IPhone Charger: ಇದೀಗ ಈ ವರ್ಷದ ಅಂತ್ಯದ ವೇಳೆಗೆ ಆ್ಯಪಲ್ ಕಂಪೆನಿ ಐಫೋನ್ 15 ಸೀರಿಸ್ನ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲಿದ್ದು, ಬಿಡುಗಡೆಗೂ ಮೊದಲೇ ತನ್ನ ಗ್ರಾಹಕರಿಗೆ ಅಚ್ಚರಿಯ ಸುದ್ದಿಯೊಂದನ್ನು ಹೇಳಿದೆ.
ಜನಪ್ರಿಯ ಮೊಬೈಲ್ ತಯಾರಕ ಕಂಪೆನಿಯಾಗಿರುವ ಆ್ಯಪಲ್ ಕಂಪೆನಿ ಪ್ರತೀ ವರ್ಷ ಹೊಸ ಹೊಸ ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುತ್ತದೆ. ಅದೇ ರೀತಿ ಈ ಕಂಪೆನಿಯ ಸ್ಮಾರ್ಟ್ಫೋನ್ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯೂ ಇದೆ
ಇನ್ನು ಆ್ಯಪಲ್ ಕಂಪೆನಿ ಕಳೆದ ಬಾರಿ ಐಫೋನ್ 14 ಸೀರಿಸ್ ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಸೀರಿಸ್ನ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಅದೇ ರೀತಿ 2021 ರಲ್ಲಿ ಬಿಡುಗಡೆಯಾದ ಐಫೋನ್ 13 ಸೀರಿಸ್ ಸ್ಮಾರ್ಟ್ಫೋನ್ಗಳಿಗೆ ಈಗಲೂ ಭಾರೀ ಬೇಡಿಕೆಯಿದೆ
ಇದೀಗ ಈ ವರ್ಷದ ಅಂತ್ಯದ ವೇಳೆಗೆ ಆ್ಯಪಲ್ ಕಂಪೆನಿ ಐಫೋನ್ 15 ಸೀರಿಸ್ನ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲಿದ್ದು, ಬಿಡುಗಡೆಗೂ ಮೊದಲೇ ತನ್ನ ಗ್ರಾಹಕರಿಗೆ ಅಚ್ಚರಿಯ ಸುದ್ದಿಯೊಂದನ್ನು ಹೇಳಿದೆ.
ಹೌದು, ಈ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗುವಂತಹ ಐಫೋನ್ 15 ಸ್ಮಾರ್ಟ್ಫೋನ್ನಲ್ಲಿ ಯುಎಸ್ಬಿ ಟೈಪ್ ಸಿ ಚಾರ್ಜರ್ಗಳು ಬರಲಿದೆ ಎಂದು ವರದಿಯಾಗಿದೆ. ಐಫೋನ್ 15 ಯುಎಸ್ಬಿ ಟೈಪ್-ಸಿಯ ಫಾಸ್ಟ್ ಚಾರ್ಜರ್ನೊಂದಿಗೆ ಬರಲಿದೆ.
ಇನ್ನು ಆ್ಯಪಲ್ ಕಂಪೆನಿ ಪರಿಚಯಿಸಿರುವ ಈ ಹೊಸ ಟೈಪ್ ಸಿ ಚಾರ್ಜರ್ ಕೇವಲ ಆ್ಯಪಲ್ ಕಂಪೆನಿಯ ಫೋನ್ಗಳಿಗೆ ಸೀಮಿತವಾಗಿರುತ್ತದೆ.ಆ್ಯಪಲ್ ಪ್ರಮಾಣೀಕೃತ ನೀಡಿದ ಟೈಪ್-ಸಿ ಚಾರ್ಜರ್ ಮಾತ್ರ ಐಫೋನ್ 15 ನಲ್ಲಿ ಫಾಸ್ಟ್ ಚಾರ್ಜರ್ (IPhone Charger)ಆಗಿ ಕಾರ್ಯ ನಿರ್ವಹಿಸುತ್ತಂತೆ. ಇನ್ನು ಆಂಡ್ರಾಯ್ಡ್ ಅಥವಾ ಇತರೆ ಟೈಪ್-ಸಿ ಚಾರ್ಜರ್ ಮೂಲಕ ಐಫೋನ್ ಚಾರ್ಜ್ ಮಾಡಿದರೆ ನಿಧಾನವಾಗಿ ಬ್ಯಾಟರಿ ಫುಲ್ ಆಗುತ್ತದೆ ಎಂದು ಕಂಪೆನಿ ಹೇಳಿದೆ
ಸದ್ಯ ಆ್ಯಪಲ್ ಕಂಪೆನಿ ನೀಡಿರುವ ಚಾರ್ಜರ್ಗಳು ಅವುಗಳ ಮಾಡೆಲ್ಗಳಿಗೆ ಅನುಗುಣವಾಗಿ 20W ಅಥವಾ 27 ವೋಲ್ಟ್ನದ್ದಾಗಿದೆ. ಯುಎಸ್ಬಿ ಟೈಪ್-ಸಿ ಚಾರ್ಜರ್ ಮಾತ್ರ 20W ವೇಗದ ಚಾರ್ಜರ್ ಫೀಚರ್ ಅನ್ನು ಹೊಂದಿರಲಿದೆ ಎನ್ನಲಾಗಿದೆ.
ಎಲ್ಲಾ ಸ್ಮಾರ್ಟ್ಫೋನ್ಗಳು ಸಹ ಒಂದೇ ಚಾರ್ಜರ್ ವಿಧವನ್ನು ಹೊಂದಿರುವ ನಿಟ್ಟಿನಲ್ಲಿ ಮತ್ತು ಇ-ತ್ಯಾಜ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಯೂರೋಪ್ ಮಾರುಕಟ್ಟೆಯಲ್ಲಿರುವಂತಹ ಎಲ್ಲಾ ಗ್ಯಾಜೆಟ್ಗಳಿಗೆ ಟೈಪ್ ಸಿ ಚಾರ್ಜರ್‌ಗಳನ್ನು ಹೊಂದಿರಬೇಕು ಎಂದು ನಿಯಮ ಜಾರಿ ಮಾಡಿತ್ತು. ಆದರೆ ಪ್ರಾರಂಭದಲ್ಲಿ ಈ ನಿಯಮವನ್ನು ಆ್ಯಪಲ್ ವಿರೋಧಿಸಿದ್ದರೂ, ಈಗ ಅದಕ್ಕೆ ಒಪ್ಪಿಗೆ ನೀಡಿದೆ.
ಯುರೋಪಿಯನ್ ಕಮಿಷನ್ ಪ್ರಸ್ತಾಪಿಸಿದ್ದ ಹೊಸ ನಿಯಮದ ಪ್ರಕಾರ, ಯೂರೋಪ್‌ನಲ್ಲಿ ಮಾರಾಟ ಮಾಡಲಾಗುವ ಎಲ್ಲಾ ಪೋನ್‌ಗಳು 2024 ರ ವೇಳೆಗೆ ಯುಎಸ್ಬಿ ಟೈಪ್ ಸಿ ಮಾದರಿಯ ಚಾರ್ಜರ್‌ಗಳನ್ನು ಹೊಂದಿರಬೇಕು ಎಂದು ತಿಳಿಸಿತ್ತು. ಅದರಂತೆ ಇದೀಗ ಆ್ಯಪಲ್ ಕಂಪೆನಿ ತನ್ನ ಮುಂಬರುವ ಐಫೋನ್ 15ನಲ್ಲಿ ಟೈಪ್-ಸಿ ಚಾರ್ಜರ್ ಬರಲಿದೆ ಎಮದು ಹೇಳಿದೆ.
ಇದನ್ನೂ ಓದಿ: Maruti Suzuki Nexa : ಭರ್ಜರಿ 20 ಲಕ್ಷ ಕಾರುಗಳ ಮಾರಾಟ ಕಂಡ Nexa!!!
