Home » Dr Bro : ನಾಪತ್ತೆ ನ್ಯೂಸ್ ಬೆನ್ನಲ್ಲೇ ಡಾ ಬ್ರೋ ಅವರ ಅಪಾಯಕಾರಿ ವಿಡಿಯೋ ವೈರಲ್ !!

Dr Bro : ನಾಪತ್ತೆ ನ್ಯೂಸ್ ಬೆನ್ನಲ್ಲೇ ಡಾ ಬ್ರೋ ಅವರ ಅಪಾಯಕಾರಿ ವಿಡಿಯೋ ವೈರಲ್ !!

1 comment
Dr Bro shocking video

Dr Bro : ದೇಶ ಪರ್ಯಟನೆ ಮಾಡುತ್ತಾ ಅಚ್ಚಗನ್ನಡದಿಂದಲೇ ಎಲ್ಲವನ್ನೂ ಪರಿಚಯಿಸುತ್ತಾ, ‘ನಮಸ್ಕಾರ ದೇವ್ರೂ’ ಎನ್ನುತ್ತಲೇ ಪ್ರತಿಯೊಬ್ಬರನ್ನೂ ರಂಜಿಸುತ್ತ ಕನ್ನಡಿಗರ ಮನ ಗೆದ್ದಿರೋ ಖ್ಯಾತ ಯೂಟ್ಯೂಬರ್ ಗಗನ್ ಶ್ರೀನಿವಾಸ್ ಅಲಿಯಾಸ್ ಡಾ ಬ್ರೋ(Dr Bro) ಅವರು ನಾಪತ್ತೆಯಾಗಿದ್ದಾರೆ ಎನ್ನುವ ಸುದ್ದಿಯೊಂದು ಭಾರೀ ಸುದ್ದಿಯಾಗಿತ್ತು. ಆದರೀಗ ಈ ಬೆನ್ನಲ್ಲೇ ಡಾ ಬ್ರೋ ಅವರ ಅಪಾಯಕಾರಿ ವಿಡಿಯೋ ಒಂದು ವೈರಲ್ ಆಗಿದೆ.

ಹೌದು, ಇವರ ಪರಿಚಯ ಮಾಡಿಸುವುದೇ ಬೇಡ. ಅಷ್ಟು ಫೇಮಸ್ ಆಗಿದ್ದಾರೆ ಡಾ ಬ್ರೋ. ಆದರೆ ಇವರು ನಾಪತ್ತೆಯಾಗಿದ್ದಾರೆ, ಒಂದು ತಿಂಗಳಿಂದ ಅವರು ಯಾವುದೇ ವಿಡಿಯೋ ಅಪ್ಲೋಡ್ ಮಾಡಿಲ್ಲ. ಅವರಿಗೆ ಏನೋ ಆಗಿದೆ ಎಂದು ಅಭಿಮಾನಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಆದರೀಗ ಈ ಸುದ್ದಿ ಬೆನ್ನಲ್ಲೇ ಡಾ ಬ್ರೋ ಅವರ ಅಪಾಯಕಾರಿ ವಿಡಿಯೋ ಒಂದು ವೈರಲ್ ಆಗಿದ್ದು ಮೈ ಜುಂ ಎನ್ನಿಸುತ್ತದೆ.

ಭಾರೀ ಅಪಾಯಕಾರಿ ಎನ್ನುವಂತ ರಷ್ಯಾದ(Russia) ಸೇತುವೆಯ ವಿಡಿಯೋವನ್ನು ಬ್ರೋ ಅವರು ಶೇರ್​ ಮಾಡಿದ್ದಾರೆ. ಒಂದು ಬೆಟ್ಟದಿಂದ ಇನ್ನೊಂದು ಬೆಟ್ಟಕ್ಕೆ ಕಟ್ಟಲಾಗಿರುವ ಸೇತುವೆ ಇದಾಗಿದ್ದು ಕಾಲು ಜಾರಿದ್ರೆ ಕೈಲಾಸವೇ ಗತಿ ಎಂದು ಸ್ವತಃ ಡಾ ಬ್ರೋ ಅವರೇ ಹೇಳಿಕೊಂಡಿದ್ದಾರೆ. ಅಲ್ಲದೆ ಈ ಸೇತುವೆ ಮೇಲೃ ಇದುವರೆಗೆ ಭಾರತದಿಂದ ಒಬ್ಬರೇ ಒಬ್ಬರು ಬಂದಿಲ್ಲ ಎಂದು ಅಲ್ಲಿಯ ಗೈಡ್​ ಹೇಳಿದ್ದಾರೆ. ಇದರಿಂದಾಗಿ ಡಾ ಬ್ರೋ ಅವರು ಈ ಸೇತುವೆ ಮೇಲೆ ನಡೆದ ಪ್ರಥಮ ಭಾರತೀಯರಾಗಿದ್ದಾರೆ.

ಡಾ.ಬ್ರೋ, ಇದೀಗ ಸೇತುವೆ ಮೇಲೆ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಶೇರ್​ ಮಾಡಿದ್ದು, ಇದನ್ನು ನೋಡಿ ಫ್ಯಾನ್ಸ್​ ಹೌಹಾರುತ್ತಿದ್ದಾರೆ. ಹಲವು ಅಭಿಮಾನಿಗಳು ಪ್ಲೀಸ್​ ಇಂಥ ರಿಸ್ಕ್​ ತಗೋಬೇಡಿ, ನಿಮ್ಮಿಂದ ಇನ್ನು ಹಲವಾರು ಮಾಹಿತಿಗಳನ್ನು ಪಡೆಯುವುದು ಇದೆ. ಇಂಥ ರಿಸ್ಕ್​ ತೆಗೆದುಕೊಂಡು ಹೆಚ್ಚೂ ಕಮ್ಮಿಯಾದರೆ ಕೋಟಿ ಕೋಟಿ ನಿಮ್ಮ ಅಭಿಮಾನಿಗಳ ನೋವು ಭರಿಸುವವರು ಯಾರು ಎನ್ನುತ್ತಿದ್ದಾರೆ ಡಾ ಬ್ರೋ ಅವರ ಪ್ಯಾನ್ಸ್.

https://youtu.be/zlHX_USXsns

ಇದನ್ನೂ ಓದಿ : Dr Bro: ಖ್ಯಾತ ಯೂಟ್ಯೂಬರ್ ಡಾ. ಬ್ರೋ ನಾಪತ್ತೆ ?

You may also like

Leave a Comment