Home » Call record: ನೀವು ಫೋನಲ್ಲಿ ಮಾತನಾಡುವಾಗ ಈ ರೀತಿಯ ಸೌಂಡ್‌ ಕೇಳಿಸುತ್ತಾ ? ಹಾಗಾದರೆ ನಿಮ್ಮ ಕಾಲ್ ರೆಕಾರ್ಡ್ ಆಗ್ತಿದೆ ಎಂದರ್ಥ

Call record: ನೀವು ಫೋನಲ್ಲಿ ಮಾತನಾಡುವಾಗ ಈ ರೀತಿಯ ಸೌಂಡ್‌ ಕೇಳಿಸುತ್ತಾ ? ಹಾಗಾದರೆ ನಿಮ್ಮ ಕಾಲ್ ರೆಕಾರ್ಡ್ ಆಗ್ತಿದೆ ಎಂದರ್ಥ

0 comments

ಹಲವು ದೇಶಗಳಲ್ಲಿ ಕರೆ ರೆಕಾರ್ಡಿಂಗ್ ಕಾನೂನುಬಾಹಿರವಾಗಿದೆ. ಹಾಗಾಗಿ ಗೂಗಲ್ ಕೂಡ ಕೆಲ ಸಮಯದ ಹಿಂದೆ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ. ಇನ್ನೂ ನಿಮ್ಮ ಮೊಬೈಲ್ ಫೋನ್ ಕರೆಗಳು ರೆಕಾರ್ಡ್ ಆಗುತ್ತಿದೆಯಾ? ಇಲ್ವಾ? ಎಂಬುದನ್ನು ಪರಿಶೀಲಿಸುವುದು ಕಷ್ಟವೇನಿಲ್ಲ. ಮೊದಲಾದರೆ ಕರೆ ರೆಕಾರ್ಡಿಂಗ್ ಆಗುತ್ತಿರುವುದು ತಿಳಿಯುತ್ತಿರಲಿಲ್ಲ.

ಇತ್ತೀಚೆಗೆ ಹೊಸ ಫೋನ್‌ಗಳಲ್ಲಿ ಕರೆ ರೆಕಾರ್ಡಿಂಗ್ ಪ್ರಕಟಣೆ ಸುಲಭವಾಗಿ ಕೇಳಿಬರುತ್ತದೆ. ಆದರೆ ಹಳೆಯ ಅಥವಾ ಫೀಚರ್ ಫೋನ್‌ನಿಂದ ಕರೆ ರೆಕಾರ್ಡಿಂಗ್ ಮಾಡಿದರೆ, ಅದರಲ್ಲಿ ಪ್ರಕಟಣೆ ಕೇಳದ ಕಾರಣ ಸಮಸ್ಯೆ ಉಂಟಾಗುತ್ತದೆ. ಅದನ್ನು ತಿಳಿದುಕೊಳ್ಳಲು ಬೇರೆ ವಿಧಾನಗಳಿವೆ.

ನೀವು ಕರೆಯಲ್ಲಿ ಮಾತನಾಡುವಾಗ ಬೀಪ್ ಶಬ್ದ ಬರುತ್ತಿದ್ದರೆ, ನಿಮ್ಮ ಕರೆ ರೆಕಾರ್ಡ್ ಆಗುತ್ತಿದೆ ಎಂದು ಅರ್ಥ. ಇತ್ತೀಚಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಹೊಸ ಆಂಡ್ರಾಯ್ಡ್ ಫೋನ್‌ಗಳ ಬಳಕೆದಾರರು ಈ ಬಗ್ಗೆ ಹೆಚ್ಚು ಚಿಂತಿಸಬೇಕಾದ ಅಗತ್ಯವಿಲ್ಲ. ಯಾಕಂದ್ರೆ ನೀವು ಕರೆ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದಾಗ, ನೀವು ಅದರ ಬಗ್ಗೆ ಎಚ್ಚರಿಕೆಯನ್ನು ಪಡೆಯುತ್ತೀರಿ. ನಿಮ್ಮ ಕರೆ ರೆಕಾರ್ಡ್ ಆಗುತ್ತಿದೆಯೇ ಎಂದು ನಿಮಗೆ ತಿಳಿಯುತ್ತದೆ.

ಇನ್ನೂ, ಕಾಲ್ ರೆಕಾರ್ಡಿಂಗ್ ಮತ್ತು ಕಾಲ್ ಟ್ಯಾಪಿಂಗ್ ನಡುವಿನ ವ್ಯತ್ಯಾಸ ಹಲವು ಜನರಿಗೆ ತಿಳಿದಿಲ್ಲ. ಮೂರನೇ ವ್ಯಕ್ತಿ ನಿಮ್ಮ ಕರೆಯ ಸಂಭಾಷಣೆಯನ್ನು ರೆಕಾರ್ಡ್ ಮಾಡುತ್ತಿದ್ದರೆ, ಅದನ್ನು ಕರೆ ಟ್ಯಾಪಿಂಗ್ ಎನ್ನಲಾಗುತ್ತದೆ. ಇದನ್ನು ಟೆಲಿಕಾಂ ಕಂಪನಿಗಳ ಮೂಲಕವೂ ಮಾಡಬಹುದಾಗಿದೆ. ಆದರೆ ನ್ಯಾಯಾಲಯದಿಂದ ಅನುಮತಿಯನ್ನು ಪಡೆದ ನಂತರವೇ ತನಿಖಾ ಸಂಸ್ಥೆಗಳು ಕರೆ ಟ್ಯಾಪಿಂಗ್ ಅನ್ನು ಮಾಡಬಹುದಾಗಿದೆ.

ಹಾಗೇ ಖಾಸಗಿ ಭದ್ರತಾ ಏಜೆನ್ಸಿಗಳು ಕರೆ ಟ್ಯಾಪಿಂಗ್‌ಗಾಗಿ ಹಲವಾರು ಸಾಧನಗಳನ್ನು ಬಳಸುತ್ತವೆ. ಕಾಲ್ ಟ್ಯಾಪಿಂಗ್ ನಲ್ಲಿ ಕರೆ ಮಾಡುವವರು ಕೆಲವು ವಿಷಯಗಳನ್ನು ತಿಳಿದುಕೊಳ್ಳಿ, ಆಗ ಕಾಲ್ ಟ್ಯಾಪ್ ಆಗುತ್ತಿದೆಯೇ? ಇಲ್ವಾ? ಎಂಬುದು ತಿಳಿಯಬಹುದಾಗಿದೆ. ಪದೇ ಪದೇ ಕಾಲ್ ಡ್ರಾಪ್ ಆಗುತ್ತಿದ್ದರೆ ಅದು ಕಾಲ್ ಟ್ಯಾಪಿಂಗ್ ನ ಲಕ್ಷಣ ಆಗಿರಬಹುದು. ಆದರೆ ಕೇವಲ ಕಾಲ್ ಡ್ರಾಪ್ ಎಂಬ ಕಾರಣಕ್ಕೆ ಕಾಲ್ ಟ್ಯಾಪ್ ಆಗುತ್ತಿದೆ ಎಂದು ಕೂಡ ಹೇಳಲು ಸಾದ್ಯವಿಲ್ಲ.

You may also like

Leave a Comment