Home » ಮಂಗಳೂರು ಬೆಂಗಳೂರು ಹಳಿಮೇಲೆ ಉರುಳಿದ ಬಂಡೆ ! ರೈಲು ಸಂಚಾರ ಸ್ಥಗಿತ ?

ಮಂಗಳೂರು ಬೆಂಗಳೂರು ಹಳಿಮೇಲೆ ಉರುಳಿದ ಬಂಡೆ ! ರೈಲು ಸಂಚಾರ ಸ್ಥಗಿತ ?

0 comments

ನಿರಂತರ ಸುರಿಯುತ್ತಿದ್ದ ಬರೀ ಮಳೆಯಿಂದ ಸಕಲೇಶಪುರ- ಸುಬ್ರಹ್ಮಣ್ಯ ರೈಲ್ವೆ ರೋಡ್ ಘಾಟ್ ವಿಭಾಗದಲ್ಲಿ ಎಡಕುಮೇರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ನಡುವೆ ಗುರುವಾರ ಬಂಡ ಉರುಳಿ ಹಳಿ ಮೇಲೆ ಬಿದ್ದ ಘಟನೆ ಸಂಭವಿಸಿದೆ.

ಎಡಕುಮೇರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ನಡುವೆ ಬಂಡೆ ಬಿದ್ದಿದ್ದ ಪ್ರದೇಶದ ಘಾಟ್ ಸ್ಟ್ರೆಚ್‌ನಲ್ಲಿರುವ ಟ್ರ್ಯಾಕ್‌ಗೆ ಯಾವುದೇ ಹಾನಿಯಾಗಿಲ್ಲ ಎಂದು ತುರ್ತು ನಿರ್ವಹಣೆ ವಿಭಾಗದ ತಂಡ ಖಚಿತಪಡಿಸಿದೆ.

ಬೆಂಗಳೂರು, ಹಾಸನ ಮತ್ತು ಮಂಗಳೂರು ನಡುವಿನ ರೈಲು ಸಂಚಾರಕ್ಕೆ ಕೆಲಕಾಲ ಅಡ್ಡಿಯಾಯಿತು.ಕೂಡಲೇ ಸ್ಥಳಕ್ಕೆ ಧಾವಿಸಿದ ಇಲಾಖೆಯ ತುರ್ತು ಕಾಮಗಾರಿ ನಿರ್ವಹಣಾ ವಿಭಾಗ ಹಳಿಯ ಮೇಲಿದ್ದ ಬಂಡೆಯನ್ನು ತೆರವುಗೊಳಿಸಿದರು.
ಬಂಡೆ ತೆರವುಗೊಳಿಸಿದ ಬಳಿಕ ಮಧ್ಯಾಹ್ನ 12.40ಕ್ಕೆ ಮಾರ್ಗ ರೈಲುಗಳ ಸಂಚಾರ ಪುನರಾರಂಭವಾಗಿದೆ. 

You may also like

Leave a Comment