Home » Kukke: ರಾಜ್ಯದ ಶ್ರೀಮಂತ ದೇವಾಲಯಗಳ ಪಟ್ಟಿ‌ಯಲ್ಲಿ ಈ ಬಾರಿಯೂ ನಂ.1 ಸ್ಥಾನದಲ್ಲಿ ಕುಕ್ಕೆ ಸುಬ್ರಹ್ಮಣ್ಯ

Kukke: ರಾಜ್ಯದ ಶ್ರೀಮಂತ ದೇವಾಲಯಗಳ ಪಟ್ಟಿ‌ಯಲ್ಲಿ ಈ ಬಾರಿಯೂ ನಂ.1 ಸ್ಥಾನದಲ್ಲಿ ಕುಕ್ಕೆ ಸುಬ್ರಹ್ಮಣ್ಯ

0 comments
Kukke Subramanya

Kukke: ರಾಜ್ಯ ಮುಜರಾಯಿ ಇಲಾಖೆಯು ಶ್ರೀಮಂತ ದೇವಾಲಯಗಳ ಪಟ್ಟಿ ಬಿಡುಗಡೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಅಗ್ರಸ್ಥಾನ ಪಡೆದಿದೆ. ರಾಜ್ಯದ ಎ ಗ್ರೇಡ್‌ ದೇವಾಲಯಗಳ ಪೈಕಿ ಕರಾವಳಿ ದೇವಾಲಯಗಳೇ ಮುಂದಿದೆ.

ರಾಜ್ಯದ ದೇವಳಗಳ ಆದಾಯದಲ್ಲಿ ಟಾಪ್‌ 10ರಲ್ಲಿ ಕರಾವಳಿಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕೊಲ್ಲೂರು ಶ್ರೀಮೂಕಾಂಬಿಕಾ ದೇವಳ, ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ದೇವಳ ಸ್ಥಾನ ಪಡೆದುಕೊಂಡಿವೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ 2023-24ರಲ್ಲಿ 146.01 ಕೋಟಿ ಆದಾಯ ಪಡೆದಿದ್ದರೆ, 2024-24ರಲ್ಲಿ 155.95 ಕೋಟಿ ರೂ. ಆದಾಯ ಗಳಿಸಿದೆ.ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ 2023-24ರಲ್ಲಿ 146.1 ಕೋಟಿ ಇದ್ದ ಆದಾಯ 2024-25ರಲ್ಲಿ 155.95 ಕೋಟಿಗೆ ತಲುಪಿದೆ.

ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ 2023-24ರಲ್ಲಿ 63.23 ಕೋಟಿ ಆದಾಯ ಬಂದಿತ್ತು. 2024-25ರಲ್ಲಿ 71.93 ಕೋಟಿಗೆ ತಲುಪಿದೆ. ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲದ ಆದಾಯ ಕುಸಿದಿದೆ. 2023-24ರಲ್ಲಿ 56.67 ಕೋಟಿ ಆದಾಯ ಬಂದಿತ್ತು. ಅದೇ ಆದಾಯ 2024-25ರಲ್ಲಿ 50.68 ಕೋಟಿಗೆ ಕುಸಿದಿದೆ.ನಂಜನಗೂಡು ಶ್ರೀಕಂಠೇಶ್ವರ ದೇಗುಲದ ಆದಾಯ 30.36 ಕೋಟಿಯಿಂದ 36.12 ಕೋಟಿಗೆ ಏರಿಕೆ ಆಗಿದೆ. ಸವದತ್ತಿ ಯಲ್ಲಮ್ಮ ದೇಗುಲದ ಆದಾಯ 25.80 ಕೋಟಿಯಿಂದ 29.95 ಕೋಟಿಗೆ ಏರಿಕೆ ಆಗಿದೆ. ಯಡಿಯೂರು ಸಿದ್ಧಲಿಂಗೇಶ್ವರ ದೇಗುಲದ ಆದಾಯ 35.49 ಕೋಟಿಯಿಂದ 29.82 ಕೋಟಿಗೆ ಕುಸಿದಿದೆ.ಹುಲಿಗಿಯ ಹುಲಿಗೆಮ್ಮ ದೇಗುಲದ ಆದಾಯ 16.29 ಕೋಟಿಯಿಂದ 17.30 ಕೋಟಿಗೆ ಏರಿಕೆಯಾಗಿದೆ. ಮಂದಾರ್ತಿ ದುರ್ಗಾಪರಮೇಶ್ವರಿ ದೇಗುಲದ ಆದಾಯ 15.27 ಕೋಟಿಯಿಂದ 16.54 ಕೋಟಿಗೆ ಏರಿಕೆ ಕಂಡಿದೆ. ಘಾಟಿ ಸುಬ್ರಹ್ಮಣ್ಯ ದೇಗುಲದ ಆದಾಯ 12.73 ಕೋಟಿಯಿಂದ 13.31 ಕೋಟಿಗೆ ತಲುಪಿದೆ. ಬೆಂಗಳೂರಿನ ಬನಶಂಕರಿ ದೇಗುಲದ ಆದಾಯ 11.95 ಕೋಟಿಯಿಂದ 11.38 ಕೋಟಿಗೆ ಕುಸಿತ ಕಂಡಿದೆ.

You may also like