Home » Upcoming Cars : ಅದ್ಭುತ ಮೈಲೇಜ್‌ ನೀಡುವ 4 ಎಸ್‌ಯುವಿ ಕಾರುಗಳು ಮಾರುಕಟ್ಟೆಗೆ ಲಗ್ಗೆ!

Upcoming Cars : ಅದ್ಭುತ ಮೈಲೇಜ್‌ ನೀಡುವ 4 ಎಸ್‌ಯುವಿ ಕಾರುಗಳು ಮಾರುಕಟ್ಟೆಗೆ ಲಗ್ಗೆ!

0 comments
Upcoming Cars

Upcoming Cars: ಮಾರುಕಟ್ಟೆಯಲ್ಲಿ ಕಾರುಗಳು ಭರ್ಜರಿ ಪೈಪೋಟಿ ನಡೆಸುತ್ತಿವೆ. ಕಂಪನಿಗಳು ನೂತನ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಕೆಲವು ದಿನಗಳ ಹಿಂದೆ ಟಾಟಾ (Tata) ಮುಂದಿನ 2 ವರ್ಷಗಳಲ್ಲಿ ಸುಮಾರು ಐದು ಕಾರುಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿತ್ತು. ಇದೀಗ ಶೀಘ್ರದಲ್ಲೇ ಅದ್ಭುತ ಮೈಲೇಜ್‌ ನೀಡುವ ಕೆಲವು ಸಿಎನ್‌ಜಿ ಆಧಾರಿತ ಎಸ್‌ಯುವಿ ಕಾರುಗಳು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ (Upcoming Cars). ಇವುಗಳನ್ನು ಆಟೋ ಎಕ್ಸ್‌ಪೋದಲ್ಲಿ (auto expo) ಪರಿಚಯಿಸಲಾಗಿದೆ. ಸದ್ಯ ಯಾವೆಲ್ಲಾ ಕಾರುಗಳು ಬಿಡುಗಡೆ ಆಗಲಿವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ (maruti suzuki brezza cng): ಬ್ರೆಝಾ ಮುಂಬರುವ ತಿಂಗಳುಗಳಲ್ಲಿ ಸಿಗಲಿದೆ ಎನ್ನಲಾಗಿದೆ. ಇದು 1.5 ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಸಿಎನ್‌ಜಿ ಕಿಟ್‌ನ ಆಯ್ಕೆಯನ್ನು ಹೊಂದಿರಲಿದೆ. ಹಾಗೇ ಮ್ಯಾನುವಲ್ ಜೊತೆಗೆ ಸಿಎನ್‌ಜಿ (CNG) ಮಾದರಿಯಲ್ಲಿ ಸ್ವಯಂಚಾಲಿತ ಪ್ರಸರಣವಾಗುತ್ತದೆ.

ಮಾರುತಿ ಸುಜುಕಿಯ ಫ್ರಾಂಕ್ಸ್ ಎಸ್‌ಯುವಿ (maruti suzuki fronx suv): ಇದರ ಬುಕ್ಕಿಂಗ್‌ಗಳು ಈಗಾಗಲೇ ತೆರೆದಿವೆ. ಮುಂದಿನ ತಿಂಗಳು ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ. ಇದು 1.2L ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ CNG ಆಯ್ಕೆಯೊಂದಿಗೆ ಮಾರುಕಟ್ಟೆಗೆ ಬರಲಿದೆ.

ಟಾಟಾ ಮೋಟಾರ್ಸ್ ಪಂಚ್ ಸಿಎನ್‌ಜಿ (tata motors punch cng): ಟಾಟಾ ಮೋಟಾರ್ಸ್ ನ ಪಂಚ್ ಸಿಎನ್‌ಜಿ 1.2L ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ CNG ಆಯ್ಕೆಯನ್ನು ಪಡೆದಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ ಹೊಂದಿದೆ. ಕಂಪನಿಯು ತನ್ನ 60 ಲೀಟರ್ ಸಿಎನ್‌ಜಿ ಟ್ಯಾಂಕ್ ಅನ್ನು ಎರಡು ಭಾಗಗಳಾಗಿ ವಿಂಗಡಿಸಿದೆ. ಹಾಗಾಗಿ ಇದು ಬೂಟ್ ಸ್ಪೇಸ್ ಪೆಟ್ರೋಲ್ ಮಾದರಿಯಂತೆಯೇ ಇರಲಿದೆ.

Kia Sonnet CNG : ಇದನ್ನು ಮುಂಬರುವ ತಿಂಗಳುಗಳಲ್ಲಿ BSVI ಹಂತ 2 ಅನುಸರಣೆಯೊಂದಿಗೆ ಪ್ರಾರಂಭಿಸಲಾಗುತ್ತದೆ.
CNG ಮಾದರಿಯ ಬೆಲೆ 1 ಲಕ್ಷ ರೂ.ಗಳಷ್ಟು ಹೆಚ್ಚಾಗಬಹುದು ಎನ್ನಲಾಗಿದೆ. ಸದ್ಯ ಈ 4 ಎಸ್‌ಯುವಿ ಕಾರುಗಳು ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿದೆ.

You may also like

Leave a Comment