Vehicle: ದಿನದಿಂದ ದಿನಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಳೆಯ ವಾಹನಗಳ (Vehicle) ಸಂಖ್ಯೆ ಹೆಚ್ಚಾಗುತ್ತಿವೆ. ಇದರಿಂದ ನಗರದಲ್ಲಿ ವಾಯುಮಾಲಿನ್ಯದ ಪ್ರಮಾಣವು ಕೂಡ ಹೆಚ್ಚಾಗುತ್ತಿದ್ದು, ವಾಹನ ಮಾಲೀಕರು ಮಾತ್ರ ತಮ್ಮ ಹಳೆಯ ವಾಹನಗಳನ್ನು ಗುಜರಿಗೆ ಹಾಕಲು ಹಿಂದೇಟು ಹಾಕುತ್ತಿದ್ದಾರೆ.ಆದ್ರೆ, ಇನ್ಮುಂದೆ 15 ವರ್ಷ ಮೀರಿದ ವಾಹನಗಳನ್ನು ನೇರ ಸ್ಕ್ರ್ಯಾಪ್‍ಗೆ ಹಾಕಬೇಕು ಎಂದು ಸರ್ಕಾರ ಅನುಮೋದನೆ ನೀಡಿದೆ.
ಕರ್ನಾಟಕದಲ್ಲಿ ಇನ್ಮುಂದೆ 15 ವರ್ಷ ಮೀರಿದ ವಾಹನಗಳ ಸ್ಕ್ರ್ಯಾಪ್‌ಗೆ ಸರ್ಕಾರದಿಂದ ಅನುಮೋದನೆ ನೀಡಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.
ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆ, ನಿಗಮ, ಮಂಡಳಿ, ನಗರಸಭೆ, ಸರ್ಕಾರದ ಇತರೆ ಅಧೀನ ಸಂಸ್ಥೆಗಳಿಗೆ ಸೇರಿದ ನೋಂದಣಿಯಾಗಿ 15 ವರ್ಷ ಮೀರಿದ ವಾಹನಗಳನ್ನು ಕಡ್ಡಾಯವಾಗಿ ರಾಜ್ಯದಲ್ಲಿ ಸ್ಥಾಪಿತವಾಗಿರುವ ರಿಜಿಸ್ಟರ್ಡ್ ವೆಹಿಕಲ್ ಸ್ಕ್ರ್ಯಾಪಿಂಗ್ ಫ್ಯಾಸಿಲಿಟಿ ಗಳಲ್ಲಿಯೇ ಸ್ಕ್ರ್ಯಾಪ್ ಮಾಡಲು ರಾಜ್ಯ ಸರ್ಕಾರವು ಕಳೆದ ಸೆ.12 ರಂದು ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
2023ರಲ್ಲೇ ಗುಜರಿ ನೀತಿ ಜಾರಿರಾಜ್ಯದಲ್ಲಿ ಹಳೆಯ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕೇಂದ್ರ ಸರ್ಕಾರ ದೇಶದೆಲ್ಲೆಡೆ 2023 ಏಪ್ರಿಲ್ 1 ರಿಂದ ಗುಜರಿ ನೀತಿ ಜಾರಿಯಾಗಿದ್ದು, 15 ವರ್ಷ ದಾಟಿದ ದೇಶದ ಎಲ್ಲಾ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕಬೇಕು ಎಂಬ ನಿಯಮವಿದೆ.
ಎನ್ಜಿಟಿ ರೂಲ್ಸ್ ಪ್ರಕಾರ ದೆಹಲಿಯಲ್ಲಿ 10 ವರ್ಷ ಮೇಲ್ಪಟ್ಟ ಪೆಟ್ರೋಲ್ ವಾಹನ ಮತ್ತು 15 ವರ್ಷ ಮೇಲ್ಪಟ್ಟ ಡಿಸೇಲ್ ವಾಹನಕ್ಕೆ ನಿಷೇಧ ಹೇರಲಾಗಿದೆ.ಕರ್ನಾಟಕದಲ್ಲಿ ಹಳೇ ವಾಹನಗಳ ಕಥೆಗೋವಿಂದ ರಾಜು ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ, ಎನ್.ಐ.ಸಿ ಒದಗಿಸಿರುವ ಮಾಹಿತಿಯ ಪ್ರಕಾರ ಡಿಸೆಂಬರ್ 4ರ ಅಂತ್ಯಕ್ಕೆ 15 ವರ್ಷದ ಅವಧಿ ಮೀರಿದ ಒಟ್ಟು 18,552 ಸರ್ಕಾರಿ ವಾಹನಗಳ ನೋಂದಣಿಯನ್ನು ಕೇಂದ್ರ ಸರ್ಕಾರವು ವಾಹನ್ ಪೋರ್ಟಲ್‌ನಲ್ಲಿ ರದ್ದುಪಡಿಸಿದೆ. ಈ ಪಟ್ಟಿಯಲ್ಲಿ ಸಾರಿಗೆ ಸಂಸ್ಥೆಗಳ ಬಸ್ಸುಗಳಿಲ್ಲ. ಈ 18,552 ವಾಹನಗಳ ಪೈಕಿ ಆರ್‌ವಿಎಸ್‌ಎಫ್‌ನಲ್ಲಿ ಒಟ್ಟು 1,493 ವಾಹನಗಳನ್ನು ಸ್ಕ್ರ್ಯಾಪ್ ಮಾಡಲಾಗಿದೆ. 17,059 ವಾಹನಗಳನ್ನು ಸ್ಕ್ರ್ಯಾಪ್ ಮಾಡುವುದು ಬಾಕಿ ಇರುತ್ತದೆ ಎಂದರು.ಹಿಂದೇಟು ಹಾಕುತ್ತಿರೋ ಮಾಲೀಕರುರಾಜ್ಯದಲ್ಲೂ 15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಮತ್ತು ಸ್ವಂತ ವಾಹನಗಳನ್ನು ಗುಜರಿಗೆ ಹಾಕಬೇಕು ಎಂಬ ನಿಯಮ ಇದೆ.
ತಮ್ಮ ಸ್ವಂತ ವಾಹನಗಳನ್ನು ಗುಜರಿಗೆ ಹಾಕಿದರೆ ಹೊಸ ವಾಹನ ಖರೀದಿಸುವಾಗ ಸಬ್ಸಿಡಿ ಕೂಡ ನೀಡುತ್ತಿದ್ದಾರೆ. ಆದರೆ 15 ವರ್ಷ ಮೇಲ್ಪಟ್ಟ ತಮ್ಮ ಹಳೆಯ ವಾಹನಗಳನ್ನು ಗುಜರಿಗೆ ಹಾಕಲು ವಾಹನ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ.ಕರ್ನಾಟಕದಲ್ಲೇ ಅದರಲ್ಲೂ ಬೆಂಗಳೂರಲ್ಲಿ ಅತೀ ಹೆಚ್ಚು ಹಳೆಯ ವಾಹನಗಳಿವೆ. ಒಟ್ಟು 37 ಲಕ್ಷ ವಾಹನಗಳಿದ್ದು, ಅದರಲ್ಲಿ 24 ಲಕ್ಷ ದ್ವಿಚಕ್ಷ ವಾಹನಗಳು, 7 ಲಕ್ಷ ಕಾರುಗಳಿವೆ.
