Home » Driving School: ಇನ್ಮುಂದೆ ಡ್ರೈವಿಂಗ್ ಕಲಿಬೇಕಂದ್ರೆ ಬಿಚ್ಚಬೇಕು ದುಪ್ಪಟ್ಟು ದುಡ್ಡು- 2024, ಜ.1 ರಿಂದ ದೇಶಾದ್ಯಂತ ಹೊಸ ರೂಲ್ಸ್ !!

Driving School: ಇನ್ಮುಂದೆ ಡ್ರೈವಿಂಗ್ ಕಲಿಬೇಕಂದ್ರೆ ಬಿಚ್ಚಬೇಕು ದುಪ್ಪಟ್ಟು ದುಡ್ಡು- 2024, ಜ.1 ರಿಂದ ದೇಶಾದ್ಯಂತ ಹೊಸ ರೂಲ್ಸ್ !!

1 comment
Driving School

Driving school: ನೀವೇನಾದರೂ ಡ್ರೈವಿಂಗ್ ಕಲಿಯಬೇಕು ಅಂದುಕೊಂಡಿದ್ದರೆ ಮೊದಲು ಈ ವಿಚಾರ ತಿಳಿದುಕೊಳ್ಳಿ! ಡ್ರೈವಿಂಗ್ ಸ್ಕೂಲ್(Driving school) ಮೂಲಕ ನಾಲ್ಕು ಚಕ್ರದ ವಾಹನಗಳ ವಾಹನ ಚಾಲನಾ ತರಬೇತಿಯನ್ನು (Driving Training) ಪಡೆಯುವ ಯೋಜನೆ ಹಾಕಿಕೊಂಡವರಿಗೆ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.

ರಾಜ್ಯದಲ್ಲಿರುವ ಡ್ರೖೆವಿಂಗ್ ಸ್ಕೂಲ್ಗಳಲ್ಲಿ ತರಬೇತಿ ಶುಲ್ಕವನ್ನು ಹೆಚ್ಚಳ ಮಾಡಿ ಸಾರಿಗೆ ಇಲಾಖೆ (Transport Department) ಆದೇಶ ಹೊರಡಿಸಿದೆ. ವಾಹನ ಚಾಲನಾ ತರಬೇತಿ 2024ರ ಜನವರಿ 1ರಿಂದ ದುಬಾರಿಯಾಗಲಿದ್ದು,ಲಘು ಮೋಟಾರು ವಾಹನ, ಮೋಟಾರು ಸೈಕಲ್, ಆಟೋ ರಿಕ್ಷಾ ಹಾಗೂ ಸಾರಿಗೆ ವಾಹನಗಳೆಂದು 4 ವರ್ಗವಾಗಿ ವಿಂಗಡನೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ಪ್ರತ್ಯೇಕ ದರವನ್ನು ನಿಗದಿಪಡಿಸಲಾಗಿದೆ.

ಶುಲ್ಕ ಪರಿಷ್ಕರಣೆ:
ಮೋಟಾರು ಸೈಕಲ್ ಈಗಿನ ದರ: 2,200 ಹಾಗೂ ಪರಿಷ್ಕೃತ ದರ 3000ರೂಪಾಯಿ ಆಗಲಿದೆ.
ಆಟೋ ರಿಕ್ಷಾ ಈಗಿನ ದರ: 3,000 ಹಾಗೂ ಪರಿಷ್ಕೃತ ದರ -4000 ರೂಪಾಯಿ ಆಗಲಿದೆ.
ಕಾರು ಈಗಿನ ದರ – 4,000 ಹಾಗೂ ಪರಿಷ್ಕೃತ ದರ – 7000ರೂಪಾಯಿ ಆಗಲಿದೆ.
ಸಾರಿಗೆ ವಾಹನ ಈಗಿನ ದರ -6, 000 ಹಾಗೂ ಪರಿಷ್ಕೃತ ದರ – 9000ರೂಪಾಯಿ ಆಗಲಿದೆ.
ಸಾರಿಗೆ ಇಲಾಖೆ ಅಧಿಕಾರಿಗಳು ಹೆಚ್ಚುವರಿ ಹಣ ವಸೂಲಿ ಮಾಡದಂತೆ ಎಚ್ಚರಿಕೆಯನ್ನು ನೀಡಿದ್ದಾರೆ.

ಜನವರಿಯಿಂದ ಕಾರು ಚಾಲನೆ ಕಲಿಯುವವರಿಗೆ 7 ಸಾವಿರ ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತದೆ. ಇದಲ್ಲದೆ ಎಲ್ಎಲ್ಗೆ 350 ರೂ. ಹಾಗೂ ಡಿಎಲ್ಗೆ 1,000 ರೂ. ಪ್ರತ್ಯೇಕವಾಗಿ ಆರ್ಟಿಒ ಕಚೇರಿಗೆ ಪಾವತಿ ಮಾಡಬೇಕಾಗುತ್ತದೆ. ಒಬ್ಬ ಅಭ್ಯರ್ಥಿ ಡ್ರೖೆವಿಂಗ್ ಕಲಿತು ಲೈಸೆನ್ಸ್ ಪಡೆಯಲು ಒಟ್ಟು 8350 ರೂ. ಖರ್ಚು ಮಾಡಬೇಕಾಗುತ್ತದೆ.

ಇದನ್ನು ಓದಿ: Anasuya Bharadwaj: ನನಗೆ ಹೆಣ್ಣು ಮಗು ಬೇಕಂದ್ರೂ ಗಂಡ ರೆಡಿ ಇಲ್ಲ – ಗಂಡನ ಬಗ್ಗೆ ಬೇಸರದ ಸಂಗತಿ ಬಹಿರಂಗಪಡಿಸಿದ ನಟಿ ಅನುಸೂಯ !!

You may also like

Leave a Comment