Home » Rolls Royce la Rose Noire: ಈ ಕಾರು ಅಂತಿಂಥ ಕಾರಲ್ಲ, 211 ಕೋಟಿ ಬೆಲೆಬಾಳುವ ಲಕ್ಸುರಿ ಕಾರು!!! ಅಂಥದ್ದೇನಿದೆ ಈ ಕಾರಲ್ಲಿ?

Rolls Royce la Rose Noire: ಈ ಕಾರು ಅಂತಿಂಥ ಕಾರಲ್ಲ, 211 ಕೋಟಿ ಬೆಲೆಬಾಳುವ ಲಕ್ಸುರಿ ಕಾರು!!! ಅಂಥದ್ದೇನಿದೆ ಈ ಕಾರಲ್ಲಿ?

2 comments
Rolls-Royce la Rose Noire

Rolls-Royce la Rose Noire: ಮಾರುಕಟ್ಟೆಗೆ ಹಲವಾರು ಹೊಚ್ಚ ಹೊಸ ಅದ್ಭುತ ವೈಶಿಷ್ಟ್ಯದ ಕಾರುಗಳು ಲಗ್ಗೆ ಇಡುತ್ತಿವೆ. ಅಂತೆಯೇ ಇದೀಗ ರೋಲ್ಸ್ ರಾಯ್ಸ್ (Rolls Royce) ಹೊಸ ಕಾರೊಂದನ್ನು ಬಿಡುಗಡೆ ಮಾಡಿದೆ. ಈ ಕಾರು ಅಂತಿಂಥ ಕಾರಲ್ಲ, 211 ಕೋಟಿ ಬೆಲೆಬಾಳುವ ಲಕ್ಸುರಿ ಕಾರು. ಅಂಥದ್ದೇನಿದೆ ಈ ಕಾರಲ್ಲಿ? ಇಲ್ಲಿದೆ ನೋಡಿ ಮಾಹಿತಿ!!!.

ಇದು ಲಿಮಿಟೆಡ್ ಎಡಿಶನ್ ಕಾರಾಗಿದ್ದು, ಇದರ ಹೆಸರು ರೋಲ್ಸ್ ರಾಯ್ಸ್ ಲಾ ರೋಸ್ ನೋಯಿರ್ (Rolls-Royce la Rose Noire) ಇದರ ಬೆಲೆ 211 ಕೋಟಿ ರೂಪಾಯಿ. ಇದು ಕೇವಲ ನಾಲ್ಕು ಕಾರುಗಳು ಮಾತ್ರ ಲಭ್ಯ. ಹೀಗಾಗಿ ಮೊದಲು ಬುಕ್ ಮಾಡಿದವರಿಗೆ ಮಾತ್ರ ಈ ಕಾರು ಸಿಗಲಿದೆ.

ಇದು ಮಾಸ್ಟರ್‌ಪೀಸ್ ಬಿಲ್ಟ್ ಕಾರು. ಹೀಗಾಗಿ ಇದರ ಬೆಲೆ ಬರೋಬ್ಬರಿ 211 ಕೋಟಿ ರೂಪಾಯಿ ಇದೆ. ಫ್ರಾನ್ಸ್ ಮೂಲಕ ಬಕಾರಾ ರೋಸ್ ಹೂವಿನಿಂದ ಸ್ಪೂರ್ತಿ ಪಡೆದು ಈ ಕಾರು ವಿನ್ಯಾಸ ಮಾಡಲಾಗಿದೆ. ನೋಡಲು ಸುಂದರವಾಗಿದ್ದು, ಜನರನ್ನು ಆಕರ್ಷಿಸೋದು ಪಕ್ಕಾ!!.

ಈ ಕಾರು (Car) ಟ್ವಿನ್ ಟರ್ಬೋ ಚಾರ್ಜ್ 6.75 ಲೀಟರ್ ಎಂಜಿನ್ ಹೊಂದಿದೆ. 601 ಹೆಚ್‌ಪಿ ಪವರ್ ಹಾಗೂ 840 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಪಡೆದಿದೆ. ಪ್ರತಿ ಗಂಟೆಗೆ 250 ಕಿ.ಮೀ. ಕಾರಿನ ಗರಿಷ್ಠ ವೇಗವಿದೆ. ರಿವೋವೇಬಲ್ ರೂಫ್, ಎಲೆಕ್ಟ್ರಾಕ್ರೋಮಿಕ್ ಗ್ರಾಸ್ ಸೇರಿದಂತೆ ಹಲವು ವಿಶೇಷತೆಗಳನ್ನು ಈ ಕಾರು ಒಳಗೊಂಡಿದೆ. ಅಲ್ಲದೆ, ಅತ್ಯಾಧುನಿಕ ತಂತ್ರಜ್ಞಾನ, ಹಲವು ಫೀಚರ್ಸ್ ಈ ಕಾರಿನಲ್ಲಿದೆ.

ಇದನ್ನೂ ಓದಿ: Actress Sadhika Venugopal: ಮಂಚ ಹಂಚಿಕೊಳ್ಳಲು ಓಕೆ ಅಂದರೆ ಪ್ರಮುಖ ನಾಯಕಿ ಪಾತ್ರದ ಆಫರ್‌ ! ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಹಾಟ್‌ ಬ್ಯೂಟಿ ನಟಿ !!

You may also like

Leave a Comment