Home » Bengaluru: ಹೊಸ ವರ್ಷಕ್ಕೆ ಸಾರಿಗೆ ನೌಕರರಿಗೆ ಶಾಕ್

Bengaluru: ಹೊಸ ವರ್ಷಕ್ಕೆ ಸಾರಿಗೆ ನೌಕರರಿಗೆ ಶಾಕ್

0 comments
KSRTC

Bengaluru: ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ರಾಜ್ಯ ಸರ್ಕಾರ (State Govt) ಸಾರಿಗೆ ನೌಕರರಿಗೆ ಶಾಕ್ ನೀಡಿದೆ.2026ರ ಜ.1ರಿಂದ ಮುಂದಿನ 6 ತಿಂಗಳವರೆಗೆ ಮುಷ್ಕರ ಮಾಡದಂತೆ ಸರ್ಕಾರ ಸಾರಿಗೆ ನೌಕರರಿಗೆ ಅಧಿಸೂಚನೆ ಹೊರಡಿಸಿದೆ.

ಯಾವುದೇ ಸಂದರ್ಭದಲ್ಲಿಯೂ ಕೂಡ ಮುಷ್ಕರ ಮಾಡದಂತೆ ಸೂಚನೆ ನೀಡಿದೆ. ಇದಕ್ಕೂ ಮುನ್ನ ನೀಡಿದ್ದ ಅಧಿಸೂಚನೆ 2025ರ ಡಿ.31ಕ್ಕೆ ಕೊನೆಯಾದ ಹಿನ್ನೆಲೆ ಈಗ ಮುಷ್ಕರ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಸರ್ಕಾರದ ಆದೇಶ ಉಲ್ಲಂಘಿಸಿದಲ್ಲಿ ಎಸ್ಮಾ ಜಾರಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದು, ಆದೇಶದ ಪ್ರತಿಯನ್ನು ಸಂಸ್ಥೆಯ ಎಲ್ಲಾ ಘಟಕಗಳು ಹಾಗೂ ನೌಕರರ ಗಮನಕ್ಕೆ ತರುವಂತೆ ಸೂಚನೆ ನೀಡಲಾಗಿದೆ.

You may also like