Home » YouTube: ವೀಡಿಯೋ ಕ್ರಿಯೆಟರ್ಸ್‌ಗಳಿಗೆ ಭರ್ಜರಿ ಗುಡ್‌ನ್ಯೂಸ್‌ !! ಅಚ್ಚರಿಯಂತೆ ಹೊಸ ಘೋಷಣೆ ಮಾಡಿದ ಯೂಟ್ಯೂಬ್‌

YouTube: ವೀಡಿಯೋ ಕ್ರಿಯೆಟರ್ಸ್‌ಗಳಿಗೆ ಭರ್ಜರಿ ಗುಡ್‌ನ್ಯೂಸ್‌ !! ಅಚ್ಚರಿಯಂತೆ ಹೊಸ ಘೋಷಣೆ ಮಾಡಿದ ಯೂಟ್ಯೂಬ್‌

1 comment
YouTube

YouTube: ಯೂಟ್ಯೂಬ್‌ ಜನಪ್ರಿಯ ವೀಡಿಯೋ ಪ್ಲಾಟ್‌ಫಾರ್ಮ್‌ ಆಗಿದ್ದು, ಗೂಗಲ್‌ನ ಜನಪ್ರಿಯ ಸೇವೆಗಳಲ್ಲಿ ಯೂಟ್ಯೂಬ್‌ ಕೂಡ ಒಂದಾಗಿದೆ. ಬಳಕೆದಾರರು ತಮ್ಮದೇ ಆದ ಯೂಟ್ಯೂಬ್‌ (YouTube) ಚಾನಲ್‌ ಕ್ರಿಯೆಟ್‌ ಮಾಡಿ ಹಣಗಳಿಸುವ ಸುವರ್ಣ ಅವಕಾಶ ಇಲ್ಲಿದೆ. ಇದೇ ಕಾರಣಕ್ಕೆ ಪ್ರಸ್ತುತ ದಿನಗಳಲ್ಲಿ ಯೂಟ್ಯೂಬ್‌ ಚಾನಲ್‌ಗಳನ್ನು ನಡೆಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಯೂಟ್ಯೂಬ್‌ ಕೂಡ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ ಹಾಗೂ ಟೂಲ್‌ಗಳನ್ನು ಪರಿಚಯಿಸುತ್ತಾ ಬಂದಿದೆ.

ಹೌದು, ಇದೀಗ ಯೂಟ್ಯೂಬ್‌ ಹೊಸ ಅಪ್ಲಿಕೇಶನ್‌ ಮತ್ತು ಹೊಸ ಎಐ ಚಾಲಿತ ಫೀಚರ್ಸ್‌ಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ವೀಡಿಯೊ ಎಡಿಟ್‌ ಮಾಡುವುದಕ್ಕೆ ಅವಕಾಶ ನೀಡುವ ಯೂಟ್ಯೂಬ್‌ ಕ್ರಿಯೆಟ್‌ ಆಪ್ ಅನ್ನು ಪರಿಚಯಿಸಿದೆ. ಇದರೊಂದಿಗೆ ಡ್ರೀಮ್‌ ಸ್ಕ್ರೀನ್‌ ಫೀಚರ್ಸ್‌ ಅನ್ನು ಕೂಡ ಪರಿಚಯಿಸಿದೆ.

ಬನ್ನಿ ಯೂಟ್ಯೂಬ್‌ ಗೆ ಸೇರಿರುವ ಹೊಸ ಫೀಚರ್ಸ್‌ಗಳ ವಿಶೇಷತೆ ಬಗ್ಗೆ ಇಲ್ಲಿ ತಿಳಿಯಿರಿ.

ಈಗಾಗಲೇ ಮೇಡ್‌ ಆನ್‌ ಯೂಟ್ಯೂಬ್‌ ಈವೆಂಟ್‌ನಲ್ಲಿ ಗೂಗಲ್‌ ಭರ್ಜರಿ ಘೋಷಣೆಗಳನ್ನು ಮಾಡಿದೆ. ಈ ಮೂಲಕ ಇನ್ಮುಂದೆ ನೀವು ವೀಡಿಯೊಗಳನ್ನು ಎಡಿಟ್‌ ಮಾಡುವುದಕ್ಕೆ ಬೇರೆ ಅಪ್ಲಿಕೇಶನ್‌ ಬಳಸುವ ಅವಶ್ಯಕತೆ ಬರುವುದಿಲ್ಲ. ಬದಲಿಗೆ ಯೂಟ್ಯೂಬ್‌ ಕ್ರಿಯೆಟ್‌ ಎನ್ನುವ ಅಪ್ಲಿಕೇಶನ್‌ ಅನ್ನು ಪರಿಚಯಿಸಲಾಗಿದೆ. ಇದು ವೀಡಿಯೋಗಳನ್ನು ಎಡಿಟ್‌ ಮಾಡುವುದಕ್ಕೆ ಅವಕಾಶ ನೀಡಲಿದೆ ಎನ್ನಲಾಗಿದೆ.

ಇದಲ್ಲದೆ ಯೂಟ್ಯೂಬ್‌ ಡ್ರೀಮ್‌ ಸ್ಕ್ರೀನ್‌ ಎನ್ನುವ ಫೀಚರ್ಸ್‌ ಘೋಷಣೆ ಮಾಡಿದೆ. ಇದು ಡ್ರೀಮ್‌ ಸ್ಕ್ರೀನ್‌ ಶಾರ್ಟ್ಸ್ ಕ್ರಿಯೆಟರ್ಸ್‌ಗಳಿಗೆ ಲಭ್ಯವಾಗುತ್ತಿರುವ ಹೊಸ ಪ್ರಾಯೋಗಿಕ AI-ಚಾಲಿತ ಫೀಚರ್ಸ್‌ ಆಗಿದೆ. ಇದು AI ಸಹಾಯದಿಂದ ಶಾರ್ಟ್ಸ್‌ಗಳಿಗಾಗಿ ಮತ್ತು ವೀಡಿಯೊ ಬ್ಯಾಕ್‌ಗ್ರೌಂಡ್‌ಗಳನ್ನು ಕ್ರಿಯೆಟ್‌ ಮಾಡಲು ಬಳಕೆದಾರರಿಗೆ ಅವಕಾಶ ನೀಡಲಿದೆ. ಇದಕ್ಕಾಗಿ ಶಾರ್ಟ್ಸ್‌ ಕ್ರಿಯೆಟರ್ಸ್‌ ಟೆಕ್ಷ್ಟ್‌ ಫಿಲ್ಡ್‌ನಲ್ಲಿ ಐಡಿಯಾ ಪ್ರಾಂಪ್ಟ್ ಅನ್ನು ನಮೂದಿಸಿ ಮತ್ತು AI ತನ್ನ ಮ್ಯಾಜಿಕ್ ಮಾಡಲು ಅವಕಾಶ ಮಾಡಿಕೊಡಬೇಕಾಗುತ್ತದೆ.

ಈ ಡ್ರೀಮ್‌ ಸ್ಕ್ರೀನ್‌ ಫೀಚರ್ಸ್‌ ಈ ವರ್ಷದ ಕೊನೆಯಲ್ಲಿ ಪರೀಕ್ಷೆಗೆ ಒಳಗಾಗಲಿದೆ ಎಂದು ಯೂಟ್ಯೂಬ್‌ ಹೇಳಿಕೊಂಡಿದೆ. ಇದು ಪ್ರಾರಂಭದಲ್ಲಿ ಆಯ್ದ ರಚನೆಕಾರರಿಗೆ ಮಾತ್ರ ಲಭ್ಯವಾಗಲಿದೆ. ಇದನ್ನು ಮುಂದಿನ ವರ್ಷದ ಆರಂಭದಲ್ಲಿ ಹೆಚ್ಚಿನ ಕ್ರಿಯೆಟರ್ಸ್‌ಗಳಿಗೆ ಲಭ್ಯವಾಗುವಂತೆ ಮಾಡುವುದಾಗಿ ಹೇಳಿದೆ.

ಇದಕ್ಕಾಗಿ ಯೂಟ್ಯೂಬ್‌ ಕ್ರಿಯೆಟ್‌ ಡೌನ್‌ಲೋಡ್‌ ಮಾಡಿ, ಇದು ವೀಡಿಯೋ ಎಡಿಟಿಂಗ್‌ ಅಪ್ಲಿಕೇಶನ್‌ ಆಗಿದ್ದು, ಸಂಪೂರ್ಣ ಉಚಿತವಾಗಿ ಲಭ್ಯವಾಗುವ ಅಪ್ಲಿಕೇಶನ್ ಆಗಿದೆ. ಇದರ ಮೂಲಕ ಲಾಂಗ್‌ ಫಾರ್ಮ್‌ ವೀಡಿಯೋ ಮತ್ತು ಶಾರ್ಟ್ಸ್‌ಗಳನ್ನು ಎಡಿಟ್ ಮಾಡಲು ಬಳಸಬಹುದಾಗಿದೆ. ಇದರಲ್ಲಿ ವಿವಿಧ ವೀಡಿಯೊ ಎಡಿಟಿಂಗ್ ಫೀಚರ್ಸ್‌ಗಳನ್ನು ಸಹ ನೀಡಲಾಗಿದೆ. ಅದರಂತೆ ಬಳಕೆದಾರರಿಗೆ ನಿಖರವಾದ ಎಡಿಟಿಂಗ್‌ ಮತ್ತು ಟ್ರಿಮ್ಮಿಂಗ್, ಆಟೋಮ್ಯಾಟಿಕ್‌ ಕ್ಯಾಪ್ಶನಿಂಗ್‌ ಮತ್ತು ವಾಯ್ಸ್‌ಓವರ್ ಸಾಮರ್ಥ್ಯಗಳನ್ನು ಹೊಂದಿದೆ.

ಅಲ್ಲದೇ ಇದು ರಾಯಲ್ಟಿ-ಫ್ರೀ ಮ್ಯೂಸಿಕ್‌, ಫಿಲ್ಟರ್‌ಗಳು, ಎಫೆಕ್ಟ್ಸ್‌ ಮತ್ತು ಟ್ರಾನ್ಸಕ್ಷನ್‌ ಲೈಬ್ರರಿಗೆ ಪ್ರವೇಶವನ್ನು ನೀಡಲಿದೆ. ಇನ್ನು ವೀಡಿಯೊ ಕ್ಲಿಪ್‌ನೊಂದಿಗೆ ಮ್ಯೂಸಿನ್‌ ಅನ್ನು ಆಟೋಮ್ಯಾಟಿಕ್‌ ಸಿಂಕ್ ಮಾಡುವ ಬೀಟ್-ಮ್ಯಾಚಿಂಗ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಈ ಅಪ್ಲಿಕೇಶನ್‌ ಅನ್ನು ಯಾರು ಬೇಕಾದರೂ ಬಳಸಬಹುದಾಗಿದೆ. ಆದರೆ ಇದು ಪೂರ್ಣ ಪ್ರಮಾಣದ ಪಿಸಿ ವೀಡಿಯೊ ಎಡಿಟಿಂಗ್‌ ಸಾಫ್ಟ್‌ವೇರ್‌ ಅನ್ನು ಬಳಸಿಕೊಂಡು ಪ್ರವೇಶವನ್ನು ಹೊಂದಿರದ ಮೊಬೈಲ್‌ ಕ್ರಿಯೆಟರ್ಸ್‌ಗಳನ್ನು ಗುರಿಯಾಗಿಸಿಕೊಂಡಿದೆ. ಸದ್ಯ ಈ ಅಪ್ಲಿಕೇಶನ್‌ ಬೀಟಾ ಲೆವೆಲ್‌ನಲ್ಲಿದ್ದು, ಭಾರತ ಸೇರಿದಂತೆ ಎಂಟು ದೇಶಗಳಲ್ಲಿ ಆಂಡ್ರಾಯ್ಡ್‌ನಲ್ಲಿ ಲಭ್ಯವಿದೆ.

ಇದನ್ನೂ ಓದಿ: 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬಂತು ಹೊಸ ಬೋರ್ಡ್ ಎಕ್ಸಾಮ್ ​​​! ಪರೀಕ್ಷೆ ಪ್ರಕ್ರಿಯೆ ಬಗ್ಗೆ ಇಲ್ಲಿದೆ ಮಾಹಿತಿ

You may also like

Leave a Comment