಮೇಲ್ ಮತ್ತು ಯೂಟ್ಯೂಬ್ ಖಾತೆಗಳನ್ನು ತೆಗೆದುಹಾಕಲು ನಿರ್ಧಾರ ಮಾಡಿದೆ. ಸದ್ಯ ಜಿ ಮೇಲ್ ಮತ್ತು ಯೂಟ್ಯೂಬ್ ಖಾತೆಗಳನ್ನು ಅಳಿಸುವುದರಿಂದ ಮೇಲ್ ಗಳು, ದಾಖಲೆಗಳು, ಫೋಟೋಗಳು, ಡ್ರೈವ್, ಕ್ಯಾಲೆಂಡರ್ ಮತ್ತು YouTube ನಲ್ಲಿನ ಮಾಹಿತಿ ಸೇರಿದಂತೆ ಎಲ್ಲಾ ವಿಷಯವನ್ನು ಅಳಿಸಲಾಗುತ್ತದೆ.
ಆದರೆ ನಿಷ್ಕ್ರಿಯ ಖಾತೆಗಳನ್ನು ಅಳಿಸುವ ಪ್ರಕ್ರಿಯೆಯನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದು ಗೂಗಲ್ ಸ್ಪಷ್ಟಪಡಿಸಿದೆ. ಗೂಗಲ್ ಮಾಹಿತಿ ಪ್ರಕಾರ ಒಂದು ಸಲಿ ಖಾತೆಯನ್ನು ರಚಿಸಿದ ನಂತರ, ಒಮ್ಮೆಯೂ ಬಳಸದ ಖಾತೆಗಳನ್ನು ಮೊದಲು ಅಳಿಸಲಾಗುತ್ತದೆ. ಅದರ ನಂತರ ಎರಡು ವರ್ಷಗಳಿಂದ ಸಕ್ರಿಯವಾಗಿಲ್ಲದ ಖಾತೆಗಳನ್ನು ಅಳಿಸುವುದಾಗಿ ಅದು ಘೋಷಿಸಿತು. ಡಿಲೀಟ್ ಮಾಡುವ ಮೊದಲು ಖಾತೆಯ ರಿಕವರಿ ಖಾತೆಯನ್ನು ಸಹ ಅಳಿಸಲಾಗುವುದು ಎಂದು ಎಚ್ಚರಿಸುವ ಇಮೇಲ್ಗಳನ್ನು ಕಳುಹಿಸುವುದಾಗಿ ತಿಳಿಸಲಾಗಿದೆ. ಇನ್ನು ಈ ನೀತಿಯು ವೈಯಕ್ತಿಕ ಜಿಮೇಲ್ ಖಾತೆಗಳಿಗೆ ಮಾತ್ರ ಅನ್ವಯಿಸುತ್ತದೆ. ಆದರೆ ವ್ಯಾಪಾರ ಸಂಸ್ಥೆಗಳು ಮತ್ತು ಶಾಲೆಗಳಿಗೆ ಸಂಬಂಧಿಸಿದ ಜಿಮೇಲ್ ಖಾತೆಗಳನ್ನು ಅಳಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.
