Sleeper Bus: ಸ್ಲೀಪರ್ ಕೋಚ್ ಬಸ್‌ಗಳು (Sleeper Bus) ಪ್ರಯಾಣಿಕರಿಗೆ ಸುರಕ್ಷತೆ ಹಾಗೂ ಆರಾಮದಾಯಕ ಪ್ರಯಾಣ ನೀಡುತ್ತದೆ. ಈ ಬಸ್ ನಲ್ಲಿ ನೆಮ್ಮದಿಯಾಗಿ, ನಿಗದಿತ ಸಮಯದೊಳಗೆ ತೊಂದರೆಯಿಲ್ಲದೆ ಊರುಗಳಿಗೆ ತಲುಪಬಹುದು. ಸದ್ಯ ಈ ಬಸ್ ಬೇಡಿಕೆ ಕೂಡ ಹೆಚ್ಚಾಗಿದೆ. ಆರಾಮದಾಯಕವಾಗಿ ಊರಿಗೆ ತಲುಪಬಹುದು ಎಂದು ಎಲ್ಲರೂ ಇದನ್ನೇ ಬುಕ್ ಮಾಡುತ್ತಾರೆ. ಆದರೆ, ಈ ಮಧ್ಯೆ ಸ್ಲೀಪರ್ ಕೋಚ್ ಬಸ್‌ಗಳಲ್ಲಿ ಅತ್ಯಾಚಾರ, ಕಾಮದಾಟ, ವೇಶ್ಯಾವಾಟಿಕೆ ಹೆಚ್ಚಾಗಿದೆ. ಈ ಹಿನ್ನೆಲೆ ಲಾಡ್ಜ್ ಗಳಂತೆ ಸ್ಲೀಪರ್ ಕೋಚ್ ಬಸ್‌ಗಳ ಮೇಲೂ ಅಧಿಕಾರಿಗಳು ನಿಗಾ ಇಡಬೇಕು. ಇಂತಹ ಕೃತ್ಯಗಳು ಪ್ರಯಾಣಿಕರಿಗೆ ಅಸುರಕ್ಷತೆಯಾಗಬಾರದು ಎಂಬ ಕೂಗು ಕೇಳಿಬರುತ್ತಿದೆ.
6 ತಿಂಗಳ ಹಿಂದೆ ಸೇಲಂನಲ್ಲಿ ಯುವತಿಯ ಅತ್ಯಾಚಾರ (rape) ಇದೇ ರೀತಿಯ ಬಸ್ ನಲ್ಲಿ ನಡೆದಿದ್ದು, ಘಟನೆ ಬೆಚ್ಚಿಬೀಳಿಸಿದೆ. ಸೇಲಂ ಜಿಲ್ಲೆಯ ಆತೂರ್ ಬಳಿಯ ತಲೈವಾಸಲ್ ಕಟ್ಟುಕೊಟ್ಟೈ ಮೂಲದ ಹುಡುಗಿಗೆ (17) ಆತೂರು ಬೃಂಗಮಾದೇವಿ ಮೂಲದ ದಿನೇಶ್ ಕುಮಾರ್ (24) ಎಂಬಾತನೊಂದಿಗೆ ಫೇಸ್ ಬುಕ್ ನಲ್ಲಿ ಪರಿಚಯವಾಗಿತ್ತು. ಹಲವು ಸಮಯದ ಚಾಟಿಂಗ್ ನಂತರ ಇವರ ಮೊದಲ ಭೇಟಿಯಾಗಿತ್ತು. ಯುವತಿ ದಿನೇಶ್ ನನ್ನು ಭೇಟಿಯಾದ ಸಂದರ್ಭದಲ್ಲಿ ಆತ ಆಕೆಯನ್ನು ಪ್ರೀತಿಸಿ ಮದುವೆಯಾಗುವುದಾಗಿ ತಿಳಿಸಿದ್ದಾನೆ. ಆತನ ಮಾತಿಗೆ ಮರುಳಾಗಿ ನಂಬಿದ ಯುವತಿ ಆಗಸ್ಟ್ 12 ರಂದು ಮನೆಯಿಂದ ಓಡಿಹೋಗಿದ್ದಳು. ನಂತರ ಇಬ್ಬರೂ ಸ್ಲೀಪರ್ ಕೋಚ್ ಬಸ್’ನಲ್ಲಿ ಪ್ರಯಾಣ ಮಾಡಿದ್ದರು. ಪ್ರಯಾಣದ ಮಧ್ಯೆ ಟ್ರಾಫಿಕ್ ಜಾಮ್ ಆಗಿದ್ದು, ಬಸ್ ತುಂಬಾ ಹೊತ್ತು ನಿಂತಿದ್ದರಿಂದ ಸಮಯ ಸಾಧಿಸಿ ಆ ವೇಳೆ ದಿನೇಶ್ ಕುಮಾರ್ ತನ್ನೊಡನೆ ಬಂದಿದ್ದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ದಿನೇಶ್’ನನ್ನು ಅರೆಸ್ಟ್ ಮಾಡಲಾಗಿದೆ.
ಇಷ್ಟೇ ಅಲ್ಲ ಚತುರ ಯುವಕ ಯುವತಿಯರು ಮನೆಯವರ ಕಣ್ಣು ತಪ್ಪಿಸಿ ಕಾಮದಾಟ ಆಡುತ್ತಾರೆ. ಸ್ಲೀಪರ್ ಕೋಚ್‌ನಲ್ಲಿ ಗಂಡಸರು ಹುಡುಗಿಯ ಹೆಸರಲ್ಲಿ ಟಿಕೆಟ್ ಬುಕ್ ಮಾಡುತ್ತಾರೆ. ಅರಿಯದ ಯುವತಿಯ ಪೋಷಕರು ಬಸ್ ನಲ್ಲಿ ಇತರ ಹೆಣ್ಣುಮಕ್ಕಳು ಇದ್ದಾರೆ ತಮ್ಮ ಮಗಳು ಸೇಫ್ ಆಗಿ ಬಸ್ ನಲ್ಲಿ ಪ್ರಯಾಣಿಸಬಹುದು ಎಂದುಕೊಂಡು ಬಸ್ ನಲ್ಲಿ ಕಳುಹಿಸುತ್ತಾರೆ. ಆದರೆ, ಅಲ್ಲಿ ಆಗೋದೇ ಬೇರೆ. ಯುವತಿ ತನ್ನ ಹೆಸರಿನಲ್ಲಿ ಬುಕ್ ಆದ ಸೀಟ್ ನಂಬರ್ ಯುವಕನಿಗೆ ಮುಂಚಿತವಾಗಿ ಕಳುಹಿಸಿರುತ್ತಾಳೆ. ಹಾಗಾಗಿ ಯುವತಿ ಬೆಡ್ ಪಕ್ಕದಲ್ಲಿಯೇ ಯುವಕ ಮಹಿಳೆಯ ಹೆಸರಿನಲ್ಲಿ ಟಿಕೆಟ್ ಬುಕ್ ಮಾಡುತ್ತಾನೆ. ಮತ್ತು ತಾನೇ ಬುಕ್ ಮಾಡಿದ್ದು ಎಂದು
ಬಸ್ ಹತ್ತುತ್ತಾನೆ. ನಂತರ ನಡೆಯೋದು ಹೇಳಬೇಕಿಲ್ಲ ಎಂದು ಓಮ್ನಿ ಸ್ಲೀಪರ್ ಕೋಚ್ ಉದ್ಯೋಗಿ ಹೇಳುತ್ತಾರೆ.
ಇಂತಹ ಸಾಕಷ್ಟು ಘಟನೆಗಳು ಬಸ್’ನ ಪರದೆ ಹಿಂದೆ ನಡೆದು ಹೋಗುತ್ತದೆ. ಅನೇಕ ಯುವಕ ಯುವತಿಯರು ತಮ್ಮ ಕಾಮ ತೀರಿಸಿಕೊಳ್ಳಲೂ ಲಾಡ್ಜ್‌ಗಳಿಗಿಂತ ಸೇಫ್ ಎಂದು ಬಸ್‌ನ್ನು ಬುಕ್ ಮಾಡುತ್ತಾರೆ. ವೇಶ್ಯಾವಾಟಿಕೆ ನಡೆಸುತ್ತಾರೆ.
ಬಸ್ ನೊಳಗೆ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಚೆನ್ನೈ ಪೊಲೀಸರಿಗೆ ದೂರು ನೀಡಲಾಗಿದೆ. ಹೀಗಾಗಿ ಪೊಲೀಸರು ಕೂಡ ಓಮ್ನಿ ಬಸ್‌ಗಳ ಮೇಲೆ ಕಣ್ಣಿಟ್ಟು ಪದೇ ಪದೇ ದಾಳಿ ನಡೆಸಿ ಅಪರಾಧ ಕಡಿಮೆ ಮಾಡುತ್ತಿದ್ದಾರೆ.
ಇದನ್ನೂ ಓದಿ: RBI: ಬ್ಯಾಂಕ್ ಗ್ರಾಹಕರೇ ಇತ್ತ ಗಮನಿಸಿ! ಬದಲಾಗಲಿದೆ ಜೂನ್.1 ರಿಂದ ಈ ಎಲ್ಲಾ ನಿಯಮ!!!
