Home » GoFirst Free Flight Ticket: ಈ ಯಾತ್ರಿಗಳಿಗೆ ಗೋಫಸ್ಟ್‌ ನೀಡುತ್ತಿದೆ ಉಚಿತ ಫ್ಲೈಟ್‌ ಟಿಕೆಟ್‌! ಈ ಅವಕಾಶ ಮಿಸ್‌ ಮಾಡ್ಬೇಡಿ

GoFirst Free Flight Ticket: ಈ ಯಾತ್ರಿಗಳಿಗೆ ಗೋಫಸ್ಟ್‌ ನೀಡುತ್ತಿದೆ ಉಚಿತ ಫ್ಲೈಟ್‌ ಟಿಕೆಟ್‌! ಈ ಅವಕಾಶ ಮಿಸ್‌ ಮಾಡ್ಬೇಡಿ

4 comments
GoFirst Free Flight Ticket

GoFirst Free Flight Ticket : ಖ್ಯಾತ ಏರ್ ಲೈನ್ಸ್ (Airline) ಕಂಪೆನಿಯು ಗೋಫಸ್ಟ್ ತನ್ನ ಪ್ರಯಾಣಿಕರಿಗೆ ವಾರ್ಷಿಕೋತ್ಸವದ ಉಡುಗೊರೆಯಾಗಿ ಉಚಿತ ವಿಮಾನ ಟಿಕೆಟ್ (GoFirst Free Flight Ticket) ಗಳನ್ನು ನಿಡುತ್ತಿದೆ.

ಮತ್ತು ಈ ಸಂದರ್ಭದಲ್ಲಿ ವಿಮಾನಯಾನ ಸಂಸ್ಥೆಯು ಎರಡು ವಿಶೇಷ ಕೊಡುಗೆಗಳನ್ನು (offer) ನೀಡುತ್ತಿವೆ. ವಿಶೇಷ ಕೊಡುಗೆಗಳು (offer) ಯಾವುವು ಮತ್ತು ಇದರಿಂದ ಪ್ರಯಾಣಿಕರಿಗೆ ಏನು ಲಾಭ ಎಂದು ತಿಳಿಯಲು ಮುಂದೆ ಓದಿ.

ನೀವೇನಾದರೂ ವಿಮಾನದಲ್ಲಿ ಪ್ರಯಾಣ ಮಾಡಲು ಪ್ರಯತ್ನಿಸುತ್ತಿದ್ದರೆ, ಈ ಸುದ್ದಿ ಖಂಡಿತವಾಗಿ ನಿಮಗೆ ಉಡುಗೊರೆಯಾಗುತ್ತದೆ. ಏರ್ ಲೈನ್ (airline) ಕಂಪನಿ ಗೋಫಸ್ಟ್ (ಗೋ first) ನಿಮಗಾಗಿಯೇ ವಿಶೇಷವಾದ ವಾರ್ಷಿಕೋತ್ಸವದ ಉಡುಗೊರೆ ತಂದಿದೆ, ಇದರಲ್ಲಿ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಇದೀಗ ಗೋಫಸ್ಟ್ (Go first) ತನ್ನ 17 ನೇ ವಾರ್ಷಿಕೋತ್ಸವವನ್ನು ಆಚಿರಿಸುತ್ತಿದೆ. ಇದರ ಹಿನ್ನಲೆಯಲ್ಲಿ ಪ್ರಯಾಣಿಕರಿಗಾಗಿಯೇ ಉಚಿತ ಟಿಕೆಟ್ (ticket) ನೀಡುತ್ತಿದ್ದು, ಈ ಕೊಡುಗೆಯೂ ನವೆಂಬರ್ 4, 2023 ರವರೆಗಿನ ವಿಮಾನಗಳಿಗೆ ಮಾತ್ರ ಅನ್ವಯಯಿಸುತ್ತದೆ. ಇದನ್ನು ಪಡೆದುಕೊಳ್ಳುವ ಪ್ರಯಾಣಿಕರು 17 ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಹಾಗೂ ಡಿಸೆಂಬರ್ 1, 2022 ರೊಳಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಅವರು ಆಧಾರ್ ಕಾರ್ಡ್ (Adhar card), ಪಾಸ್ ಪೋರ್ಟ್ (Pass port) ಗಳನ್ನು ಹೊಂದಿರಬೇಕು.

ಟಿಕೆಟ್ ಬುಕ್ ಮಾಡುವುದು ಹೇಗೆ?

ಉಡುಗೊರೆಯನ್ನು ಬಯಸಿದರೆ, ಮೊದಲು ಗೋಫಸ್ಟ್ (Go first)ವೆಬ್ ಸೈಟ್ (website) ಗೆ ಭೇಟಿ ನೀಡಿ ಮತ್ತು ಬುಕಿಂಗ್ ವಿಭಾಗದಲ್ಲಿ ತನ್ನ ಕೊನೆಯ ವಿಮಾನದ PNR ಅನ್ನು ನಮೂದಿಸಬೇಕು. ಅದಾದ ನಂತರ ಉಚಿತ ವೋಚರ್ ಗಾಗಿ ನಿಮ್ಮ ಫ್ಲೈ ಅನ್ನು ರಚಿಸಲು ಗೆಟ್ ವೋಚರ್ (vochar) ಅನ್ನು ಕ್ಲಿಕ್ ಮಾಡಿ. ಈ ಕ್ಲಿಕ್ ಆಪ್ಷನ್ ಕೇವಲ ಅರ್ಹ ಪ್ರಯಾಣಿಕರಿಗೆ ಕಾಣಿಸುತ್ತದೆ. ಇದಾದ ನಂತರ ಫಾರ್ಮ್ (form) ಅನ್ನು ಭರ್ತಿ ಮಾಡಬೇಕು ಮತ್ತು ಹೊಂದಿರುವ ಆಧಾರ್ ಕಾರ್ಡ್ (adhar card)/ ಪಾಸ್ ಪೋರ್ಟ್ (pass port) ಅನ್ನು ಅಪ್ಲೋಡ್ (upload) ಮಾಡಬೇಕು. ಒಮ್ಮೆ ಪೂರ್ತಿ ಮಾಡಿದ ಬಳಿಕ ಅದನ್ನು ಪರಿಶೀಲಿಸಿ ನಿಮಗೆ 72 ಗಂಟೆಗಳಲ್ಲಿ ಉಚಿತ ವೋಚರ್ (vochar) ಅನ್ನು ಇಮೇಲ್ ಗೆ ಕಳುಹಿಸುತ್ತಾರೆ.

ಇದಲ್ಲದೆ ಗೋಫಸ್ಟ್ (Go first) ತನ್ನ ಪ್ರಯಾಣಿಕರಿಗೆ ವಿಮಾನ ಟಿಕೆಟ್ ಗಳ ಮೇಲೆ ಭಾರಿ ರಿಯಾಯಿತಿಯನ್ನು ನೀಡುತ್ತಿದೆ. ಟಿಕೆಟ್ (ticket) ಗಳಲ್ಲಿ 17% ವರೆಗೆ ರಿಯಾಯಿತಿ ನೀಡುತ್ತಿದೆ. ಈ ರಿಯಾಯಿತಿ ಪಡೆಯಲು ಪ್ರೋಮೋ ಕೋಡ್ (promocode) GOING 17. ಅನ್ನು ನಮೂದಿಸಬೇಕು. ಈ ಕೊಡುಗೆಯು ಕೇವಲ ನವೆಂಬರ್ 4,2023 ರ ವರೆಗೆ ಇರುತ್ತದೆ. ನೀವು ವಿಮಾನದಲ್ಲಿ ಪ್ರಯಾಣಿಸುವ 15 ದಿನ ಮೊದಲೇ ಟಿಕೇಟ್ ಬುಕ್ (ticket book) ಮಾಡಬೇಕಾಗುತ್ತದೆ.

ಇದನ್ನೂ ಓದಿ: KYC Verification for SIM : ಶೀಘ್ರದಲ್ಲೇ ಸಿಮ್ ಕಾರ್ಡ್ ಗಳಿಗೆ ಕೆವೈಸಿ ಪರಿಶೀಲನೆ!

You may also like

Leave a Comment