Home » IRCTC ಯಿಂದ ಹೊಸವರ್ಷಕ್ಕೆ ಬೆಸ್ಟ್‌ ಆಫರ್‌!! ಕಡಿಮೆ ರೂ.ಗಳಲ್ಲಿ ಗೋವಾಕ್ಕೆ ಭೇಟಿ ನೀಡಿ, ಆನಂದ ಪಡಿ!!!

IRCTC ಯಿಂದ ಹೊಸವರ್ಷಕ್ಕೆ ಬೆಸ್ಟ್‌ ಆಫರ್‌!! ಕಡಿಮೆ ರೂ.ಗಳಲ್ಲಿ ಗೋವಾಕ್ಕೆ ಭೇಟಿ ನೀಡಿ, ಆನಂದ ಪಡಿ!!!

by Mallika
0 comments
Goa trip

Goa trip: ಗೋವಾ ತನ್ನ ಕಡಲತೀರದಿಂದ ಮಾತ್ರವಲ್ಲ ತನ್‌ ಹಸಿರು ಮತ್ತು ಇತರ ನೈಸರ್ಗಿಕ ಸೌಂದರ್ಯಕ್ಕೆ ಬಹಳ ಹೆಸರುವಾಸಿಯಾಗಿದೆ. ವರ್ಷವಿಡೀ ಇಲ್ಲಿಗೆ ಪ್ರಯಾಣಿಕರು ಬರುತ್ತಲೇ ಇರುತ್ತಾರೆ. ಆದಾಗ್ಯೂ, ಡಿಸೆಂಬರ್‌-ಜನವರಿ ಅವಧಿಯಲ್ಲಿ ಇಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತದೆ. ಏಕೆಂದರೆ ಗೋವಾದಲ್ಲಿ ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಸಂಭ್ರಮಾಚರಣೆ ಬಹಳ ವಿಶೇಷ. ಇಲ್ಲಿನ ನೈಟ್‌ ಲೈಫ್‌ ಮತ್ತು ಬೀಚ್‌ ಸಂಸ್ಕೃತಿ ಯುವ ಪೀಳಿಗೆಯನ್ನು ಆಕರ್ಷಿಸುವಲ್ಲಿ ಎರಡು ಮಾತಿಲ್ಲ.

ಆದರೆ ಗೋವಾ ಎಂದರೆ ಖರ್ಚು ಜಾಸ್ತಿ. ಹೆಚ್ಚಾಗಿ ಬಹುತೇಕರು ತಮ್ಮ ಮನಿ ಬಗ್ಗೆ ಖರ್ಚು ಮಾಡುವಾಗ ಬಹಳ ಯೋಚನೆ ಮಾಡುತ್ತಾರೆ. ಗೋವಾ ಟ್ರಿಪ್‌ ಎಂದು ನೀವು ಲೆಕ್ಕ ಹಾಕಿದರೆ ವೆಚ್ಚವು ಲಕ್ಷ ರೂಪಾಯಿಗಳವರೆಗೆ ಹೋಗಬಹುದು. ಆದರೆ IRCTC ನಿಮಗೆ ಅಂತಹ ಒಂದು ಸೂಪರ್‌ ಕೊಡುಗೆಯನ್ನು ತಂದಿದೆ. ಇದರ ಮೂಲಕ ನೀವು ಗೋವಾ ಪ್ರವಾಸವನ್ನು(Goa trip) ಅಗ್ಗದಲ್ಲಿ ಪೂರ್ಣಗೊಳಿಸಬಹುದು. ಇದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಬನ್ನಿ.

ಈ ಪ್ರವಾಸವು ಜನವರಿ 22 ರಿಂದ ಪ್ರಾರಂಭವಾಗುತ್ತದೆ ಮತ್ತು ಇದು 5 ರಾತ್ರಿಗಳು ಮತ್ತು 6 ಹಗಲುಗಳವರೆಗೆ ಇರುತ್ತದೆ. ಗೋವಾ ಪ್ರವಾಸವನ್ನು ಸರಿಯಾಗಿ ಆನಂದಿಸಲು ತುಂಬಾ ಸಮಯ ಬೇಕಾಗುತ್ತದೆ. IRCTC ಗೋವಾದಲ್ಲಿ ಈ ಹೊಸ ವರ್ಷದ ಬೊನಾಂಜಾ ಎಂದು ಹೆಸರಿಸಿದೆ (EGA013B).

IRCTC ಪ್ಯಾಕೇಜ್‌ನ ವೆಚ್ಚವನ್ನು ಓರ್ವ ವ್ಯಕ್ತಿಯಿಂದ ಗ್ರೂಪ್‌ಗೆ ವಿಭಾಗಿಸಿದೆ. ಒಬ್ಬ ವ್ಯಕ್ತಿಯಿಂದ ರೂ.47210, ಇಬ್ಬರಿಗೆ ರೂ 36690, ಮೂವರಿಗೆ ರೂ 36070, 5 ರಿಂದ 11 ವರ್ಷದ ಮಕ್ಕಳಿಗೆ ರೂ 35150 ಮತ್ತು 2 ರಿಂದ 4 ವರ್ಷದ ಮಕ್ಕಳಿಗೆ ರೂ 34530 ಪಾವತಿಸಬೇಕಾಗುತ್ತದೆ. ಈ ಪ್ಯಾಕೇಜ್ ಪ್ರಕಾರ, ವಿಮಾನವು ಗುವಾಹಟಿಯಿಂದ ಗೋವಾಕ್ಕೆ ಹೋಗುತ್ತದೆ ಮತ್ತು ನಿಮಗೆ ಎಕಾನಮಿ ಸೀಟ್ ನೀಡಲಾಗುವುದು.

ವಿಮಾನದ ಮೂಲಕ ಗೋವಾಕ್ಕೆ ಕರೆದೊಯ. ಮೊದಲ ದಿನ, ಗೋವಾದ ಹೋಟೆಲ್‌ನಲ್ಲಿ ಮಾತ್ರ ಉಳಿಯಬೇಕಾಗುತ್ತದೆ. ಎರಡನೇ ದಿನ ಬೆಳಗಿನ ಉಪಾಹಾರವನ್ನು ನೀಡಲಾಗುತ್ತದೆ ಮತ್ತು ನಂತರ ಉತ್ತರ ಗೋವಾದ ಪ್ರವಾಸಿ ತಾಣಗಳಾದ ಬಾಗಾ, ಬೀಚ್, ಅಗುಡಾ ಫೋರ್ಟ್‌ಗಳನ್ನು ತೋರಿಸಲಾಗುತ್ತದೆ. ಮೂರನೇ ದಿನ, ನೀವು ದಕ್ಷಿಣ ಗೋವಾಕ್ಕೆ ಭೇಟಿ ನೀಡುವ ಅವಕಾಶವನ್ನು ಪಡೆಯುತ್ತೀರಿ, ಇದರಲ್ಲಿ ನೀವು ಮಂಗೇಶಿ ದೇವಸ್ಥಾನ, ಗೋವಾದ ಅನೇಕ ಚರ್ಚ್‌ಗಳು ಮತ್ತು ಡೋನಾ ಪಾವ್ಲಾವನ್ನು ಭೇಟಿ ಮಾಡಲು ಸಾಧ್ಯವಾಗುತ್ತದೆ. ನಾಲ್ಕನೇ ದಿನ ನೀವು ದೂಧಸಾಗರ್ ಜಲಪಾತವನ್ನು ನೋಡಲು ಸಾಧ್ಯವಾಗುತ್ತದೆ ಮತ್ತು ಐದನೇ ದಿನ ನೀವು ಕೆಲವು ತಾಣಗಳಿಗೆ ಭೇಟಿ ನೀಡಬೇಕು.

ಇದನ್ನೂ ಓದಿ: Madikeri: ಮನೆಯೊಂದರ ಗೋಡೆ ಮೇಲೇರಿದ ಬೃಹತ್‌ ಗಾತ್ರದ ಉಡ!! ಇಣುಕಿ ನೋಡುತ್ತಿರುವುದು ಯಾರನ್ನು?

You may also like

Leave a Comment