Home » Sabarimala: ಶಬರಿಮಲೆಯ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪ್ರಮೋದ್ ಮುತಾಲಿಕ್!!

Sabarimala: ಶಬರಿಮಲೆಯ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪ್ರಮೋದ್ ಮುತಾಲಿಕ್!!

1 comment
Sabarimala

Sabarimala: ಶಬರಿಮಲೆಯಲ್ಲಿ(Sabarimala) ಜನವರಿ 15ರಿಂದ ಮಕರವಿಳಕ್ಕು ಉತ್ಸವ ಆರಂಭವಾಗಲಿದ್ದು, ಈ ನಿಟ್ಟಿನಲ್ಲಿ ಇದಕ್ಕೆ ಪೂರಕ ತಯಾರಿಗಳನ್ನು ಈಗಾಗಲೇ ಟಿಡಿಬಿ ಮಾಡಿಕೊಂಡಿದೆ.ಜನವರಿ 16 ರಂದು ಸಂಜೆ (6:36:45) ಮಕರ ಜ್ಯೋತಿ ದರ್ಶನವಾಗಲಿದೆ.

ಶಬರಿಮಲೆಗೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಸಾಗರೋಪಾದಿಯಲ್ಲಿ ಭಕ್ತ ಸಮೂಹ ಭೇಟಿ ನೀಡುತ್ತಿದೆ. ತಿರುವಾಂಕೂರು ದೇವಸ್ವಂ ಮಂಡಳಿಗೆ ಕಾಣಿಕೆ ರೂಪದಲ್ಲಿ ಬಂದ ಆದಾಯವೂ ದಾಖಲೆ ಮಟ್ಟ ತಲುಪಿದ್ದು,ಸದ್ಯ ನಾಣ್ಯಗಳನ್ನು ಹೊರತುಪಡಿಸಿ 204 ಕೋಟಿ ಆದಾಯ ಬಂದಿದೆ ಎಂದು ಟಿಡಿಬಿ ಮಾಹಿತಿ ನೀಡಿದೆ. ಇದರ ನಡುವೆ, ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಇದನ್ನು ಓದಿ: RBI: ಬ್ಯಾಂಕ್ ಗ್ರಾಹಕರೇ ಗಮನಿಸಿ, ಈ ಬ್ಯಾಂಕ್ಗಳು ಇಂದಿನಿಂದ ಆಗಲಿವೆ ಬಂದ್: ಈ ಬ್ಯಾಂಕ್ ನಲ್ಲಿ ಖಾತೆ ಇದೆಯಾ ಚೆಕ್ ಮಾಡಿ!!

“ಶಬರಿಮಲೆ ದೇವಸ್ಥಾನದ ಭಕ್ತರನ್ನು ಮುಸ್ಲಿಮರು ಮತ್ತು ಕ್ರೈಸ್ತರು ಶೋಷಣೆ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಅಯ್ಯಪ್ಪ ದೇವಸ್ಥಾನವು ತಿರುಪತಿ ವೆಂಕಟೇಶ್ವರನಷ್ಟೇ ಖ್ಯಾತಿ ಪಡೆದಿದೆ. ಆರು ರಾಜ್ಯಗಳಿಂದ ಸುಮಾರು ಐದು ಕೋಟಿ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ ಎಂದು ಮುತಾಲಿಕ್ ಹೇಳಿದ್ದಾರೆ. ಇಲ್ಲಿ ಎಲ್ಲಾ ಮೂಲಗಳಿಂದ ಆದಾಯವು 3,000 ಕೋಟಿ ರೂಪಾಯಿಗಳನ್ನು ದಾಟುತ್ತದೆ. ದೇವಸ್ಥಾನದ ಆದಾಯವನ್ನು ಶಬರಿಮಲೆಯ ಐದು ಕೋಟಿ ಭಕ್ತರ ಅನುಕೂಲಕ್ಕಾಗಿ ಸೌಲಭ್ಯಕ್ಕೆ ಬಳಕೆ ಮಾಡುತ್ತಿಲ್ಲ. ದೇವಸ್ಥಾನದ ಆಡಳಿತ ಮಂಡಳಿಗೆ ಸರ್ಕಾರ ಬೆದರಿಕೆ ಹಾಕುತ್ತಿದೆ” ಎಂದು ಮುತಾಲಿಕ್ ಹೇಳಿದ್ದಾರೆ.

ಹಿಂದೂ ಸಂಘಟನೆಗಳು ಭಕ್ತರಿಗೆ ಉಚಿತ ಅನ್ನದಾನ ವ್ಯವಸ್ಥೆ ಮಾಡುತ್ತಿದ್ದು, ಅದನ್ನು ನಿಷೇಧಿಸಿ ಪೊಲೀಸ್ ಇಲಾಖೆಗೆ ಹಸ್ತಾಂತರ ಮಾಡಲಾಗುತ್ತಿದೆ. ಈ ಕ್ರಮ ಕೈಗೊಂಡ ಬಳಿಕ, ಅನೇಕ ಭಕ್ತರಿಗೆ ಪ್ರಸಾದ ಸಿಗುತ್ತಿಲ್ಲ. ಭಕ್ತರಿಗೆ ಅನ್ನ ಪ್ರಸಾದ ವಿತರಿಸುವ ವ್ಯವಸ್ಥೆಯನ್ನು ಸರಿಪಡಿಸುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದಾಗಿ ಮುತಾಲಿಕ್ ಹೇಳಿದ್ದಾರೆ. ಕರ್ನಾಟಕ ಸರಕಾರ ಕೇರಳ ಸರಕಾರದೊಂದಿಗೆ ಮಾತುಕತೆ ನಡೆಸಿ ಭಕ್ತರಿಗೆ ಸೌಲಭ್ಯ ಕಲ್ಪಿಸಬೇಕು. ಸಾವಿರಾರು ಕೋಟಿ ಆದಾಯವನ್ನು ಭಕ್ತರ ಪ್ರಯೋಜನಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು. ಉಚಿತ ಆಹಾರ ವಿತರಣೆ ಕಾರ್ಯಕ್ರಮವನ್ನು ಹಿಂದಿನಂತೆ ಮತ್ತೆ ಆರಂಭ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

You may also like

Leave a Comment