Home » Kasaragod: ಸಚಿತಾ ರೈ ವಿರುದ್ಧ ಇನ್ನೊಂದು ಪ್ರಕರಣ ದಾಖಲು

Kasaragod: ಸಚಿತಾ ರೈ ವಿರುದ್ಧ ಇನ್ನೊಂದು ಪ್ರಕರಣ ದಾಖಲು

260 comments

Kasaragod: ಶೇಣಿ ಬಲ್ತಕಲ್ಲು ನಿವಾಸಿ ಸಚಿತಾ ರೈ (27) ವಿರುದ್ಧ ಬದಿಯಡ್ಕ ಪೊಲೀಸರು ಇನ್ನೊಂದು ಕೇಸು ದಾಖಲು ಮಾಡಿದ್ದಾರೆ.

ಪಳ್ಳತ್ತಡ್ಕ ಉಕ್ಕಿನಡ್ಕ ಬಳ್ಳಂಬೆಟ್ಟು ನಿವಾಸಿ ಶ್ವೇತಾ ಕುಮಾರಿ ನೀಡಿದ ದೂರಿನಂತೆ ಈ ಕೇಸು ದಾಖಲಾಗಿದೆ. ಕೇಂದ್ರೀಯ ವಿದ್ಯಾಲಯದಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಎರಡೂವರೆ ಲಕ್ಷ ರೂ. ಪಡೆದು ವಂಚನೆ ಮಾಡಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಈ ಮೂಲಕ ಸಚಿತಾ ರೈ ವಿರುದ್ಧ ದಾಖಲಾದ ಕೇಸುಗಳ ಸಂಖ್ಯೆ 8 ಕ್ಕೆ ಏರಿದೆ.

ವಂಚನೆ ಕೇಸು ದಾಖಲಾದ ಮೇಲೆ ಈಕೆ ತಲೆಮರೆಸಿಕೊಂಡಿದ್ದಾಳೆ. ಎರ್ನಾಕುಳಂನಲ್ಲಿ ತಲೆಮರೆಸಿಕೊಂಡಿರುವ ಸಚಿತಾ ಅವರು ಉಡುಪಿಯ ರಹಸ್ಯ ಕೇಂದ್ರವೊಂದರಲ್ಲಿ ಇರುವುದಾಗಿ ಪೊಲೀಸರಿಗೆ ಸುಳಿವು ದೊರಕಿದೆ ಎನ್ನಲಾಗಿದೆ. ಇದನ್ನು ಕೇರಳ ಪೊಲೀಸರು ಕರ್ನಾಟಕ ಪೊಲೀಸರಿಗೆ ತಿಳಿಸಿರುವುದಾಗಿ ವರದಿಯಾಗಿದೆ.

ಈಕೆಯ ವಿರುದ್ಧ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲೂ ಕೇಸು ದಾಖಲಾಗಿದೆ.

You may also like

Leave a Comment