Home » Kasaragodu : ಸೂಪರ್ ಮಾರ್ಕೆಟ್ ಒಳಗೆ ನುಗ್ಗಿದ ಕಾಡು ಹಂದಿ!!

Kasaragodu : ಸೂಪರ್ ಮಾರ್ಕೆಟ್ ಒಳಗೆ ನುಗ್ಗಿದ ಕಾಡು ಹಂದಿ!!

0 comments

Kasaragodu : ಕಾಡು ಹಂದಿಯೊಂದು ಸೂಪರ್ ಮಾರ್ಕೆಟ್ ಗೆ ನುಗ್ಗಿ ಆತಂಕ ಸೃಷ್ಟಿಸಿದಂತಹ ಘಟನೆ ಕಾಸರಗೋಡಿನ (Kasaragodu )ಕುಂಬಳೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಹೌದು, ಕುಂಬಳೆ ಪೇಟೆಯಲ್ಲಿರುವ ರ ಸೂಪರ್ ಪಾಯಿಂಟ್ ಹೈಪರ್ ಮಾರ್ಕೆಟ್ ನೊಳಗೆ ನಿನ್ನೆ ರಾತ್ರಿ 9 ಗಂಟೆಯ ವೇಳೆ ಕಾಡು ಹಂದಿ ಸೂಪರ್ ಮಾರ್ಕೆಟ್ ಗೆ ನುಗ್ಗಿದೆ. ಈ ಸಂದರ್ಭದಲ್ಲಿ ಮಾರ್ಕೆಟ್ ಒಳಗೆ ನೌಕರರು, ಗ್ರಾಹಕರ ಸಹಿತ ಹತ್ತು ಮಂದಿ ಇದ್ದರು.

ಅನಿರೀಕ್ಷಿತವಾಗಿ ಒಳಗೆ ಬಂದ ಗ್ರಾಹಕನನ್ನು ಕಂಡು ಗಲಿಬಿಲಿಗೊಂಡ ಸೂಪರ್ ಮಾರ್ಕೆಟ್ ಸಿಬ್ಬಂದಿ‌ ಹಾಗೂ ಇತರರು ಬೊಬ್ಬೆ ಹಾಕುವಷ್ಟರಲ್ಲಿ ಹಂದಿ ಹೊರಕ್ಕೆ ಓಡಿ ಹೋಗಿದೆ.

You may also like

Leave a Comment