Home » Indian Railway: ರೈಲಿನ ಇಂಜಿನ್‌ನಲ್ಲಿ ಹಲವಾರು ಬಣ್ಣದ ಹೆಡ್‌ಲೈಟ್‌ ಏಕಿದೆ? ಇವುಗಳ ಅರ್ಥವೇನು?

Indian Railway: ರೈಲಿನ ಇಂಜಿನ್‌ನಲ್ಲಿ ಹಲವಾರು ಬಣ್ಣದ ಹೆಡ್‌ಲೈಟ್‌ ಏಕಿದೆ? ಇವುಗಳ ಅರ್ಥವೇನು?

2 comments
Indian Railway

Indian Railway : ಭಾರತದ ರೈಲ್ವೆ ಸಂಚಾರವು (Indian Railway) ಹೆಚ್ಚಿನ ಅಭಿವೃದ್ಧಿ (development ) ಹೊಂದಿದ್ದು, ಕೋಟ್ಯಾಂತರ ಜನರು ತಮ್ಮ ದಿನನಿತ್ಯ ಸಾರಿಗೆಯಾಗಿ ರೈಲನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಕಾರಣದಿಂದಲೇ ಇದನ್ನು ಭಾರತದ ಜೀವನ ರೇಖೆ ಎಂದೂ ಕರೆಯುತ್ತಾರೆ.

ಆದರೆ ರೈಲ್ವೆ ಸಂಚಾರ ಬಗೆಗಿನ ಕೆಲವು ವಿಚಾರ ನಮಗೆ ತಿಳಿದಿರುವುದಿಲ್ಲ. ಅಂದರೆ ರೈಲ್ವೇ ನಿಲ್ದಾಣದಲ್ಲಿ ಅನೇಕ ಇಂಟ್ರೆಸ್ಟಿಂಗ್​ ಫ್ಯಾಕ್ಟ್​ಗಳು ನಡೆಯುತ್ತಿರುತ್ತದೆ. ಬನ್ನಿ ನಾವು ಚಲಿಸುತ್ತಿರುವ ರೈಲಿನ ಹೆಡ್ ಲೈಟ್‌ಗಳ ಬಣ್ಣಗಳ ಬಗ್ಗೆ ನೋಡೋಣ.

ರೈಲುಗಳಲ್ಲಿ ಎಷ್ಟು ಹೆಡ್ ಲೈಟ್ ಗಳಿವೆ, ಇದರ ಅರ್ಥವೇನು ಎಂಬ ಕುತೂಹಲ ನಿಮಗೆ ಇರಬಹುದು. ಹೌದು, ರೈಲಿನ ಲೋಕೋಮೋಟಿವ್‌ನಲ್ಲಿ ಮೂರು ವಿಧದ ಲೈಟ್‌ಗಳಿವೆ. ಈ ದೀಪಗಳಲ್ಲಿ ಮೊದಲ ಬಲ್ಬ್ ರೈಲಿನ ಹೆಡ್‌ಲೈಟ್ ಆಗಿದ್ದರೆ, ಉಳಿದ ಎರಡು ದೀಪಗಳು ಬಿಳಿ ಮತ್ತು ಇನ್ನೊಂದು ಕೆಂಪು ಬಣ್ಣದಲ್ಲಿದೆ. ಈ ದೀಪಗಳನ್ನು ಲೋಕೋಮೋಟಿವ್ ಸೂಚಕಗಳು ಎಂದು ಕರೆಯಲಾಗುತ್ತದೆ.

ಮೊದಲೆಲ್ಲಾ ರೈಲುಗಳು ಲೋಕೋಮೋಟಿವ್‌ಗಳಲ್ಲಿ, ಹೆಡ್‌ಲೈಟ್‌ಗಳನ್ನು ಮೇಲಕ್ಕೆ ಜೋಡಿಸಲಾಗುತ್ತಿತ್ತು. ಆದರೆ ಈಗಿನ ಹೊಸ ಲೋಕೋಮೋಟಿವ್‌ಗಳಲ್ಲಿ, ಈ ಹೆಡ್‌ಲೈಟ್‌ಗಳನ್ನು ಮಧ್ಯದಲ್ಲಿ ಬದಲಾಯಿಸಲಾಗಿದೆ.

ರೈಲಿನ ಲೊಕೊಮೊಟಿವ್ ಮುಂದಕ್ಕೆ ಚಲಿಸುವ ಬದಲು ದಿಕ್ಕಿನಲ್ಲಿ ಚಲಿಸುವ ಸಿಬ್ಬಂದಿಗೆ ತಿಳಿಸಲು ಕೆಂಪು ದೀಪವನ್ನು ಆನ್ ಮಾಡಲಾಗಿದೆ. ಅದೇ ರೀತಿ ಲೊಕೊಮೊಟಿವ್ ಮುಂದಕ್ಕೆ ಚಲಿಸಿದಾಗ ಬಿಳಿ ಲೈಟ್ ಅನ್ನು ಆನ್ ಮಾಡುತ್ತಾರೆ.

ಇನ್ನು ಲೋಕೋಮೋಟಿವ್‌ನ ಹೆಡ್‌ಲೈಟ್‌ಗಳು 24 V DC ಕರೆಂಟ್‌ನಿಂದ ಕಾರ್ಯನಿರ್ವಹಿಸುತ್ತದೆ. ಲೊಕೊ ಪೈಲಟ್‌ಗೆ ಹರಡಿರುವ ಹಳಿಗಳ ನ್ನು ಗಮನಿಸಲು ಸಹಕಾರಿಯಾಗಿದ್ದು, ಇನ್ನು ಈ ದೀಪಗಳು 350 ಮೀಟರ್ ವರೆಗೆ ಫೋಕಸ್ ನೀಡಲಾಗುವುದು. ಆದ್ದರಿಂದ ಲೊಕೊ ಪೈಲಟ್ ರಾತ್ರಿಯಲ್ಲಿ ನಿರ್ದಿಷ್ಟ ದೂರದವರೆಗೆ ಹಳಿಯನ್ನು ನೋಡಬಹುದಾಗಿದೆ.

ಇದನ್ನೂ ಓದಿ:Rakshita Suresh: ವಿದೇಶದಲ್ಲಿ ಭೀಕರ ರಸ್ತೆ ಅಪಘಾತಕ್ಕೊಳಗಾದ ಹೆಸರಾಂತ ಗಾಯಕಿ ರಕ್ಷಿತಾ ಸುರೇಶ್‌!

You may also like

Leave a Comment